News Kannada
Wednesday, October 05 2022

ಕರ್ನಾಟಕ

ವೀಳ್ಯದೆಲೆ ಬೆಳೆಗಾರರಿಂದ ಮೌನ ಪ್ರತಿಭಟನೆ - 1 min read

Photo Credit :

ವೀಳ್ಯದೆಲೆ ಬೆಳೆಗಾರರಿಂದ ಮೌನ ಪ್ರತಿಭಟನೆ

ಮಳವಳ್ಳಿ: ವೀಳೈದೆಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವೀಳ್ಯದೆಲೆ ಬೆಳೆಗಾರರ ಹೋರಾಟ ಸಮಿತಿ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಮೌನ ಹೋರಾಟ ನಡೆಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ತಾಲ್ಲೂಕಿನ ಬಾಳೆಹೊನ್ನಿಗ, ಡಿ.ಕೆ.ಹಳ್ಳಿ, ನಿಟ್ಟೂರು, ಹುಸ್ಕೂರು, ಗೊಲ್ಲರಹಳ್ಳಿ, ದಾಸನ ದೊಡ್ಡಿ, ಪಟ್ಟಣ ಸೇರಿದಂತೆ ಹಲವೆಡೆ ವೀಳ್ಯದೆಲೆ ಬೆಳೆದು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದ ಹಿಂದುಳಿದ ಗಂಗಾಮತಸ್ಥರ (ಬೆಸ್ತರು) ಜನಾಂಗದವರು ಈಗ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೋವಿಡ್-19ದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾದ ಬಳಿಕ ಬೆಳೆದ ವೀಳ್ಯದೆಲೆಗೆ ಬೆಲೆ ಇಲ್ಲದೆ ಮಾರುಕಟ್ಟೆ ಸಮಸ್ಯೆಯಿಂದ ನಷ್ಟಕ್ಕೆ ಒಳಗಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಅಲ್ಲದೇ ಬಹುತೇಕ ಮಂದಿ ಗುತ್ತಿಗೆ ಆಧಾರದ ಮೇಲೆ ಬೇರೆಯವರ ಜಮೀನನ್ನು ಪಡೆದು ಬೆಳೆ ಬೆಳೆಯುತ್ತಿರುವ ಕಾರಣ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಜೀವನೋಪಾಯಕ್ಕಾಗಿ ಸರ್ಕಾರ ಕೊರೊನಾ ಪ್ಯಾಕೇಜಿನಡಿ ಸೂಕ್ತ ಪರಿಹಾರವನ್ನು ಎಲ್ಲ ಬೆಳೆಗಾರರಿಗೆ ನೀಡಬೇಕು. ಬೆಳೆ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಸಹಾಯಧನ ಹಾಗೂ ಬ್ಯಾಂಕ್ ಸಾಲ ನೀಡಬೇಕು. ವೀಳ್ಯದೆಲೆ ಬೆಳೆಗೆ ಸಂಬಂಧಿಸಿದ ಪರಿಕರಗಳು ಮತ್ತು ಗೊಬ್ಬರ, ಔಷಧಿಗಳನ್ನು ಸಂಪರ್ಕವಾಗಿ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ತಹಸೀಲ್ದಾರ್ ಕೆ.ಚಂದ್ರಮೌಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಮಹೇಶ್‍ಕುಮಾರ್, ಶಂಕರ್ ಶಾಂತರಾಜ್, ಸ್ವಾಮಿ ನಾಗರಾಜ್, ವೆಂಕಟೇಶ್, ಕೃಷ್ಣ, ನಾಗರಾಜ್, ಸಿದ್ದರಾಜ್ ಭಾಗವಹಿಸಿದ್ದರು.

See also  ಪವಿತ್ರ ತೀರ್ಥೋದ್ಭವ, ದಸರಾ ಸಂದರ್ಭ ಕೋವಿಡ್ ನಿಯಮ ಪಾಲಿಸಲು ಜಿಲ್ಲಾಡಳಿತ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು