News Kannada
Tuesday, October 04 2022

ಕರ್ನಾಟಕ

ಏರಿಕೆಯಾಗುತ್ತಿದೆ ಸೋಂಕಿತರ ಸಂಖ್ಯೆ: ಆತಂಕ ಪಡದಂತೆ ಕೊಡಗು ಡಿಸಿ ಮನವಿ - 1 min read

Photo Credit :

ಏರಿಕೆಯಾಗುತ್ತಿದೆ ಸೋಂಕಿತರ ಸಂಖ್ಯೆ: ಆತಂಕ ಪಡದಂತೆ ಕೊಡಗು ಡಿಸಿ ಮನವಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಮೂರನೇ ಪ್ರಕರಣ ದೃಢಪಟ್ಟಿದ್ದರೂ, ಈ ವ್ಯಕ್ತಿ ಜಿಲ್ಲೆಯ ಯಾವುದೇ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬರದಿರುವುದರಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ 26 ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೋವಿಡ್ -19 ಸೋಂಕು ದೃಢಪಟ್ಟಿದ್ದು, ಇದು ಕೊಡಗು ಜಿಲ್ಲೆಯಲ್ಲಿ ಕಂಡು ಬಂದಿರುವÀ ಮೂರನೇ ಕೋವಿಡ್ -19 ಪ್ರಕರಣವಾಗಿದೆ. ಈ ವ್ಯಕ್ತಿ (ಪಿ.2003)ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮೇ 19ರ ಬೆಳಗ್ಗೆ 11ಗಂಟೆಗೆ ಮುಂಬೈಯ ಪನ್ವೇಲ್ ರೈಲ್ವೆ ನಿಲ್ದಾಣದಿಂದ ಮುಂಬೈ-ತಿರುವನಂತಪುರ (ರೈಲು ಸಂಖ್ಯೆ 02432, ಬೋಗಿ ಸಂಖ್ಯೆ 11, ಆಸನ ಸಂಖ್ಯೆ 24, 3ಎಸಿ) ವಿಶೇಷ ರೈಲಿನಲ್ಲಿ ಹೊರಟು ಮೇ 20ರ ಸಂಜೆ 5.15ಕ್ಕೆ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿಂದ ಖಾಸಗಿ ಇನ್ನೋವಾ ಟ್ಯಾಕ್ಸಿಯಲ್ಲಿ ಇತರ ಮೂವರೊಂದಿಗೆ ಹೊರಟು ರಾತ್ರಿ 9.15ಕ್ಕೆ ಸಂಪಾಜೆ ಗೇಟ್‍ನ ಚೆಕ್‍ಪೋಸ್ಟ್‍ಗೆ ಆಗಮಿಸಿದ್ದಾರೆ. ಅದೇ ಟ್ಯಾಕ್ಸಿಯಲ್ಲಿ ಅವರು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಬಂದು ರಾತ್ರಿ 10ಗಂಟೆಗೆ ದಾಖಲಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೋವಿಡ್ -19 ಸೋಂಕು ದೃಢÀಪಟ್ಟಿರುವ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಪ್ರಗತಿಯಲ್ಲಿದೆ. ಈ ವ್ಯಕ್ತಿಯು ಜಿಲ್ಲೆಯ ಯಾವುದೇ ವ್ಯಕ್ತಿಗಳೊಂದಿಗೆ  ಸಂಪರ್ಕಕ್ಕೆ ಬಂದಿರದ ಕಾರಣ ಹಾಗೂ ಯಾವುದೇ ಸ್ಥಳಕ್ಕೆ ಭೇಟಿ ನೀಡದ ಕಾರಣ ಕಂಟೈನ್‍ಮೆಂಟ್ ವಲಯ  ಘೋಷಿಸಿರುವುದಿಲ್ಲ. ಆದ್ದರಿಂದ ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. 

See also  ಸೋಂಕಿತ ಗರ್ಭಿಣಿಗೆ ಯಶಸ್ವಿ ಹೆರಿಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು