News Kannada
Sunday, October 02 2022

ಕರ್ನಾಟಕ

ಅಕ್ರಮ ಮದ್ಯ ಸಾಗಾಟ ಪತ್ತೆ: ಓರ್ವನ ಸೆರೆ - 1 min read

Photo Credit :

ಅಕ್ರಮ ಮದ್ಯ ಸಾಗಾಟ ಪತ್ತೆ: ಓರ್ವನ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಹಾಗೂ ಅಕ್ರಮವಾಗಿ ದಾಸ್ತಾನಿಸಿರಿಸಿದ್ದ  ಭಾರೀ ಪ್ರಮಾಣದ ಮದ್ಯವನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದು, ಬಂದ್ಯೋಡು ನಿವಾಸಿಯೋರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಬಂದ್ಯೋಡು ವೀರನಗರದ ಅಜಯ್ (38) ಎಂದು ಗುರುತಿಸಲಾಗಿದೆ.

ಶನಿವಾರ ಬೆಳಗ್ಗೆ ಕುಂಬಳೆ  ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಈ ದಾರಿಯಾಗಿ ಬಂದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಪರಾರಿಯಾಗಿದ್ದು, ಪೊಲೀಸರು ಬೆನ್ನಟ್ಟಿದಾಗ  ಅನಂತಪುರದಲ್ಲಿ ಕಾರನ್ನು ಬಿಟ್ಟು ಇಬ್ಬರು ಪರಾರಿಯಾದರು. ಆದರೆ ಓರ್ವನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರು. ಕಾರನ್ನು ತಪಾಸಣೆ ನಡೆಸಿದಾಗ   ಕಾರಿನಲ್ಲಿ 17 ಬಾಕ್ಸ್ ಮದ್ಯ ಪತ್ತೆಯಾಗಿದೆ . ವಶಕ್ಕೆ ತೆಗೆದುಕೊಂಡ ಅಜಯ್ ನನ್ನು  ವಿಚಾರಣೆ ನಡೆಸಿದಾಗ  ಮನೆ ಸಮೀಪ ಶೆಡ್ ನಲ್ಲಿ ಮದ್ಯ ದಾಸ್ತಾನಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದು , ಇದರಂತೆ ಬಂದ್ಯೋಡು ವೀರನಗರದ  ಶೆಡ್ ವೊಂದರಲ್ಲಿ  ದಾಸ್ತಾನಿಡಲಾಗಿದ್ದ  6,338 ಮದ್ಯದ ಬಾಟಲಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಲಾಕ್ ಡೌನ್  ಸಡಿಲಿಕೆ ಬಳಿಕ ಕರ್ನಾಟಕದಿಂದ ಅಕ್ರಮವಾಗಿ ಮದ್ಯ ಸಾಗಿಸಿದ್ದಾಗಿ ವಿಚಾರಣೆ ವೇಳೆ ಆರೋಪಿ ಪೊಲೀಸರಿಗೆ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

See also  ಇಲಿ ತೆಗೆಯಲು ಹೋದ ಯುವಕ ಬಾವಿಗೆ ಬಿದ್ದು ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು