News Kannada
Friday, October 07 2022

ಕರ್ನಾಟಕ

ಮಾಸ್ಕ್ ಧರಿಸದೆ ಪೌರ ಕಾರ್ಮಿಕರ ಕಾರ್ಯನಿರ್ವಹಣೆ - 1 min read

Photo Credit :

ಮಾಸ್ಕ್ ಧರಿಸದೆ ಪೌರ ಕಾರ್ಮಿಕರ ಕಾರ್ಯನಿರ್ವಹಣೆ

ಬನ್ನೂರು: ಕೊರೋನಾ ಹಿನ್ನೆಲೆಯಲ್ಲಿ ವಿಶ್ವದ ಜನತೆ ಭಯ ಭೀತಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರೆ ಇದಕ್ಕೆ ತದ್ವಿರುದ್ಧವಾಗಿ ಬನ್ನೂರಿನ ಪೌರ ಕಾರ್ಮಿಕರು ಮಾಸ್ಕ್ ಹಾಗೂ ಗ್ಲೌಸ್ ಹಾಕದೆ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಇದು ಆತಂಕಕ್ಕೆ ಕಾರಣವಾಗಿದೆ.

ಪಟ್ಟಣದ ಚಾಮನಹಳ್ಳಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರು ಯಾವುದೇ ರೀತಿಯ ಮುಂಜಾಗ್ರತಾ ಕ್ರಮವಾಗಲಿ ಅಥವಾ ಕನಿಷ್ಟ ಮಾಸ್ಕ್ ಹಾಕಿಕೊಳ್ಳದೇ ಕೆಲಸ ನಿರ್ವಹಿಸುತ್ತಿದ್ದರು. ಇದನ್ನು ಕಂಡ ಪ್ರತ್ಯಕ್ಷದರ್ಶಿಗಳು ಇವರನ್ನು ಕೇಳಿದಾಗ ಹಾಕಿಕೊಳ್ಳುತ್ತೇವೆ ಎಂದು ಹಾರಿಕೆಯ ಉತ್ತರ ನೀಡುವ ಮೂಲಕ ಕೆಲಸದಲ್ಲಿ ನಿರತರಾಗಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಇವರ ಬಗ್ಗೆ ಗಮನ ಹರಿಸುವ ಮೂಲಕ ಅವರಿಗೆ ಅಗತ್ಯವಿರುವಂತ ಕಿಟ್‌ಗಳನ್ನು ನೀಡಿ, ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಉತ್ತಮ ಮಾರ್ಗದರ್ಶನ ನೀಡಬೇಕಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಆರ್.ಹೇಮಂತ್‌ರಾಜ್ ಪೌರಕಾರ್ಮಿಕರಿಗೆ ಎಲ್ಲ ರೀತಿಯ ಆರೋಗ್ಯ ಕಿಟ್ ನೀಡಲಾಗಿದ್ದು, ಗ್ಲೌಸ್ ಹಾಕಿದರೆ ಕೈ ಕಡಿಯುತ್ತದೆ ಎನ್ನುವಂತ ಸಬೂಬು ನೀಡುತ್ತಾರೆ. ಕೊಟ್ಟಿರುವಂತ ವಸ್ತುಗಳನ್ನು ಅವರು ಸರಿಯಾಗಿ ಬಳಸುತ್ತಿಲ್ಲ. ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

See also  ಆಫ್ರಿಕಾ ಕಡಲ್ಗಳ್ಳರ ಸೆರೆಯಲ್ಲಿ ಕಾಸರಗೋಡು ನಿವಾಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು