News Kannada
Sunday, September 25 2022

ಕರ್ನಾಟಕ

ಧಾರ್ಮಿಕ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆಯಾಗಿ ಸಾಮಾಜಿಕ ಅಂತರಕ್ಕೆ ಸೂಚನೆ - 1 min read

Photo Credit :

ಧಾರ್ಮಿಕ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆಯಾಗಿ ಸಾಮಾಜಿಕ ಅಂತರಕ್ಕೆ ಸೂಚನೆ

ಹಾಸನದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ಹೋಗುವ ಪ್ರತಿಯೊಬ್ಬ ವ್ಯಕ್ತಿಯು ಕಡ್ಡಾಯವಾಗಿ ಮಾಸ್ಕ್ ನ್ನು ಧರಿಸಿರಬೇಕು. ದೇವಸ್ಥಾನ, ಚರ್ಚ್ ಮತ್ತು ಮಸೀದಿಯ ಬಳಿ ಸ್ಯಾನಿಟೈಜರ್ ನ್ನು ಭಕ್ತಾಧಿಗಳು ಉಪಯೋಗಿಸಲು ಅನುಕೂಲ ಮಾಡಿಕೊಡಬೇಕು. ಭಕ್ತಾಧಿಗಳಿಗೆ ಧಾರ್ಮಿಕ ಕೇಂದ್ರ ವತಿಯಿಂದ ಮುನ್ನೇಚ್ಚರಿಕೆ ಕ್ರಮವಾಗಿ ಥಾರ್ಮಲ್ ಸ್ಕ್ಯಾನಿಂಗ್, ಕೈ ತೊಳೆಯುವುದಕ್ಕೆ ಅವಕಾಶ ಕಲ್ವಿಸಿಕೊಡುವುದು.

ಭಕ್ತಾಧಿಗಳು ಕನಿಷ್ಠ 6 ಅಡಿ ಅಂತರವನ್ನು ಸಾಮಾಜಿಕ ಅಂತರವನ್ನು ಕಾಪಾಡುವ ಬಗ್ಗೆ ಸೂಚಿಸಲು ಸೂಚನಾ ಫಲಕವನ್ನು ಅಳವಡಿಸಿರಬೇಕು. ಧಾರ್ಮಿಕ ಕೇಂದ್ರದ ಒಳಭಾಗದಲ್ಲಿ ಬಾಕ್ಸ್‍ಗಳನ್ನು ಗುರುತಿಸಿ ಸದರಿ ಸ್ಥಳದಲ್ಲಿ ನಿಂತುಕೊಂಡು ಅಥವಾ ಕುಳಿತುಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು. ಯಾವುದೇ ರೀತಿಯ ತೀರ್ಥ, ಪ್ರಸಾದವನ್ನು ನೀಡಬಾರದು ಮತ್ತು ಯಾವುದೇ ತರಹದ ಭಕ್ತಾಧಿಗಳು ದೇವಸ್ಥಾನದ ಒಳಭಾಗದಲ್ಲಿ ವಸ್ತುಗಳನ್ನು ಮುಟ್ಟಬಾರದು. ಧಾರ್ಮಿಕ ಸ್ಥಳದಲ್ಲಿ ಕಡ್ಡಾಯವಾಗಿ ಹೊರಭಾಗ ಮತ್ತು ಒಳಭಾಗದಲ್ಲಿ ಸಿ.ಸಿ ಕ್ಯಾಮರಾವನ್ನು ಅಳವಡಿಸಿರಬೇಕು.

ಸಾಮಾಜಿಕ ಅಂತರವನ್ನು ಕಾಪಾಡುವ ಬಗ್ಗೆ ಧಾರ್ಮಿಕ ಕೇಂದ್ರದ ಮುಖ್ಯಸ್ಥರು ಸ್ವಯಂ ಸೇವಕರನ್ನು ನಿಯೋಜಿಸಿಕೊಂಡು ಭಕ್ತಾಧಿಗಳಿಗೆ ಸೂಕ್ತ ತಿಳುವಳಿಕೆಯನ್ನು ನೀಡುವುದು. ಸಾಮಾಜಿಕ ಅಂತರವನ್ನು ಕಾಪಾಡದೇ ನಿರ್ಲಕ್ಷತೆ ತೋರಿಸಿದ ಬಗ್ಗೆ ಕಂಡು ಬಂದಲ್ಲಿ ಅಂತಹ ಧಾರ್ಮಿಕ ಕೇಂದ್ರದ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. 

ಒಳಗೆ ಮತ್ತು ಹೊರಗೆ ಹೋಗಲು ಪ್ರತ್ಯೇಕವಾದ ದ್ವಾರವನ್ನು ತೆರೆಯಬೇಕು. ಒಂದೇ ದ್ವಾರದಲ್ಲಿ ಒಳಗೆ ಬರುವ ಮತ್ತು ಹೊರಗೆ ಹೋಗುವ ವ್ಯವಸ್ಥೆಯನ್ನು ಮಾಡಬಾರದು. ಯಾವುದೇ ಉತ್ಸವ, ಮೆರವಣಿಗೆ ಮತ್ತು ಜಾತ್ರಾ ಮಹೋತ್ಸವಕ್ಕೆ ಅವಕಾಶವಿರುವುದಿಲ್ಲ.  

ಹೋಟಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಅನುಸರಿಸಬೇಕಾದ ಕ್ರಮಗಳು: ಹೋಟಲ್‍ಗೆ ಬರುವ ಪ್ರತಿಯೊಬ್ಬ ಗ್ರಾಹಕರು ವ್ಯಕ್ತಿಯು ಕಡ್ಡಾಯವಾಗಿ ಮಾಸ್ಕ್‍ನ್ನು ಧರಿಸಿರಬೇಕು. ಅಂತಹ ವ್ಯಕ್ತಿಯನ್ನು ಮಾತ್ರ ಹೋಟಲ್‍ಗೆ ಪ್ರವೇಶಿಸುವಂತೆ ಸೂಚಿಸುವುದು. ಸ್ಯಾನಿಟೈಜರ್‍ನ್ನು ಮತ್ತು ಕೈ ತೊಳೆದುಕೊಳ್ಳುವ ಬಗ್ಗೆ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಥಾರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡುವುದು. 

ಹೋಟಲ್ ಮತ್ತು ರೆಸ್ಟೋರೆಂಟ್‍ಗಳಿಗೆ ಲಭ್ಯವಿರುವ ಟೇಬಲ್‍ಗಳಿಗೆ ಅನುಗುಣವಾಗಿ 50% ರಷ್ಟು ಮಾತ್ರ ಗ್ರಾಹಕರು ಕುಳಿತುಕೊಳ್ಳುವ ಬಗ್ಗೆ ವ್ಯವಸ್ಥೆ ಮಾಡುವುದು. (ಉದಾ: ಎರಡು ಜನರು ಕೂರುವ ಸ್ಥಳದಲ್ಲಿ ಒಬ್ಬರು ಮತ್ತು ಮೂವರು ಕೂರುವ ಸ್ಥಳದಲ್ಲಿ ಇಬ್ಬರು ಕೂರುವ ರೀತಿಯಲ್ಲಿ ವ್ಯವಸ್ಥೆ ಮಾಡುವುದು) ಬಫೆ ಪದ್ದತಿಯಿದ್ದರೆ ಗ್ರಾಹಕರು ನಿಂತುಕೊಳ್ಳಲು ಬಾಕ್ಸ್‍ಗಳ ಮಾರ್ಕ್ ಮಾಡುವುದು. ಹೋಟಲ್‍ನಲ್ಲಿ ಕಡ್ಡಾಯವಾಗಿ ಹೊರಭಾಗ ರಸ್ತೆ ಕಾಣಿಸುವಂತೆ ಮತ್ತು ಒಳಭಾಗದಲ್ಲಿ ಸಿ.ಸಿ ಕ್ಯಾಮರಾವನ್ನು ಅಳವಡಿಸಿರಬೇಕು.

ಸಾಮಾಜಿಕ ಅಂತರವನ್ನು ಕಾಪಾಡುವ ಬಗ್ಗೆ ಹೋಟಲ್ ಮಾಲೀಕರು ಸ್ವಯಂ ಸೇವಕರನ್ನು ನಿಯೋಜಿಸಿಕೊಂಡು ಗ್ರಾಹಕರಿಗೆ ಸೂಕ್ತ ತಿಳುವಳಿಕೆಯನ್ನು ನೀಡುವುದು. ಸಾಮಾಜಿಕ ಅಂತರವನ್ನು ಕಾಪಾಡದೇ ನಿರ್ಲಕ್ಷತೆ ತೋರಿಸಿದ ಬಗ್ಗೆ ಕಂಡು ಬಂದಲ್ಲಿ ಅಂತಹ ಹೋಟಲ್ ಮತ್ತು ರೆಸ್ಟೋರೆಂಟ್ ಮಾಲೀಕರ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು.  ಒಳಗೆ ಮತ್ತು ಹೊರಗೆ ಹೋಗಲು ಪ್ರತ್ಯೇಕವಾದ ದ್ವಾರವನ್ನು ತೆರೆಯಬೇಕು. ಒಂದೇ ದ್ವಾರದಲ್ಲಿ ಒಳಗೆ ಬರುವ ಮತ್ತು ಹೊರಗೆ  ಹೋಗುವ ವ್ಯವಸ್ಥೆಯನ್ನು ಮಾಡಬಾರದು.

See also  ಮದ್ದೂರಲ್ಲಿ ರಾಜಕೀಯ ದ್ವೇಷಕ್ಕೆ ಹಲ್ಲೆ

ಶಾಪಿಂಗ್ ಮಾಲ್‍ಗಳು ಅನುಸರಿಸಬೇಕಾದ ಕ್ರಮಗಳು: ಮಾಲ್‍ಗೆ ಬರುವ ಪ್ರತಿಯೊಬ್ಬ ಗ್ರಾಹಕರು ವ್ಯಕ್ತಿಯು ಕಡ್ಡಾಯವಾಗಿ ಮಾಸ್ಕ್‍ನ್ನು ಧರಿಸಿರಬೇಕು. ಅಂತಹ ವ್ಯಕ್ತಿಯನ್ನು ಮಾತ್ರ ಒಳಗೆ ಪ್ರವೇಶಿಸುವಂತೆ ಸೂಚಿಸುವುದು. ಸ್ಯಾನಿಟೈಜರ್‍ನ್ನು ಮತ್ತು ಕೈ ತೊಳೆದುಕೊಳ್ಳುವ ಬಗ್ಗೆ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಥಾರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡುವುದು. 

ಮಾಲ್ ಒಳಭಾಗದಲ್ಲಿ ಇರುವ ವಿಸ್ತೀರ್ಣಕ್ಕೆ ಅನುಗುಣವಾಗಿ 50% ರಷ್ಟು ಮಾತ್ರ ಗ್ರಾಹಕರು ವ್ಯಾಪಾರ ಮಾಡಲು ವ್ಯವಸ್ಥೆ ಮಾಡುವುದು. ಮಾಲ್‍ನಲ್ಲಿ ಕಡ್ಡಾಯವಾಗಿ ಹೊರಭಾಗ ರಸ್ತೆ ಕಾಣಿಸುವಂತೆ ಮತ್ತು ಒಳಭಾಗದಲ್ಲಿ ಸಿ.ಸಿ ಕ್ಯಾಮರಾವನ್ನು ಅಳವಡಿಸಿರಬೇಕು. ಸಾಮಾಜಿಕ ಅಂತರವನ್ನು ಕಾಪಾಡುವ ಬಗ್ಗೆ ಮಾಲಿನ ವ್ಯವಸ್ಥಾಪಕರು ಸ್ವಯಂ ಸೇವಕರನ್ನು ನಿಯೋಜಿಸಿಕೊಂಡು ಗ್ರಾಹಕರಿಗೆ ಸೂಕ್ತ ತಿಳುವಳಿಕೆಯನ್ನು ನೀಡುವುದು.

ಸಾಮಾಜಿಕ ಅಂತರವನ್ನು ಕಾಪಾಡದೇ ನಿರ್ಲಕ್ಷತೆ ತೋರಿಸಿದ ಬಗ್ಗೆ ಕಂಡು ಬಂದಲ್ಲಿ ಅಂತಹ ಮಾಲ್‍ನ ವ್ಯವಸ್ಥಾಪಕರ ವಿರುದ್ದ  ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಒಳಗೆ ಮತ್ತು ಹೊರಗೆ ಹೋಗಲು ಪ್ರತ್ಯೇಕವಾದ ದ್ವಾರವನ್ನು ತೆರೆಯಬೇಕು. ಒಂದೇ ದ್ವಾರದಲ್ಲಿ ಒಳಗೆ ಬರುವ ಮತ್ತು ಹೊರಗೆ  ಹೋಗುವ ವ್ಯವಸ್ಥೆಯನ್ನು ಮಾಡಬಾರದು. 

ಮಾಲ್ ಒಳಭಾಗದಲ್ಲಿ ಗ್ರಾಹಕರು ಸಾಮಾಜಿಕ ಅಂತರವನ್ನು ಕಾಪಾಡುವ ಬಗ್ಗೆ ನಿಗಾ ವಹಿಸುವುದು ಮತ್ತು ಯಾವುದೇ ಕಾರಣಕ್ಕೂ ಗುಂಪುಗೂಡದಂತೆ ಸೂಕ್ತ ತಿಳುವಳಿಯನ್ನು ನೀಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು