News Kannada
Tuesday, September 27 2022

ಕರ್ನಾಟಕ

ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆ: 12 ಪ್ರದೇಶಗಳು ಸೀಲ್ ಡೌನ್ - 1 min read

Photo Credit :

ಕೊಡಗಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆ: 12 ಪ್ರದೇಶಗಳು ಸೀಲ್ ಡೌನ್

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು, ಮೂವರು ಗುಣಮುಖರಾಗಿದ್ದಾರೆ. 23 ಮಂದಿಯನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ 12 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಅಶ್ವಿನಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ತಜ್ಞ ವೈದ್ಯರೂ ಸೇರಿದಂತೆ ಮೂವರು ವೈದ್ಯರು, ಎಲೆಕ್ಟ್ರಿಷಿಯನ್, ಸ್ವಾಗತಕಾರಿಣಿ, ವೈದ್ಯರ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ 7 ಮಂದಿಗೆ ಸೋಂಕು ತಗುಲಿದೆ.

ಸದ್ಯಕ್ಕೆ ಅಶ್ವಿನಿ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದ್ದು, ತುರ್ತು ಚಿಕಿತ್ಸೆಗೆ ಮಾತ್ರ ತೆರೆಯಲಾಗಿದೆ. ಪ್ರಸ್ತುತ 8 ರೋಗಿಗಳು ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಯಾವ ವೈದ್ಯರೂ, ವೈದ್ಯಕೀಯ ಸಿಬ್ಬಂದಿಗೂ ಸೋಂಕು ತಗುಲಿಲ್ಲ. ಎಲ್ಲಾ ಸೋಂಕುಪೀಡಿತ ರೋಗಿಗಳನ್ನು ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಸ್ಸಾಂನಿಂದ ಬಂದ ನಿವೃತ್ತ ಸೈನಿಕರೋರ್ವರು ಮುಳ್ಳೂರು ಗ್ರಾಮಕ್ಕೆ ಬಂದಿದ್ದು ಇವರಲ್ಲಿಯೂ ಸೋಂಕು ಪತ್ತೆಯಾಗಿದೆ. ಅಂತೆಯೇ  ಶಿರಂಗಾಲದ ಹಣ್ಣಿನ ವ್ಯಾಪಾರಿಯ ಸಂಪರ್ಕದಲ್ಲಿದ್ದ ಕಾರ್ ಮೆಕ್ಯಾನಿಕ್  ಸೇರಿದಂತೆ ಇಬ್ಬರಿಗೆ ಸೋಂಕು ಬಂದಿದೆ. ದೊಡ್ಡಳ್ಳಿ ಗ್ರಾಮದ ಮಹಿಳೆಯ ಪತಿ, ಪತಿಯ ಸಹೋದರನಿಗೂ ಸೋಂಕು ತಗುಲಿದೆ.

ಬಿಟ್ಟಂಗಾಲದಲ್ಲಿ ಹೋಂಸ್ಟೇ ನಡೆಸುತ್ತಿದ್ದ 70 ವರ್ಷದ ಮಹಿಳೆಗೂ ಸೋಂಕು ತಗುಲಿದ್ದು, ಹೋಂಸ್ಟೇಗೆ ಬಂದ ಪವಾಸಿಗರಿಂದಲೂ ಸೋಂಕು ತಗುಲಿರುವ ಸಾಧ್ಯತೆಯಿದೆ. ಕುಶಾಲನಗರದ ಮೆಡಿಕಲ್ ಶಾಪ್ ಮಾಲೀಕನ ಮಗನಿಗೂ ಸೋಂಕು ತಗುಲಿದ್ದು, ರಥಬೀದಿಯನ್ನು ಕಂಟೈನ್ ಮೆಂಟ್ ಜೋನ್ ಮಾಡಲಾಗಿದೆ ಎಂದರು.

ವೈದ್ಯರ ಕೊರತೆಯಿಲ್ಲ, ಬ್ಯಾಕಪ್ ತಂಡವನ್ನು ಇದೀಗ ಸಿದ್ದಗೊಳಿಸಲಾಗಿದೆ. ಆಸ್ಪತ್ರೆ, ಹಾಸಿಗೆಯ ಕೊರತೆಯೂ ಇಲ್ಲ. ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೊವಿಡ್ ಆಸ್ಪತ್ರೆಯಲ್ಲಿ 250 ಹಾಸಿಗೆಗಳ ವ್ಯವಸ್ಥೆಯಿದೆ. ವಿರಾಜಪೇಟೆ, ಸೋಮವಾರಪೇಟೆಗಳಲ್ಲಿಯೂ ಆಸ್ಪತ್ರೆಯಲ್ಲಿ ಅಗತ್ಯವಿದ್ದರೆ ಹೆಚ್ಚಿನ ಹಾಸಿಗೆಗಳನ್ನು ವ್ಯವಸ್ಥೆಗೊಳಿಸಲು ಆರೋಗ್ಯ ಇಲಾಖೆ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೀಲ್ ಡೌನ್ ಪ್ರದೇಶಗಳು

ಕೋರೋನಾ ಸೋಂಕು ಪೀಡಿತರು ಇದ್ದ ಮಡಿಕೇರಿಯ ಪುಟಾಣಿ ನಗರ, ಡೈರಿ ಫಾರಂ, ಮಂಗೇರಿರ ಮುತ್ತಣ್ಣ ಸರ್ಕಲ್, ಶ್ರೀಓಂಕಾರೇಶ್ವರ  ದೇವಾಲಯ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ರಸ್ತೆ, ಮಡಿಕೇರಿ ಬಳಿಯ ಕಗ್ಗೋಡ್ಲು, ತಾಳತ್ತಮನೆ, ಕುಶಾಲನಗರದ ರಥಬೀದಿ, ವಿರಾಜಪೇಟೆ ಬಳಿಯ ಬಿಟ್ಟಂಗಾಲ, ಶಿರಾಗಂಲ, ದೊಡ್ಡಳ್ಳಿ, ಮುಳ್ಳೂರು, ಬಳಗುಂದ  ಸೇರಿದಂತೆ 12 ಪ್ರದೇಶಗಳನ್ನು ಸಂಪೂರ್ಣವಾಗಿ 28 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶಗಳಿಗೆ ತೆರಳುವ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ವಾಹನ, ಜನ ಸಂಚಾರ ನಿಷೇಧಿಸಲಾಗಿದೆ. ಸೀಲ್ ಡೌನ್ ಪ್ರದೇಶಗಳಲ್ಲಿರುವ ಜನ 28 ದಿನಗಳ ಕಾಲ ಹೊರಬರುವಂತಿಲ್ಲ. ಒಳಹೋಗುವಂತೆಯೂ ಇಲ್ಲ ಎಂದರು. 

 24 ಗಂಟೆಗಳ ಕಾಲ ಗಂಟಲ ದ್ರವ ಮಾದರಿ ಪರೀಕ್ಷೆಯ ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದ್ದು, ಅನೇಕರ ವರದಿಗಳು ಬರಲು ಬಾಕಿಯಿದೆ. ಒಂದು ದಿನದಲ್ಲಿ 380 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಈವರೆಗೂ 6600 ಗಂಟಲ ದ್ರವ ಮಾದರಿ ಪರೀಕ್ಷೆಗೊಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

See also  ಖಾಸಗಿ ಬಸ್ ಪಲ್ಟಿ: ಆರು ಮಂದಿ ಸ್ಥಳದಲ್ಲೇ ದುರ್ಮರಣ

ಲಾಕ್ ಡೌನ್ ಬಗ್ಗೆ ಸರ್ಕಾರವೇ ನಿರ್ಧರಿಸಬೇಕು. ಕೊಡಗಿನಲ್ಲಿ ರೆಸಾರ್ಟ್, ಹೋಂಸ್ಟೇ, ಲಾಡ್ಜ್ ಗಳನ್ನು 21 ದಿನ ಮುಚ್ಚಲು ಸ್ವಯಂಪ್ರೇರಿತರಾಗಿ ಅಸೋಸಿಯೇಷನ್ ಪ್ರಮುಖರೇ ನಿರ್ಧರಿಸಿದ್ದಾರೆ ಎಂದರು.

 ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಆರೋಗ್ಯಾಧಿಕಾರಿ ಡಾ.ಮೋಹನ್ ಹಾಗೂ ಡಾ.ಮಹೇಶ್ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು