News Kannada
Thursday, October 06 2022

ಕರ್ನಾಟಕ

ಮಂಜಿನ ನಗರಿಯ ಐತಿಹಾಸಿಕ ಕೋಟೆಗೆ ಕಾಯಕಲ್ಪ ನೀಡುತ್ತಿರುವ ಪುರಾತತ್ವ ಇಲಾಖೆ - 1 min read

Photo Credit :

ಮಂಜಿನ ನಗರಿಯ ಐತಿಹಾಸಿಕ ಕೋಟೆಗೆ ಕಾಯಕಲ್ಪ ನೀಡುತ್ತಿರುವ ಪುರಾತತ್ವ ಇಲಾಖೆ

ಮಡಿಕೇರಿ ; ದಕ್ಷಿಣ ಕಾಶ್ಮೀರ, ಮಂಜಿನ ನಗರಿ, ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಈ ನಗರವು ಇಂದು ರಾಜ್ಯದ ಪ್ರಸಿದ್ದ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ ಅಷ್ಟೇ ಅಲ್ಲ ಸಿಲಿಕಾನ್‌ ಸಿಟಿಗೆ ಅತ್ಯಂತ ಹತ್ತಿರದಲ್ಲಿರುವ ಗಿರಿಧಾಮವೂ ಹೌದು. ನಗರದಲ್ಲಿ ಎಲ್ಲೇ ಹೋದರೂ ಎತ್ತರದ ಪ್ರದೇಶದಲ್ಲಿರುವ ಈ ಐತಿಹಾಸಿಕ ಕೋಟೆ ಕಣ್ಣಿಗೆ ಬೀಳುತ್ತದೆ. ೫ ವರ್ಷಗಳ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿ ಕೊಡಗಿನ ಎಲ್ಲ ಸರ್ಕಾರೀ ಕಚೇರಿಗಳೂ ಇಲ್ಲಿಯೇ ಕಾರ್ಯ ನಿರ್ವಹಿಸುತಿದ್ದವು. ನಂತರ ಈ ಕೋಟೆಯ ಉಸ್ತುವಾರಿ ಹೊಂದಿರುವ ಪ್ರಾಚ್ಯವಸ್ತು ಇಲಾಖೆಯು ಕಚೇರಿಗಳನ್ನು ತೆರವು ಮಾಡಲು ಸೂಚಿಸಿದ ನಂತರ ಎಲ್ಲ ಕಚೇರಿಗಳೂ ಒಂದೊಂದಾಗಿ ಬೇರೆ ಕಡೆಗೆ ಸ್ಥಳಾಂತರಗೊಂಡವು .

ಇದೀಗ ಶಿಥಿಲಗೊಂಡಿರುವ ಕೋಟೆಯೊಳಗಿನ ಅರಮನೆಯನ್ನು ಪ್ರಾಚ್ಯವಸ್ತು ಇಲಾಖೆ ದುರಸ್ಥಿಗೊಳಿಸುತ್ತಿದೆ. , ಸುಮಾರು ೨೦ ಸಾವಿರ ಚದರ ಅಡಿಗಳಷ್ಟು ವಿಸ್ತಾರವಾಗಿರುವ ಮಹಡಿಯನ್ನೂ ಒಳಗೊಂಡ ಈ ಕೋಟೆಯೊಳಗಿರುವ ಅರಮನೆ ತನ್ನ ಸ್ವಂತಿಕೆಯನ್ನು ಕಳೆದುಕೊಂಡಿದ್ದು ತೀವ್ರ ನಿರ್ಲಕ್ಷ್ಯದ ಕಾರಣದಿಂದ ಶಿಥಿಲಾವಸ್ಥೆ ತಲುಪಿತ್ತು. ಒಂದು ಆಕರ್ಷಣೀಯ ಪ್ರವಾಸಿ ತಾಣವಾದ ಕೋಟೆ ಹಾಗು ಕೋಟೆಯ ಒಳಗಿರುವ ಜೀವಂತವಾಗಿರುವಂತೆ ಕಾಣುವ ಎರಡು ಆನೆಗಳ ಶಿಲ್ಪ, ಕೋಟೆ ಗಣಪತಿ ದೇವಾಲಯ, ಮರಣ ಬಾವಿ, ವಸ್ತುಸಂಗ್ರಹಾಲಯ, ಬೃಹತ್‌ ಗೋಡೆಗಡಿಯಾರ, ಜೈಲು, ತೋಪುಗಳನ್ನಿಡಲು ನಿರ್ಮಿಸಿದ್ದ ಗವಿಗಳು, ಹೀಗೆ ಹತ್ತು ಹಲವು ರೀತಿಯ ಆಕರ್ಷಣೆಗಳು ಇದ್ದು ಪ್ರವಾಸಿಗರು ಇವೆಲ್ಲವನ್ನು ಕುತೂಹಲದಿಂದ ವೀಕ್ಷಿಸುತಿದ್ದರು. ನಂತರ ಅಕರ್ಷಣೆ ಕಳೆದುಕೊಳ್ಳುತ್ತಾ ಹೋಯಿತು, ಈ ಕುರಿತಾಗಿ ಹಲವು ಬಾರಿ ವರದಿ ಮಾಡಿದ್ದರೂ ಕೂಡ ಅದಕ್ಕೆ ಸ್ಪಂದನೆ ದೊರೆಯುತ್ತಿರಲಿಲ್ಲ. ಜನರು ಸರ್ಕಾರದ ಈ ಮೌನಕ್ಕೆ ಸಿಡಿಮಿಡಿಗೊಂಡು ಹಿಡಿಶಾಪ ಹಾಕುತ್ತಿದ್ದರು.

ಇತಿಹಾಸದ ಕುರುಹಾಗಿ ಉಳಿದಿರುವ ಕೋಟೆ ಹಾಗು ಅರಮನೆಯನ್ನು ರಕ್ಷಣೆ ಮತ್ತು ಅಭಿವೃದ್ಧಿ ಮಾಡಬೇಕೆಂಬ ಕೂಗು ಕೇಳಿಬರುತ್ತಲೇ ಇದ್ದವು. ಕೆಲ ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ್‌ ತಿವಾರಿಯವರು ಈ ವಿಷಯದ ಕುರಿತಾಗಿ ಹೆಚ್ಚಿನ ಒಲವು ತೋರಿದ್ದರು. ೨೦೧೪ ರಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವಲಯದ ಅಧೀಕ್ಷಕರಾದ ಟಿ.ಎಂ.ಕೇಶವ ಹಾಗು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು.ಈ ಕುರಿತಾಗಿ ಯೋಜನೆಯನ್ನು ತಯಾರಿಸುವಂತೆ ಒತ್ತಡ ತಂದಿದ್ದರು, ಆದರೆ ಅವರು ವರ್ಗಾವಣೆಗೊಂಡ ನಂತರ ಈ ಕಾರ್ಯ ನೆನೆಗುದಿಗೆ ಬಿದ್ದಿತ್ತು.

ಇದೀಗ ಇಲಾಖೆಯು ಕೋಟೆಯೊಳಗಿನ ಅರಮನೆಗೆ ಕಾಯಕಲ್ಪ ನೀಡುವ ಕಾರ್ಯಕ್ಕೆ ಮುಂದಾಗಿದ್ದು ಅರಮನೆ ಇದೀಗ ಮತ್ತೆ ಸ್ವಂತಿಕೆಯತ್ತ ಮರಳುತ್ತಿರುವುದು ಪ್ರವಾಸಿಗರಿಗೆ ಸಂತಸದ ಸಂಗತಿ. ಇದೀಗ ಅರಮನೆಗೆ ಕಾಯಕಲ್ಪ ಕಲ್ಪಿಸುವ ಕಾರ್ಯ ಆರಂಭವಾಗಿದ್ದು ಈಗಾಗಲೇ ಅರಮನೆಯ ಹಳತಾದ ಮರಮುಟ್ಟು, ಛಾವಣಿ, ಹೆಂಚುಗಳನ್ನು ಬದಲಾಯಿಸುವ ಕಾರ‍್ಯ ನಡೆಯುತ್ತಿದ್ದು ಸರ್ಕಾರಿ ಕಛೇರಿಗಳಿಗಾಗಿ ಮಾಡಿಕೊಂಡಿದ್ದ ಮಾರ್ಪಾಟುಗಳನ್ನು ಸಂಪೂರ್ಣ ಕಳಚಿ ಹಿಂದೆ ಇದ್ದ ಸ್ವಸ್ಥಿತಿಗೆ ತರುವ ಕಾರ್ಯಗಳು ಆರಂಭವಾಗಿವೆ. ಈಗಾಗಲೇ ಭಾಗಶಃ ಕೆಲಸ ಪೂರ್ಣಗೊಂಡಿದ್ದು ಇನ್ನುಳಿದ ಕೆಲಸಗಳನ್ನು ಮುಗಿಸಲು ಮಳೆ ಅಡಚಣೆ ಆಗಿದೆ.

See also  ಮಳೆಹಾನಿ ಬಗ್ಗೆ ನಿಗಾ ವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಅಂತು ಮುಂದಿನ ಎರಡು ತಿಂಗಳಿನಲ್ಲಿ ಐತಿಹಾಸಿಕ ಕೋಟೆ ತನ್ನ ಗತ ವೈಭವವನ್ನು ಪಡೆಯಲಿದ್ದು ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗುತ್ತಿದೆ..

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು