News Kannada
Sunday, October 02 2022

ಕರ್ನಾಟಕ

ಮಂಡ್ಯದಲ್ಲಿ ಹಳ್ಳಿಗರ ನಿದ್ದೆಗೆಡಿಸಿದ ಕೊರೋನಾ - 1 min read

Photo Credit :

ಮಂಡ್ಯದಲ್ಲಿ ಹಳ್ಳಿಗರ ನಿದ್ದೆಗೆಡಿಸಿದ ಕೊರೋನಾ

ಮಳವಳ್ಳಿ: ಕೊರೊನಾ ಸೋಂಕಿತರಿಂದ ಆತಂಕದಲ್ಲಿದ್ದ ಪಟ್ಟಣ ನಿಧಾನವಾಗಿ ಕೋವಿಡ್-19 ಮುಕ್ತವಾಗುತ್ತಿರುವ ಬೆನ್ನಲ್ಲೇ ಇದೀಗ ಕೆಲ ಗ್ರಾಮಾಂತರ ಪ್ರದೇಶದ ಮಹಿಳೆಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿರುವುದು ಹಳ್ಳಿಯ ಜನ ನಿದ್ದೆಗೆಡುವಂತೆ ಮಾಡಿದೆ.

ತಾಲೂಕಿನ ಕೊರೇಗಾಲ ಗ್ರಾಮದ ಮಹಿಳೆಯೊಬ್ಬರಿಗೆ ಕೋವಿಡ್-19 ದೃಢಪಟ್ಟಿದೆ. ಈ ಕಾರಣದಿಂದ ಮಹಿಳೆ ವಾಸವಿದ್ದ ಮನೆಯ 100 ಮೀಟರ್ ವ್ಯಾಪ್ತಿಯನ್ನು ತಾಲ್ಲೂಕು ಆಡಳಿತ ನಿರ್ಬಂಧಿತ ವಲಯವೆಂದು ಘೋಷಣೆ ಮಾಡಿದೆ. ಪಟ್ಟಣದ ಪೇಟೆ ಬೀದಿಯ ನಿವಾಸಿಯಾದ ಮಹಿಳೆಗೆ ಕ್ಯಾನ್ಸರ್ ರೋಗವಿದ್ದು, ಕೊರೇಗಾಲ ಗ್ರಾಮದ ತಾಯಿ ಮನೆಯಲ್ಲಿ ಇದ್ದರು. ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಯಲ್ಲಿ ಮಹಿಳೆಯ ಗಂಟಲ ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇದೀಗ ಮಹಿಳೆಯನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದವರ ಮೂಗಿನ ಮತ್ತು ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.

ಮಹಿಳೆಗೆ ಸೋಂಕು ಖಚಿತವಾಗುತ್ತಿದ್ದಂತೆ ಮನೆಯ ಸುತ್ತ-ಮುತ್ತಲಿನ 100 ವ್ಯಾಪ್ತಿಯನ್ನು ಕಟೈಂನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಗ್ರಾಮಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಭೇಟಿ ನೀಡಿ ಅಧಿಕಾರಿಗಳು ಜೊತೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ತಹಶೀಲ್ದಾರ್ ಕೆ.ಚಂದ್ರಮೌಳಿ, ತಾ.ಪಂ.ಇಒ ಬಿ.ಎಸ್.ಸತೀಶ್, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಡಿವೈಎಸ್ ಪಿ ಎಂ.ಜೆ.ಪೃಥ್ವಿ, ಪಿಎಸ್‍ಐ ಎಚ್.ಡಿ.ಮಂಜು ಇದ್ದರು.

See also  ಸೋಂಕಿತ ವಿಚಾರಣಾಧೀನ ಖೈದಿ ಮತ್ತೆ ಪರಾರಿಯಾದರೆ ಆಸ್ಪತ್ರೆ ಮುಖ್ಯಸ್ಥರ ಮೇಲೆ ಎಫ್ಐಆರ್  
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು