News Kannada
Thursday, September 29 2022

ಕರ್ನಾಟಕ

ಮರುಹುಟ್ಟು ಪಡೆದ ಹೊನ್ನಾವರದ ಐತಿಹಾಸಿಕ ಕಲ್ಯಾಣಿ - 1 min read

Photo Credit :

ಮರುಹುಟ್ಟು ಪಡೆದ ಹೊನ್ನಾವರದ ಐತಿಹಾಸಿಕ ಕಲ್ಯಾಣಿ

ಹಾಸನ: ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಹಸಿರುಭೂಮಿ ಪ್ರತಿಷ್ಠಾನ ಆರಂಭಿಸಿದ ಕಲ್ಯಾಣಿಗಳ ಅಭಿವೃದ್ಧಿ ಕಾರ್ಯ ಮುಂದುವರೆಯುತ್ತಲೇ ಸಾಗುತ್ತಿದ್ದು, ಈಗಾಗಲೇ ಹಲವು ಕಲ್ಯಾಣಿಗಳು ಸ್ವಚ್ಛಗೊಂಡು ಜೀವಜಲದ ನೆಲೆಯಾಗಿರುವುದು ಸಂತಸ ತಂದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಹಲವು ಶತಮಾನಗಳನ್ನು ಕಂಡ ಕಲ್ಯಾಣಿಗಳಿದ್ದು, ಅವು ಹಲವು ಕಾರಣದಿಂದ ನಿರ್ವಹಣೆಯಿಲ್ಲದೆ ಮುಚ್ಚಿ ಹೋಗಿದ್ದವು. ಅವುಗಳನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಗೊಳಿಸುವ ಕಾರ್ಯಕ್ಕೆ ಹಸಿರುಭೂಮಿ ಪ್ರತಿಷ್ಠಾನ ಮುಂದಾಗಿತ್ತು. ಇವರ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದರಿಂದ ಮುಚ್ಚಿ ಹೋಗಿದ್ದ ಕಲ್ಯಾಣಿಗಳಿಗೆ ಜೀವ ಬಂದಂತಾಗಿದೆ.

ಮೂರು ವರ್ಷಗಳ ಹಿಂದೆ ಹಸಿರುಭೂಮಿ ಪ್ರತಿಷ್ಠಾನವು ಸರಕಾರಿ ಇಂಜಿನೀಯರಿಂಗ್  ಕಾಲೇಜು ಹಾಗೂ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಎನ್ ಎಸ್ ಎಸ್ ತಂಡ, ಹಸಿರುಭೂಮಿ ಬಳಗದ ಶ್ರಮದಾನದಿಂದ ಪುನಶ್ಚೇತನಗೊಳಿಸಿದ್ದ  ಹಾಸನ ತಾಲ್ಲೂಕಿನ  ಹೊನ್ನಾವರ ಗ್ರಾಮದ ಬೃಹತ್ ಐತಿಹಾಸಿಕ ಕಲ್ಯಾಣಿ, ಸಮರ್ಪಕ ನಿರ್ವಹಣೆ ಇಲ್ಲದೆ ಮತ್ತೆ ಪೊದೆ, ಗಿಡಗಂಟಿಗಳಿಂದ ಕೂಡಿತ್ತು.

ಇದೀಗ ಹಸಿರುಭೂಮಿ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿಗಳಾದ ಡಾ.ಮಂಜುನಾಥ್ ಅವರ ಪ್ರಯತ್ನದಿಂದ ಹಾಗೂ ಅಲ್ಲಿನ ಪಿಡಿಓ ನಾಗ ಮೀನಾಕ್ಷಿಯವರ ಬೆಂಬಲದೊಂದಿಗೆ ಗ್ರಾಮಸ್ಥರ ಮನವೊಲಿಸಿ ಶ್ರಮದಾನದ ಮೂಲಕ ಕಲ್ಯಾಣಿಯ ಪುನಶ್ಚೇತನ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

ಕಲ್ಯಾಣಿಯನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ರಮೇಶ್, ಎಎನ್ ಎಂ  ಕುಮಾರಿ, ಆಶಾ ಕಾರ್ಯಕರ್ತೆ  ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ಪಂಚಾಯತ್ ಸಿಬ್ಬಂದಿ, ಅನುಗವಳ್ಳಿ, ಕೋಡಿಹಳ್ಳಿ ಹಾಗೂ ಹೊನ್ನಾವರ  ಮಹಿಳಾ ಸ್ವಸಹಾಯ ಸಂಘದ ಕಾರ್ಯಕರ್ತೆಯರು, ಗ್ರಾಪಂ ಅಧ್ಯಕ್ಷ ಶಿವಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಸ್ವಾಮಿಗೌಡ,  ಗ್ರಾಮಸ್ಥರಾದ ಕಾಂತರಾಜು, ಶೇಖರ್ ಹಾಗು ಅಕ್ಕಪಕ್ಕದ ಗ್ರಾಮಸ್ಥರು, ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಅಪ್ಪಾಜಿಗೌಡ, ಟ್ರಸ್ಟಿಗಳಾದ  ಪುಟ್ಟಯ್ಯ ಹಾಗೂ ರೂಪ ಹಾಸನ ಮೊದಲಾದವರು ಶ್ರಮದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಒಟ್ಟಾರೆ ಎಲ್ಲರ ಸಹಕಾರದಿಂದ ಕಲ್ಯಾಣಿಯೊಂದು ಪುನಶ್ಚೇತನಗೊಂಡಿದ್ದು, ಮಳೆಗಾಲದಲ್ಲಿ ನೀರು ಇದರಲ್ಲಿ ಶೇಖರಣೆಯಾಗುವುದರಿಂದ ಅಂತರ್ಜಲ ವೃದ್ಧಿಗೆ ಸಹಕಾರವಾಗುವುದರಲ್ಲಿ ಎರಡು ಮಾತಿಲ್ಲ.

See also  ತೋಟದಲ್ಲಿ ಗಾಂಜಾ ಗಿಡಗಳು: ಮಾಲು ಸಹಿತ ವ್ಯಕ್ತಿಯ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು