News Kannada
Saturday, October 01 2022

ಕರ್ನಾಟಕ

ಜಲಸಂರಕ್ಷಣೆಯಲ್ಲಿ ನೂತನ ಮಾದರಿ : ಕಾಸರಗೋಡು ಜಿಲ್ಲೆಯಲ್ಲಿ ರಿಂಗ್ ತಡೆಗೋಡೆ ಯೋಜನೆ - 1 min read

Photo Credit :

ಜಲಸಂರಕ್ಷಣೆಯಲ್ಲಿ ನೂತನ ಮಾದರಿ : ಕಾಸರಗೋಡು ಜಿಲ್ಲೆಯಲ್ಲಿ ರಿಂಗ್ ತಡೆಗೋಡೆ ಯೋಜನೆ

ಕಾಸರಗೋಡು: ಜಲಸಂರಕ್ಷಣೆಯಲ್ಲಿ ನೂತನ ಮಾದರಿ ಮೂಲಕ ಕಾಸರಗೋಡು ಜಿಲ್ಲೆ ಗಮನ ಸೆಳೆಯುತ್ತಿದೆ. ಜಲಾಶಯಗಳಿಗೆ (ಬಾವಿಯಲ್ಲಿ ಬಳಸುವ) ರಿಂಗ್ ತಡೆಗೋಡೆಗಳನ್ನು ನಿರ್ಮಿಸುವ (ಅರ್ಧ ಸ್ಥಿರ ತಡೆಗೋಡೆ) ಮೂಲಕ ಜಲಸಂರಕ್ಷಣೆ ನಡೆಸುವ ಯೋಜನೆ ಜಿಲ್ಲೆಯಲ್ಲಿ ಆರಂಭಗೊಂಡಿದೆ.

ಕಿಲ್ಲೆಯಲ್ಲಿ ಭೂಗರ್ಭಜಲ ಗಣನೀಯವಾಗಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ತೀವ್ರತರ ನೀರಿನ ಬರ ತಲೆದೋರುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಜಲಸಂರಕ್ಷಣೆ ಚಟುವಟಿಕೆಗಳು ವ್ಯಾಪಕವಾಗಿ ನಡೆದುಬರುತ್ತಿವೆ. ಇದರ ಅಂಗವಾಗಿ ಅತ್ಯಂತ ಕಡಿಮೆ ವೆಚ್ಚದ, ಅತ್ಯಂತ ಪರಿಣಾಮಕಾರಿಯಾಗಿರುವ ಜಲಾಶಯಗಳಿಗೆ ರಿಂಗ್ ತಡೆಗೋಡೆ ನಿರ್ಮಿಸುವ ಯೋಜನೆ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಇದರ ಅಂಗವಾಗಿ ಜಿಲ್ಲೆಯ 12 ನದಿಗಳಿಗೆ ಹರಿಯುವ ಸುಮಾರು 650 ಜಲಾಶಯಗಳಲ್ಲಿ ಸುಮಾರು 900 ರಿಂಗ್ ತಡೆಗೋಡೆ ನಿರ್ಮಿಸಲಾಗುವುದು.

ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್, ನೌಕರಿ ಖಾತರಿ ಯೋಜನೆ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಗಳ ಜಂಟಿ ಸಹಕಾರದೊಂದಿಗೆ ಯೋಜನೆ ಜಾರಿಗೊಳಿಸಲಾಗುವುದು. ತಡೆಗೋಡೆ ನಿರ್ಮಿಸುವ ಜಾಗ ಪತ್ತೆ ನಡೆಸುವ ಹೊಣೆ ಜನಪ್ರತಿನಿಧಿಗಳಿಗಿರುವುದು. ಪ್ರತಿ ಗ್ರಾಮಪಂಚಾಯತ್ ನಲ್ಲಿ ಕನಿಷ್ಠ 20 ರಿಂಗ್ ತಡೆಗೋಡೆ 45 ದಿನಗಳ ಅವಧಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಬಡತನನಿವಾರಣೆ ವಿಭಾಗ ಜಿಲ್ಲಾ ಯೋಜನೆ ನಿರ್ದೇಶಕ ಕೆ.ಪ್ರದೀಪನ್ ತಿಳಿಸಿ ದ್ದಾರೆ

2019 ಡಿ.29ರಿಂದ ಒಂದು ವಾರ ನಡೆದಿದ್ದ “ತಡೆಗೋಡೆ ಉತ್ಸವ” ಜಿಲ್ಲೆಯಾದ್ಯಂತ 2800 ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಈ ಮೂಲಕ ಈ ಪ್ರದೇಶಗಳ ಜಲಾಶಯಗಳಲ್ಲಿ ಜಲದ ಮಟ್ಟ ಹೆಚ್ಚಿದೆ. ಜನಪರ ಚಟುವಟಿಕೆಗಳ ಮೂಲಕ ಜಲಸಂರಕ್ಷಣೆ ಈ ಮೂಲಕ ಸಾಧ್ಯವಾಗಿದೆ ಎಂದು ಕೆ.ಡಿ.ಪಿ. ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿ ದ್ದಾರೆ

ಕಿನಾನೂರು-ಕರಿಂದಳಂ ಪಂಚಾಯತ್ ಮತ್ತು ಕಯ್ಯೂರು-ಚೀಮೇನಿ ಪಂಚಾಯತ್ ಗಳಲ್ಲಿ ಈ ಯೋಜನೆಯ ಮೊದಲ ಹಂತದಲ್ಲಿ ತಲಾ ಒಂದು ರಿಂಗ್ ತಡೆಗೋಡೆ ನಿರ್ಮಿಸಲಾಗಿದ್ದು, ಯಶಸ್ವಿ ಕಂಡಿದೆ

See also  ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರು: ಇಬ್ಬರು ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು