News Kannada
Tuesday, October 04 2022

ಕರ್ನಾಟಕ

ಅನುಗವಳ್ಳಿ ಕಲ್ಯಾಣಿ ಪುನಶ್ಚೇತನ ಕಾರ್ಯ ಪ್ರಗತಿಯಲ್ಲಿ…. - 1 min read

Photo Credit :

ಅನುಗವಳ್ಳಿ ಕಲ್ಯಾಣಿ ಪುನಶ್ಚೇತನ ಕಾರ್ಯ ಪ್ರಗತಿಯಲ್ಲಿ....

ಹಾಸನ: ಹಸಿರುಭೂಮಿ ಪ್ರತಿಷ್ಠಾನದ ಪ್ರೇರಣೆಯಿಂದ, ಹಾಸನ ತಾಲ್ಲೂಕಿನ ಹೊನ್ನಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಅನುಗವಳ್ಳಿ ಬೃಹತ್ ಐತಿಹಾಸಿಕ ಕಲ್ಯಾಣಿಯ ಮರು ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರಮದಾನದಲ್ಲಿ ಪಾಲ್ಗೊಂಡು  ತಮ್ಮ ಗ್ರಾಮದ ಕಲ್ಯಾಣಿಯ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.

ಮೊದಲಿಗೆ ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಹಸಿರುಭೂಮಿ ಪ್ರತಿಷ್ಠಾನದ ವತಿಯಿಂದ ಮಾಸ್ಕ್ ಗಳನ್ನು ವಿತರಿಸುವ ಮೂಲಕ ಕೆಲಸ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ  ಕಲ್ಯಾಣಿ ಸುತ್ತಲಿನ ಗಿಡಗಂಟಿಗಳನ್ನು ಕಡಿದು, ಕಳೆ ಕಿತ್ತು ಸ್ವಚ್ಛಗೊಳಿಸಲಾಯಿತು. ಮೂವತ್ತು ವರ್ಷಗಳಿಂದ ಹೂಳು ತೆಗೆದಿಲ್ಲವಾದ್ದರಿಂದ ಈ ಬಾರಿ ಜಲದ ಕಣ್ಣು ಕಾಣುವವರೆಗೆ ಹೂಳು ತೆಗೆಯುವುದಾಗಿ ಶ್ರಮದಾನದಲ್ಲಿ ಭಾಗವಹಿಸಿದವರು ತಿಳಿಸಿದ್ದಾರೆ.

ಕಲ್ಯಾಣಿ ಮಧ್ಯದಲ್ಲಿ ಶಿವಲಿಂಗವಿದ್ದು ಎಚ್ಚರಿಕೆಯಿಂದ ಸುತ್ತಲ ಭಾಗದಲ್ಲಿ ಕೆಲಸವನ್ನು ಮಾಡಲಾಗುತ್ತಿದೆ. ಅಂತರ್ಜಲದ ಒರತೆ ಕಾಣುವವರೆಗೂ ಹೂಳೆತ್ತುವುದಲ್ಲದೆ, ಕಲ್ಯಾಣಿ ಸುತ್ತಲ ಗುಂಡುತೋಪಿನಲ್ಲಿ ಅಂದಾಜು ನೂರು ಗಿಡಗಳನ್ನು ಬೆಳೆಯಬಹುದಾಗಿದ್ದು, ಊರ ಹಿರಿಯರೊಂದಿಗೆ ಮಾತಾಡಿ ಬೇಲಿ ವ್ಯವಸ್ಥೆ ಮಾಡಿಸಿ, ಗಿಡ ನೆಟ್ಟು ತೋಪು ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಗ್ರಾಪಂ ಪಿಡಿಓ ನಾಗಮೀನಾಕ್ಷಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ಡಾ.ಮಂಜುನಾಥ್, ಚಿನ್ನೇನಹಳ್ಳಿ ಸ್ವಾಮಿ ಟ್ರಸ್ಟಿಗಳಾದ ವೆಂಕಟೇಗೌಡರು, ರೂಪಹಾಸನ, ಪುಟ್ಟಯ್ಯ, ಅಧ್ಯಕ್ಷರಾದ ಅಪ್ಪಾಜಿಗೌಡ ಶ್ರಮದಾನ, ದಾಖಲೀಕರಣ, ಮಾರ್ಗದರ್ಶನ ಮಾಡಿದ್ದಾರೆ.

ನಿಟ್ಟೂರು ಪಿಡಿಓ ಮಲ್ಲೇಶಪ್ಪ, ಗ್ರಾಪಂ ಅಧ್ಯಕ್ಷರಾದ ಪಿ.ಎಂ.ಶಿವಸ್ವಾಮಿ, ಸದಸ್ಯರಾದ ಸುಮ, ತಾಪಂ ಸದಸ್ಯರಾದ ಭಾಗ್ಯ, ಮಹಿಳಾ ಸ್ವಸಹಾಯ ಸಂಘದ ಮುಖ್ಯಸ್ಥರಾದ ವಾಣಿ, ಅಶ್ವಿನಿ, ಮಮತ, ಮಂಜುಳಾ ಮುಂತಾದವರು ಜನಸಂಘಟನೆ ಮಾಡಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

See also  ಸಾಲಕ್ಕೆ ಹೆದರಿ ಟ್ಯಾಕ್ಸಿ ಚಾಲಕ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು