News Kannada
Sunday, September 25 2022

ಕರ್ನಾಟಕ

ಮತ್ಸ್ಯಕ್ರಾಂತಿ ಯೋಜನೆ ಅಡಿ ರಾಜ್ಯಕ್ಕೆ 4 ಸಾವಿರ ಕೋಟಿ ರೂ. ಅನುದಾನದ ನಿರೀಕ್ಷೆ: ಸಚಿವ ಶ್ರೀನಿವಾಸ ಪೂಜಾರಿ - 1 min read

Photo Credit :

ಮತ್ಸ್ಯಕ್ರಾಂತಿ ಯೋಜನೆ ಅಡಿ ರಾಜ್ಯಕ್ಕೆ 4 ಸಾವಿರ ಕೋಟಿ ರೂ. ಅನುದಾನದ ನಿರೀಕ್ಷೆ: ಸಚಿವ ಶ್ರೀನಿವಾಸ ಪೂಜಾರಿ

ಕಾರವಾರ: ಕೇಂದ್ರ ಸರಕಾರದ ಮತ್ಸ್ಯ ಕ್ರಾಂತಿ ಯೋಜನೆಯಡಿ ರಾಜ್ಯಕ್ಕೆ ಸುಮಾರು 4 ಸಾವಿರ ಕೋಟಿ ರೂ. ಅನುದಾನ ದೊರೆಯುವ ನಿರೀಕ್ಷೆ ಇದೆ. ಅನುದಾನವನ್ನು ವಿವಿಧ ಹಂತಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಬಳಸಲಾಗುವುದು ಎಂದು ಮೀನುಗಾರಿಕೆ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅಂಕೋಲಾ ತಾಲೂಕಿನ ಬೇಲಿಕೇರಿ ಗ್ರಾಮದ ಬ್ರೇಕ್ ವಾಟರ್ ನಿರ್ಮಾಣ ಕಾಮಗಾರಿ, ಕಾರವಾರದ ಮೀನುಮಾರುಟ್ಟೆ ನಿರ್ಮಾಣ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಮುಂದಿನ ಐದು ವರ್ಷಗಳಲ್ಲಿ ಮತ್ಸ್ಯ ಕ್ರಾಂತಿ ಯೋಜನೆಯಡಿ ಒಟ್ಟು 20 ಸಾವಿರ ಕೋಟಿ ರೂ. ಅನುದಾನ ನೀಡಲಿದ್ದು ಅದರಲ್ಲಿ ರಾಜ್ಯಕ್ಕೆ ಮೂರೂವರೆ ಸಾವಿರ ಕೋಟಿ ರೂ. ದೊರೆಯಲಿದೆ. ಸರ್ಕಾರ ಐದು ವರ್ಷ ಅವಧಿಗೆ ಮೀನುಗಾರಿಕೆ ಅಭಿವೃದ್ಧಿಗೆ ಬೇಕಾದ 3.50 ಸಾವಿರ ಕೋಟಿಯ ಶಾಶ್ವತ ಯೋಜನೆಗಳನ್ನು ರೂಪಿಸಲಿದೆ . ಈ ಬಗ್ಗೆ ಮೀನುಗಾರ ಮುಖಂಡರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

140 ಕೋಟಿ ವೆಚ್ಚದಲ್ಲಿ ಬೆಳಂಬಾರದಲ್ಲಿ ಮೀನುಗಾರಿಕಾ ಜಟ್ಟಿ ನಿರ್ಮಾಣ ಮಾಡುವ ಪ್ರಸ್ತಾವವನ್ನು ಸಚಿವ ಸಂಪುಟದ ಗಮನಕ್ಕೆ ತಂದು ಅನುಮೋದನೆ ತರಲಾಗುವುದು. ಶಾಸಕಿ ರೂಪಾಲಿ ನಾಯ್ಕ ಅವರ ಪ್ರಸ್ತಾಪದ ಮೇರೆಗೆ ಗಾಬಿತಕೇಣಿಯ 5.50 ಕೋಟಿ ವೆಚ್ಚದ ಅಲೆ ತಡೆಗೋಡೆ ಕಾಮಗಾರಿಯೂ ಸೇರಿದಂತೆ ಸುಮಾರು 17.50 ಕೋಟಿ ಕಾಮಗಾರಿಗೆ ಮೀನುಗಾರಿಕಾ ಇಲಾಖೆಯಿಂದ ಮಂಜೂರಾತಿ ಆದೇಶ ನೀಡಲಾಗಿದೆ. ಮೀನುಗಾರಿಕೆಗೆ ಅಗತ್ಯ ಇರುವ ಮೂಲಸೌಲಭ್ಯ ಒದಗಿಸಲಾಗುತ್ತದೆ ಎಂದರು.

ಉಳ್ಳಾಲದಿಂದ ಕಾರವಾರದವರೆಗಿನ 320 ಕಿ.ಮೀ. ಸಮುದ್ರ ಕಿನಾರೆಗೆ ಶಾಶ್ವತ ತಡೆಗೋಡೆ ನಿರ್ಮಿಸಬೇಕೆಂಬ ಪ್ರಸ್ತಾಪ ಬಹಳ ಹಿಂದಿನಿಂದಲೂ ಇದೆ. ಏಳು ವರ್ಷಗಳ ಹಿಂದೆಯೇ 925 ಕೋಟಿ ನಬಾರ್ಡ್ ನಿಂದ ನೀಡಲು ಯೋಚಿಸಲಾಗಿತ್ತು. ಆದರೆ, ಶಾಶ್ವತವಾಗಿ ಮಾಡಲು ಈಗ ಈ ವೆಚ್ಚ ಹೆಚ್ಚಾಗಿದೆ. ಯೋಜನೆಯನ್ನು ಮರುಪರಿಶೀಲಿಸಲಾಗುವುದು ಎಂದರು.

2017- 18, 2018- 19ನೇ ಸಾಲಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 50 ಸಾವಿರಕ್ಕೆ ಸೀಮಿತಗೊಳಿಸಿ, ಸಾಲ ಪಡೆದಿರುವ 23 ಸಾವಿರ ಮೀನುಗಾರರಿಗೆ 60 ಕೋಟಿ ರೂ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನ್ನಾ ಮಾಡಿದ್ದಾರೆ. ಆ ಹಣವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಎಲ್ಲರ ಖಾತೆಗೆ ಜಮೆ ಮಾಡುವ ಕಾರ್ಯ ನಡೆಯುತ್ತಿದೆ. ಮೂರ್ನಾಲ್ಕು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ‌. ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಸಾಲಮನ್ನಾವನ್ನು ಸಂಪೂರ್ಣ ಅನುಷ್ಠಾನಕ್ಕೆ ತರಲಾಗಿದೆ‌ಎಂದರು.

2016- 17, 2017- 18, 2018- 19ನೇ ಸಾಲಿನ ಉಳಿತಾಯ ಪರಿಹಾರ ಯೋಜನೆ ಬಂದಿಲ್ಲವೆಂದು ಮೀನುಗಾರರು ದೂರಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಹಾಗೂ ಉಳಿದ ಭಾಗವನ್ನು ರಾಜ್ಯ ಹಣ ನೀಡಲಿದೆ. ಈ ಬಾರಿ ಹಣ ಬಿಡುಗಡೆ ಆಗಿರಲಿಲ್ಲ. ಆದರೆ, ತಿಂಗಳ ಹಿಂದೆ ಕೇಂದ್ರ ಸರ್ಕಾರ ತನ್ನ ಪಾಲಿನ 500 ಕೋಟಿಯನ್ನು ಬಿಡುಗಡೆ ಮಾಡಿದ್ದು, ರಾಜ್ಯ ಸರ್ಕಾರ ಕೂಡ ನಿನ್ನೆ ಹಣ ಬಿಡುಗಡೆ ಮಾಡಿದೆ. ಒಂದು ವಾರಗಳಲ್ಲಿ ಮೀನುಗಾರರ ಹಣ ಜಮೆ ಆಗಲಿದೆ‌. ಡೀಸೆಲ್‌ಸಬ್ಸಿಡಿಯ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದ್ದೇವೆ, ಜನವರಿ, ಫೆಬ್ರುವರಿ, ಮಾರ್ಚ್ ತಿಂಗಳ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ ಎಂದರು.

See also  ಅಮಿತ್ ಷಾ ಆಟ ಕರ್ನಾಟಕದಲ್ಲಿ ನಡೆಯಲ್ಲ: ಸಿದ್ದರಾಮಯ್ಯ

ಕಾರವಾರದ ಮೀನು ಮಾರುಕಟ್ಟೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು 400 ಮೀನುಗಾರ ಮಹಿಳೆಯರು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆಲ ಭಾಗದ ನಿರ್ಮಾಣದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಸಧ್ಯಕ್ಕೆ 180 ಜನರಿಗೆ ಅವಕಾಶ ನೀಡಲಾಗುವುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು