News Kannada
Tuesday, October 04 2022

ಕರ್ನಾಟಕ

ದೇವಲಾಪುರ ಕಲ್ಯಾಣಿಯಲ್ಲಿ ನೀರು ಬಂತು! - 1 min read

Photo Credit :

ದೇವಲಾಪುರ ಕಲ್ಯಾಣಿಯಲ್ಲಿ ನೀರು ಬಂತು!

ಹಾಸನ: ಕೊರೋನಾದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದರೂ ಕೂಡ ಹಸಿರುಭೂಮಿ ಪ್ರತಿಷ್ಠಾನವು ಸಾರ್ವಜನಿಕರ ಸಹಕಾರದೊಂದಿಗೆ ಪಾಳುಬಿದ್ದ ಕಲ್ಯಾಣಿಗಳ ಪುನಶ್ಚೇತನಗೊಳಿಸುವ ಕಾರ್ಯವನ್ನು ಮುಂದುವರೆಸುತ್ತಿದ್ದು,ಇದರಿಂದ ಹಲವು ಕಲ್ಯಾಣಿಗಳು ಅಭಿವೃದ್ಧಿಯಾಗಿದ್ದಲ್ಲದೆ, ಅಂತರ್ಜಲ ಕಾಣಿಸಿದೆ.

ಈ ನಡುವೆ ಬೇಲೂರು ತಾಲೂಕಿನ ಕಳ್ಳೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಲಾಪುರ ಗ್ರಾಮದಲ್ಲಿದ್ದ ಕಲ್ಯಾಣಿಯನ್ನು ಇತ್ತೀಚೆಗೆ ಯುವಕರು ಮತ್ತು ಗ್ರಾಮಸ್ಥರು ಶ್ರಮದಾನದ ಮೂಲಕ ಪುನಶ್ಚೇತನ ಗೊಳಿಸಿದ್ದು ಕಲ್ಯಾಣಿಯಲ್ಲಿ ನೀರು ದೊರೆತಿರುವುದು ಖುಷಿ ತಂದಿದೆ.

ಶ್ರಮದಾನದಲ್ಲಿ ಪಾಲ್ಗೊಂಡ ತಂಡವು ಕಲ್ಯಾಣಿಯ ಸುತ್ತ ಮುತ್ತ ಜಂಗಲ್ ಗಿಡಗಂಟಿಗಳನ್ನು ಕಡಿದು ಕಲ್ಯಾಣಿಯಲ್ಲಿ ಶೇಖರವಾಗಿದ್ದ ಕೊಳಕು ನೀರನ್ನು ಹೊರ ಹಾಕಿ, ಅಂತರ್ಜಲದ ಕಣ್ಣುಗಳನ್ನು ತೆರೆದು ನೀರು ಒಸರುವವರೆಗೆ ಹೂಳೆತ್ತಿ ಕಲ್ಯಾಣಿಯನ್ನು ಸ್ವಚ್ಛಗೊಳಿಸಲಾಯಿತು.

ಇದೇ ವೇಳೆ ಮಾತನಾಡಿದ ಹಾಸನದ ಹಸಿರುಭೂಮಿ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಅವರು ಗ್ರಾಮೀಣ ಪ್ರದೇಶದಲ್ಲಿ ಹಿಂದಿನ ಕಾಲದವರು ನಿರ್ಮಿಸಿರುವ ಕಲ್ಯಾಣಿಗಳನ್ನು ಏಕೆ ಪುನಶ್ಚೇತನಗೊಳಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಅಂತರ್ಜಲದ ಮಹತ್ವವವನ್ನು ವಿವರಿಸಿದರು.

ಈ ಪುನಶ್ಚೇತನ ಕಾರ್ಯದಲ್ಲಿ ಮುಂದಾಳತ್ವ ವಹಿಸಿದ್ದ ಶಶಿಗೌಡ ಹಾಗೂ ದಯಾನಂದ್ ಮಾತನಾಡಿ ನಮ್ಮ ಹಳ್ಳಿಯ ಸ್ವಚ್ಛತೆಯನ್ನು ನಾವೇ ಮಾಡಿಕೊಳ್ಳಬೇಕು, ಮೊದಲಿನಿಂದಲೂ ನಮ್ಮ ಗ್ರಾಮ ಒಗ್ಗಟ್ಟಿನಿಂದ ಹೀಗೆ ನಡೆದುಕೊಂಡು ಬಂದಿದೆ ಎಂದು ವಿವರಿಸಿದರು.

ಶ್ರಮದಾನದಲ್ಲಿ ನೀರುಗಂಟಿ ಪ್ರಕಾಶ್, ವೇಣುಗೊಪಾಲ್ ಗೌಡ, ದೇವರಾಜೆಗೌಡ, ಪ್ರಜ್ವಲ್, ಅಂಕುಶ್, ಬಸವೇಗೌಡ, ರಮೇಶ್ ಗೌಡ, ಶಶಿಕುಮಾರ್ ಮುಂತಾದವರು ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್ ಸ್ಥಳದಲ್ಲಿದ್ದು ಗ್ರಾಮಸ್ಥರಿಗೆ ಮಾರ್ಗದರ್ಶನ ನೀಡಿದರು.

See also  ವಿಷ ಆಹಾರ ಸೇವನೆ: ಹಂಪಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಅಸ್ವಸ್ಥ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು