News Kannada
Saturday, October 01 2022

ಕರ್ನಾಟಕ

ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬಂದರೆ ದಂಡ - 1 min read

Photo Credit :

ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬಂದರೆ ದಂಡ

ಶಿಡ್ಲಘಟ್ಟ: ನಗರ ಸೇರಿ ಗ್ರಾಮೀಣ ಭಾಗದಲ್ಲಿ ಯಾರೂ ಕೂಡ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬರುವಂತಿಲ್ಲ. ಒಂದು ಬೈಕ್‍ನಲ್ಲಿ ಒಬ್ಬರು ಹಾಗೂ ಆಟೋದಲ್ಲಿ ಚಾಲಕ ಹೊರತುಪಡಿಸಿ ಇಬ್ಬರು ಪ್ರಯಾಣಿಕರಷ್ಟೆ ಪ್ರಯಾಣಿಸಬೇಕು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಸುರೇಶ್ ಎಚ್ಚರಿಕೆ ನೀಡಿದ್ದಾರೆ.

ಶಿಡ್ಲಘಟ್ಟದಲ್ಲಿ ಕಂದಾಯ, ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರದಲ್ಲಿ ರಸ್ತೆಗೆ ಇಳಿದು ಮಾಸ್ಕ್ ಧರಿಸದವರು, ಸ್ಯಾನಿಟೈಸ್ ಬಳಸದ ಹಾಗೂ ಅಂತರ ಕಾಯ್ದುಕೊಳ್ಳದವರಿಗೆ ಬಿಸಿ ಮುಟ್ಟಿಸಿದರು.

ಶಿಡ್ಲಘಟ್ಟ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಜನ ಸಾಮಾನ್ಯರಲ್ಲಿ ಮಾಸ್ಕ್ ಧರಿಸುವುದು, ಸ್ಯಾನಿಟೈಸಿಂಗ್ ಹಾಗೂ ಅಂತರ ಕಾಯ್ದುಕೊಳ್ಳುವುದರ ಮಹತ್ವ ಕುರಿತು ಅರಿವು ಮೂಡಿಸುವುದಕ್ಕಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ ಜಾಗೃತಿ ಮೂಡಿಸಿದರಲ್ಲದೆ, ದಂಡ ವಿಧಿಸಿದರು.

ಎಲ್ಲ ರೀತಿಯ ಅಂಗಡಿ ಹೋಟೆಲ್‍ಗಳಲ್ಲೂ ಮಾಲೀಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸಿಂಗ್ ಮಾಡಬೇಕು ಹಾಗೂ ಮಾಸ್ಕ್ ಧರಿಸಿದ್ದರೆ ಮಾತ್ರ ಅವರೊಂದಿಗೆ ವ್ಯವಹಾರ ನಡೆಸಿ ಇಲ್ಲವಾದಲ್ಲಿ ನಿಮಗೂ ಅವರಿಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರಲ್ಲದೆ, ಮೊದಲ ಸಲ ಎಚ್ಚರಿಕೆ ಕೊಡುತ್ತಿದ್ದು ನಂತರ ದಂಡ ವಿಧಿಸಲಾಗುವುದು ಜತೆಗೆ ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ರಸ್ತೆಗಳಲ್ಲಿ ಬೈಕ್ ಗಳಲ್ಲಿ ಒಬ್ಬರಿಗಿಂತಲೂ ಹೆಚ್ಚು ಪ್ರಯಾಣಿಸುತ್ತಿದ್ದವರಿಗೆ ಹಾಗೂ ಮಾಸ್ಕ್ ಧರಿಸದೆ ನೆಪಕ್ಕೆ ಮಾತ್ರ ಟವೆಲ್ ಕರ್ಚೀಫ್‍ನ್ನು ಮುಖಕ್ಕೆ ಸುತ್ತಿಕೊಂಡವರಿಗೆ ದಂಡ ವಿಧಿಸಲಾಯಿತು.

ತಹಸೀಲ್ದಾರ್ ಕೆ.ಅರುಂಧತಿ, ಟಿಎಚ್‍ಒ ಡಾ.ವೆಂಕಟೇಶ್‍ಮೂರ್ತಿ, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಸಿಪಿಐ ಕೆ.ಸುರೇಶ್, ಆರೋಗ್ಯ ನಿರೀಕ್ಷಕಿ ಶೋಭ, ಮುನಿರತ್ನಮ್ಮ, ಲೋಕೇಶ್, ವಿಜಯಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಯು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

See also  ಕೇರಳದಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು