News Kannada
Tuesday, December 06 2022

ಕರ್ನಾಟಕ

ಬಂಟ್ವಾಳದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ

Photo Credit :

ಬಂಟ್ವಾಳದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ

ಬಂಟ್ವಾಳ: ತಾಲೂಕಿನಾದ್ಯಂತ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಗುರುವಾರ ಒಂದೇ ದಿನ ಒಟ್ಟು 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಪೈಕಿ ಬಂಟ್ವಾಳ ಕಸ್ಬಾ ಗ್ರಾಮದಲ್ಲಿ 12 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಂದೇ ಕುಟುಂಬದ 9 ಮಂದಿ ಸೇರಿದ್ದಾರೆ. ಪುದು ಗ್ರಾಮದಲ್ಲಿ 5 ಪ್ರಕರಣಗಳು ಕಂಡುಬಂದಿರುವುದು ಆತಂಕಕಾರಿಯಾಗಿದೆ.

ಇದೀಗ ಬಂಟ್ವಾಳ ತಾಲೂಕಿನ ಮೂಲೆ ಮೂಲೆಗಳಲ್ಲೂ ಸೋಂಕು ಇರುವುದು ಖಚಿತವಾಗಿದ್ದು, ಇಂದು 1 ವರ್ಷದ ಗಂಡುಮಗು, 11, 13, 17 ವರ್ಷದ ಬಾಲಕರು ಹಾಗೂ 74, 78 ವರ್ಷದ ವೃದ್ಧರು ಸೇರಿದ್ದಾರೆ. ಕಳೆದ ಜೂನ್ 7ರಂದು 10ಕ್ಕೂ ಅಧಿಕ ಪ್ರಕರಣಗಳು, ಜು. 8ರಂದು 12 ಪ್ರಕರಣಗಳು ಕಂಡುಬಂದಿತ್ತು. ಈವರೆಗೆ ತಾಲೂಕಿನಲ್ಲಿ 5 ಮಂದಿ ಮೃತಪಟ್ಟಿದ್ದು, ಕೊರೋನಾ ಅಟ್ಟಹಾಸ ಆತಂಕ ಮೂಡಿಸಿದೆ.

See also  ಡಿ.೧೦ರಂದು ವಿಶ್ವ ದಾಖಲೆ ಬರೆಯಲಿರುವ ಕೈಗಾ ೧ ರಿಯಾಕ್ಟರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು