News Kannada
Tuesday, September 27 2022

ಕರ್ನಾಟಕ

ಕೆಆರ್‍ಎಸ್ ಜಲಾಶಯ ನಿರ್ಮಾಣ ವಿಶ್ವೇಶ್ವರಯ್ಯನವರ ಪರಿಕಲ್ಪನೆಯಲ್ಲ - 1 min read

Photo Credit :

ಕೆಆರ್‍ಎಸ್ ಜಲಾಶಯ ನಿರ್ಮಾಣ ವಿಶ್ವೇಶ್ವರಯ್ಯನವರ ಪರಿಕಲ್ಪನೆಯಲ್ಲ

ಮಂಡ್ಯ: ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯ ಸರ್ ಎಂ.ವಿಶ್ವೇಶ್ವರಯ್ಯನವರ ಪರಿಕಲ್ಪನೆಯಲ್ಲ. ಅದು ಚೀಫ್ ಇಂಜಿನಿಯರ್ ಕ್ಯಾಪ್ಟನ್ ನಿಕೋಲಸ್ ಡಾಸ್ ಪರಿಕಲ್ಪನೆ ಎಂದು ಇತಿಹಾಸ ತಜ್ಞ ಪಿ.ವಿ.ನಂಜರಾಜ ಅರಸು ಹೇಳಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಆರ್‍ಎಸ್ ಮೂಲ ಯೋಜನೆಯನ್ನು 1908ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಚೀಫ್ ಇಂಜಿನಿಯರ್ ಆಗಿದ್ದ ಕ್ಯಾಪ್ಟನ್ ನಿಕೋಲಸ್ ಡಾಸ್ ರೂಪಿಸಿದರು. ಕೆಆರ್‍ಎಸ್ ಕಟ್ಟಲು ಮದ್ರಾಸ್ ಸರ್ಕಾರ ಆಕ್ಷೇಪವೆತ್ತಿದ ಕಾರಣ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿಲ್ಲ ಎಂದು ವಿವರಿಸಿದರು.

ಕೃಷ್ಣರಾಜಸಾಗರ ಜಲಾಶಯದ 70 ಅಡಿಯವರೆಗಿನ ಕಲ್ಪನೆ ನಿಕೋಲಸ್ ಡಾಸ್ ಅವರದ್ದೇ ಆಗಿದ್ದು, ಅಲ್ಲಿಂದ 124 ಅಡಿಯವರೆಗಿನ ಪರಿಷ್ಕೃತ ಯೋಜನೆಯಷ್ಟೇ ವಿಶ್ವೇಶ್ವರಯ್ಯನವರದು. ಅಲ್ಲದೆ, ಅಣೆಕಟ್ಟೆ ನಿರ್ಮಾಣಕ್ಕೆ ಜಾಗ ಗುರುತು ಮಾಡಿದ್ದೂ ಸಹ ಡಾಸ್ ಅವರೇ ಎಂದು ಹೇಳಿದರು.

ವಿಶ್ವೇಶ್ವರಯ್ಯನವರು ಕೆಆರ್‍ಎಸ್‍ಗಾಗಿ ಸೇವೆ ಸಲ್ಲಿಸಿದ್ದು ಕೇವಲ ಒಂದು ವರ್ಷ ಮಾತ್ರ. ಆ ನಂತರ 1911ರಿಂದ 32ರವರೆಗೆ ನಡೆದ ಕೆಆರ್‍ಎಸ್ ಕಾಮಗಾರಿಯಲ್ಲಿ ಕರ್ಪೂರ ಶ್ರೀನಿವಾಸರಾವ್, ಬಿ.ಸುಬ್ಬರಾವ್, ಕೃಷ್ಣ ಅಯ್ಯಂಗಾರ್, ಜಾನ್‍ಬೋರ್, ಕೆ.ಆರ್.ಶೇಷಾಚಾರ್ ಮತ್ತು ಎಸ್.ಶ್ರೀನಿವಾಸ ಅಯ್ಯರ್ ಎಂಬ 7 ಮುಖ್ಯ ಇಂಜಿನಿಯರ್‍ ಗಳು ಕೆಲಸ ಮಾಡಿದ್ದಾರೆ ಎಂದರು.

ಈ ನಡುವೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಾಲ್ವಡಿಯವರು 1918ರಲ್ಲಿ ನೇಮಿಸಿದ ಮಿಲ್ಲರ್ ಆಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಶ್ವೇಶ್ವರಯ್ಯನವರು ದಿವಾನ್ ಹುದ್ದೆಗೆ ರಾಜೀನಾಮೆ ನೀಡಿದರು. ಆ ನಂತರ ಸರ್ ಎಂ.ಕಾಂತರಾಜ ಅರಸ್, ಸರ್ ಎ.ಆರ್.ಬ್ಯಾನರ್ಜಿ, ಸರ್ ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು ದಿವಾನರಾಗಿ ಸೇವೆ ಸಲ್ಲಿಸಿದ್ದಾರೆ. ಕೆಆರ್‍ಎಸ್ ಆರಂಭದ ದಿನಗಳಲ್ಲಿ ಆನಂದರಾವ್ ಕೂಡ ದಿವಾನರಾಗಿ ಸೇವೆ ಸಲ್ಲಿಸಿದ್ದು, ಇವರೆಲ್ಲರೂ ಸರ್ ಎಂವಿ ಅವರಂತೆಯೇ ಪ್ರಾಮಾಣಿಕರು, ಶ್ರಮ ಜೀವಿಗಳಾಗಿದ್ದಾರೆ. ವಿಶ್ವೇಶ್ವರಯ್ಯನವರಿಗೆ ಎಷ್ಟು ಗೌರವ ಸಲ್ಲಬೇಕೋ ಅದು ಇವರಿಗೂ ಸಲ್ಲಬೇಕಲ್ಲವೇ ಎಂದು ಪ್ರಶ್ನಿಸಿದರು.

ಕೆಆರ್‍ಎಸ್‍ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಕ್ಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಿಸುವುದು ಮಹಾರಾಜರಿಗೆ ಮಾಡುವ ದೊಡ್ಡ ಅವಮಾನ. ವಿಶ್ವೇಶ್ವರಯ್ಯ್ಯನವರು ಅತ್ಯುತ್ತಮ ತಾಂತ್ರಿಕ ತಜ್ಞರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರಿಗೆ ಭಾರತರತ್ನವಷ್ಟೇ ಸಾಲದು. ವಿಶ್ವರತ್ನ ಕೊಡಲಿ, ನೊಬೆಲ್ ಪ್ರಶಸ್ತಿಗೂ ಶಿಫಾರಸು ಮಾಡಲಿ. ಅದನ್ನು ನಾವು ಬೆಂಬಲಿಸುತ್ತೇವೆ. ಕೆಆರ್‍ಎಸ್ ಬಿಟ್ಟು ಬೇರೆಲ್ಲಾದರೂ ಸರ್ದಾರ್ ವಲ್ಲಭಬಾಯಿ ಪಟೇಲರಿಗಿಂತ ಎತ್ತರದ ಪ್ರತಿಮೆ ಸ್ಥಾಪಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಕೆಆರ್‍ಎಸ್‍ನಲ್ಲಿ ಮಾತ್ರ ಅವರ ಪ್ರತಿಮೆ ಬೇಡ. ಸರ್‍ಎಂವಿ ಪ್ರತಿಮೆ ಸ್ಥಾಪಿಸುವುದಾದರೆ ಅವರ ಜೊತೆಗೆ ಕೆಆರ್‍ಎಸ್‍ಗೆ ದುಡಿದ ಐದು ದಿವಾನರ ಚಿಕ್ಕ ಪ್ರತಿಮೆಗಳನ್ನು ಸ್ಥಾಪಿಸಲಿ ಎಂದು ಒತ್ತಾಯಿಸಿದರು.

ನಾಲ್ವಡಿಯವರಿಗೆ ಕೇಂದ್ರ ಸರ್ಕಾರವೂ ಅವಮಾನ ಮಾಡಿದೆ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿಯವರ ಹೆಸರು ಸೂಚಿಸುವಂತೆ ಸಂಸದರು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಅದನ್ನು ವಾಪಸ್ ಕಳುಹಿಸಿರುವ ಕೇಂದ್ರಸರ್ಕಾರ ಪರ್ಯಾಯ ಹೆಸರನ್ನು ಸೂಚಿಸುವಂತೆ ತಿಳಿಸಿದೆ. ಕೇಂದ್ರವೂ ಸಹ ಮಹಾರಾಜರನ್ನು ಕಡೆಗಣಿಸಿದೆ ಎಂದು ದೂಷಿಸಿದರು.

See also  ಮಳೆ ಹಾನಿಗೆ ತಕ್ಷಣ ಪರಿಹಾರ ಒದಗಿಸಬೇಕು: ಚಕ್ರವರ್ತಿ ಮೋಹನ್ ಸೂಚನೆ

ಕೇಂದ್ರದ ಈ ನಡೆಯನ್ನು ಮೈಸೂರು ರಾಜವಂಶಸ್ಥರೂ ಖಂಡಿಸಲಿಲ್ಲ. ಸಂಸದರೂ ವಿರೋಧ ಮಾಡಲಿಲ್ಲ. ಇದಕ್ಕೆ ಬದಲಾಗಿ ಮೈಸೂರು ರಾಜವಂಶಸ್ಥರು ಜಯಚಾಮರಾಜೇಂದ್ರ ಒಡೆಯರ್ ಹೆಸರಿಡುವಂತೆ ಮನವಿ ಮಾಡಿದ್ದು ನಾಲ್ವಡಿ ಅವರಿಗೆ ವಂಶಸ್ಥರು ಮಾಡಿದ ದೊಡ್ಡ ಅವಮಾನ ಎಂದು ಟೀಕಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು