News Kannada
Sunday, September 25 2022

ಕರ್ನಾಟಕ

ಕಲಬುರ್ಗಿಯಲ್ಲಿ ಕೈಮಗ್ಗ ನೇಕಾರರಿಗೆ 2000 ರೂ.ಗಳ ಆರ್ಥಿಕ ನೆರವು: ಅರ್ಜಿ ಆಹ್ವಾನ - 1 min read

Photo Credit :

ಕಲಬುರ್ಗಿಯಲ್ಲಿ ಕೈಮಗ್ಗ ನೇಕಾರರಿಗೆ 2000 ರೂ.ಗಳ ಆರ್ಥಿಕ ನೆರವು: ಅರ್ಜಿ ಆಹ್ವಾನ

ಕಲಬುರಗಿ: ಕೋರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಜಾರಿಗೊಳಿಸಿರುವ ಲಾಕ್‍ಡೌನ್ ಪರಿಣಾಮದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ ನೇಕಾರರ ಸಮ್ಮಾನ ಯೋಜನೆಯಡಿ ಸರ್ಕಾರವು 2,000 ರೂ.ಗಳ ಆರ್ಥಿಕ ನೆರವನ್ನು ನೀಡುತ್ತಿದೆ. ಇದಕ್ಕಾರ್ಗಿ ಅರ್ಹ ಕೈಮಗ್ಗ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಕೈಮಗ್ಗ ನೇಕಾರರು ಕೈಮಗ್ಗ ನೇಕಾರಿಕೆಯಲ್ಲಿ ತೊಡಗಿರಬೇಕು. 4ನೇ ರಾಷ್ಟ್ರೀಯ ಕೈಮಗ್ಗ ಗಣತಿಯಲ್ಲಿ ನೊಂದಾಯಿಸಿರಬೇಕು. ನೇಕಾರರಿಗೆ 2,000 ರೂ.ಗಳ ಅರ್ಥಿಕ ನೆರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿರುವುದರಿಂದ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ವಿವರವನ್ನು ಕಡ್ಡಾಯವಾಗಿ ಒದಗಿಸಬೇಕು.

 

ಅರ್ಹ ಕೈಮಗ್ಗ ನೇಕಾರರು ಈ ಕೆಳಕಂಡ ಕೈಮಗ್ಗ ನೇಕಾರರ ಸಹಕಾರ ಸಂಘದಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಫಲಾನುಭವಿಯ ಆಧಾರ್ ಕಾರ್ಡನ ಪ್ರತಿ, ರೇಷನ್ ಕಾರ್ಡ್ ಪ್ರತಿ, ಆಧಾರ ಲಿಂಕ್ ಮಾಡಿರುವ ವೈಯಕ್ತಿಕ ನೇಕಾರರ ಉಳಿತಾಯ ಖಾತೆಯ ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್‍ಪೋರ್ಟ ಸೈಜ್ ಅಳತೆಯ ಪೋಟೋ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಆಯಾ ಸಂಘಗಳ ಕಾರ್ಯದರ್ಶಿಗಳಿಗೆ ಅರ್ಜಿ 2020ರ ಜೂನ್ 26 ರೊಳಗಾಗಿ ಸಲ್ಲಿಸಬೇಕು. ನಂತರ ದಾಖಲಾತಿಗಳನ್ನು ಪರಿಶೀಲಿಸಿ ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅಳವಡಿಸಲಾಗುತ್ತದೆ.

 

ಕಲಬುರಗಿ ತಾಲೂಕಿನ ಹೊನ್ನಳ್ಳಿಯ ಕುರಿ ಸಂಗೋಪನಾ ಹಾಗೂ ಉಣ್ಣೆ ಉತ್ಪಾದಕರ ನೇಕಾರರ ಸಹಕಾರ ಸಂಘ ನಿಯಮಿತ, ಹೊನ್ನಳ್ಳಿಯ ಗುಲಬರ್ಗಾ ತಾಲೂಕಾ ಹತ್ತಿ ಕೈಮಗ್ಗ ನೇಕಾರ ಸಹಕಾರ ಸಂಘ ನಿಯಮಿತ, ಚಿತ್ತಾಪೂರ ತಾಲೂಕಿನ ತಾಲೂಕು ಕುರಿ ಸಂಗೋಪನಾ ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ, ಚಿಂಚೋಳಿ ತಾಲೂಕಿನ ಗಡಿಕೇಶ್ವರದ ಶ್ರೀ ರೇವಣಸಿದ್ದೇಶ್ವರ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದಕರ ನೇಕಾರರ ಸಹಕಾರ ಸಂಘ ನಿಯಮಿತ, ಚಿಂಚೋಳಿ ತಾಲೂಕಿನ ಶ್ರೀ ಮೈಲಾರಲಿಂಗೇಶ್ವರ ಕುರಿ ಸಂಗೋಪನಾ ಹಾಗೂ ಉಣ್ಣೆ ಕೈಮಗ್ಗ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ, ಚಿಂಚೋಳಿ ತಾಲೂಕಿನ ತಾಲೂಕು ಮಟ್ಟದ ಶ್ರೀ ಕನಕದಾಸರ ಉಣ್ಣೆ ಮತ್ತು ಕೈಮಗ್ಗ ಉದ್ಯೋಗ ನೇಕಾರರ ಸಹಕಾರ ಸಂಘ, ಸೇಡಂ ತಾಲೂಕಿನ ಅರೆಬೊಮ್ಮನಹಳ್ಳಿಯ ಶ್ರೀ ರೇವಣಸಿದ್ದೇಶ್ವರ ಕುರಿ ಸಂಗೋಪನಾ ಮತ್ತು ಉಣ್ಣೆ ಉತ್ಪಾದಕರ ನೇಕಾರ ಸಹಕಾರ ಸಂಘ, ಸೇಡಂ ತಾಲೂಕಿನ ಅಳ್ಳೊಳ್ಳಿ ಕುರಿ ಸಂಗೋಪನಾ ಹಾಗೂ ಉಣ್ಣೆ ಉತ್ಪಾದಕರ ನೇಕಾರರ ಸಹಕಾರ ಸಂಘ, ಸೇಡಂ ತಾಲೂಕಿನ ನೀಲಹಳ್ಳಿಯ ಶ್ರೀ ಬೀರಲಿಂಗೇಶ್ವರ ಉಣ್ಣೆ ಕೈಮಗ್ಗ ನೇಕಾರ ಸಹಕಾರ ಸಂಘ ನಿಯಮಿತ.

 

ಅಫಜಲಪುರ ತಾಲೂಕಿನ ಸಾಗನೂರ ಕುರಿ ಸಂಗೋಪನಾ ಉಣ್ಣೆ ಕೈಮಗ್ಗ ನೇಕಾರರ ಸಹಕಾರ ಸಂಘ, ಅಫಜಲಪುರ ತಾಲೂಕಿನ ಹವಳಗಾ ಶ್ರೀ ಕನಕದಾಸ ಕುರಿ ಸಂಗೋಪನಾ ಹಾಗೂ ಉತ್ಪಾದಕರ ನೇಕಾರರ ಸಹಕಾರ ಸಂಘ ನಿಯಮಿತ, ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿರುವ ಜೇವರ್ಗಿ ತಾಲೂಕಾ ಕುರಿ ಸಂಗೋಪನಾ ಹಾಗೂ ಉಣ್ಣೆ ಉತ್ಪಾದಕರ ನೇಕಾರರ ಸಹಕಾರ ಸಂಘ ನಿಯಮಿತ ಹಾಗೂ ಜೇವರ್ಗಿ ತಾಲೂಕಿನ ಕೂಟನೂರದ ಮಹಾತ್ಮಾ ಗಾಂಧಿ ಗ್ರಾಮೀಣ ಅಭಿವೃಧ್ದಿ ನೇಕಾರರ ಉತ್ಪಾದಕರ ಸಹಕಾರ ಸಂಘ ನಿಯಮಿತ ಹಾಗೂ ಆಳಂದ ತಾಲೂಕಿನ ಮಾದನಹಿಪ್ಪರಗಾ ಹತ್ತಿ ಕೈಮಗ್ಗ ನೇಕಾರರ ಉತ್ಪಾದಕರ ಮಾರಾಟ ಸಹಕಾರ ಸಂಘ ನಿಯಮಿತ.

See also  ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯವಾಗಬೇಕು: ಸಮ್ಮೇಳನಾಧ್ಯಕ್ಷ ಕಿಗ್ಗಾಲು ಗಿರೀಶ್

ಕೈಮಗ್ಗ ನೇಕಾರರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೊಠಡಿ ಸಂಖ್ಯೆ 15, 2 ನೇ ಮಹಡಿ, ಮಿನಿ ವಿಧಾನ ಸೌಧ, ಕಲಬುರಗಿ-585102 ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278629, ಮೊಬೈಲ್ ಸಂಖ್ಯೆ 9008941033/ 9900391684 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು