News Kannada
Tuesday, December 06 2022

ಕರ್ನಾಟಕ

ಕೊಡಗಿನಲ್ಲಿ ದರವಿದ್ದರೂ ಏಲಕ್ಕಿಯ ಫಸಲೇ ಇಲ್ಲ

Photo Credit :

ಕೊಡಗಿನಲ್ಲಿ ದರವಿದ್ದರೂ ಏಲಕ್ಕಿಯ ಫಸಲೇ ಇಲ್ಲ

ಮಡಿಕೇರಿ: ಕಳೆದೊಂದು ದಶಕಗಳ ನಂತರ ಇತ್ತೀಚೆಗಿನ ವರ್ಷಗಳಲ್ಲಿ ಏಲಕ್ಕಿಯ ದರ ಹೆಚ್ಚಳವಾಗುತ್ತಿದೆ. ಆದರೆ ಕೊಡಗಿನಲ್ಲಿ ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದ ಪರಿಣಾಮವಾಗಿ ಏಲಕ್ಕಿಯೇ ಇಲ್ಲದಾಗಿದೆ.

ಇದೀಗ ಜಿಲ್ಲೆಯ ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಏಲಕ್ಕಿಯನ್ನು ಬೆಳೆಯಲಾಗುತ್ತಿದೆಯಾದರೂ ಅದರಿಂದ ನಿರೀಕ್ಷಿಸಿದ ಫಸಲು ಪಡೆಯಲು ಸಾಧ್ಯವಾಗುತ್ತಿಲ್ಲ. ಮೊದಲೆಲ್ಲ ಏಲಕ್ಕಿ ಬೆಳೆಗಾರ ಎಂದರೆ ಶ್ರೀಮಂತನೆಂದೇ ಕರೆಯಲಾಗಿತ್ತು. ಅದು ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತಲ್ಲದೆ ಹೆಚ್ಚಿನ ರೈತರಿಗೆ ಇದೇ ಜೀವನಾಧಾರವಾಗಿತ್ತು.

ಆ ನಂತರದ ವರ್ಷಗಳಲ್ಲಿ ಕೊಡಗಿನ ವಾತಾವರಣದಲ್ಲಾದ ಏರುಪೇರು, ಕಾಫಿ ಏರಿದ ದರ, ಏಲಕ್ಕಿಗೆ ತಗುಲಿದ ರೋಗಗಳು ಹೀಗೆ ಹಲವು ಕಾರಣಗಳಿಂದಾಗಿ ರೈತರು ಏಲಕ್ಕಿ ಬೆಳೆಯತ್ತ ನಿರಾಸಕ್ತಿ ತೋರಿ, ಕಾಫಿಯತ್ತ ಒಲವು ತೋರ ತೊಡಗಿದರು. ಅದೇ ವೇಳೆಗೆ ಏಲಕ್ಕಿಯ ಬೆಲೆಯೂ ಕುಸಿತವಾಗ ತೊಡಗಿತು. ಕೆಜಿಯೊಂದಕ್ಕೆ ಒಂದೂವರೆ ಸಾವಿರದಷ್ಟಿದ್ದ ಬೆಲೆ ಕುಸಿತವಾಗಿ ಐನೂರಕ್ಕೆ ಬಂದು ನಿಂತಿತು.  ಇದರಿಂದ  ಏಲಕ್ಕಿ ಬೆಳೆಯ ಸಹವಾಸವೇ ಬೇಡವೆಂದು ಬಹಳಷ್ಟು ರೈತರು ದೂರ ಉಳಿದು ಬಿಟ್ಟರು. ಅಷ್ಟೇ ಅಲ್ಲದೆ ಏಲಕ್ಕಿಗೆ ಪರ್ಯಾಯವಾಗಿ ಕಾಫಿ ಕರಿಮೆಣಸು ಬೆಳೆಯಲು ಮುಂದಾದರು. ಹೀಗಾಗಿ ಏಲಕ್ಕಿ ಬೆಳೆಯುತ್ತಿದ್ದ ನೂರಾರು ಏಕರೆ ಪ್ರದೇಶ ಕಾಫಿ ತೋಟವಾಗಿ ಮಾರ್ಪಾಡಾಗಿತ್ತು.

ಜಿಲ್ಲೆಯ ಅಧಿಕ ಮಳೆ ಬೀಳುವ ಕೆಲವು ಪ್ರದೇಶಗಳಲ್ಲಿ ಕಾಫಿ ಬೆಳೆ ಬೆಳೆಯಲು ಸಾಧ್ಯವಾಗದೆ ಇರುವುದರಿಂದ ಇಲ್ಲಿನ ಬೆಳೆಗಾರ ಈಗಲೂ ಏಲಕ್ಕಿ ಬೆಳೆಯುತ್ತಿದ್ದಾರೆ. ಆದರೆ ಹಿಂದಿನ ಕಾಲದ ಸಾಂಪ್ರದಾಯಿಕ ತಳಿಯಿಂದ ಅಧಿಕ ಇಳುವರಿ ಪಡೆಯುವುದು ಕಷ್ಟವಾಗಿದೆ. ಹೀಗಾಗಿ ನೆಲ್ಯಾಣಿ ಎಂಬ ಹೊಸತಳಿಯತ್ತ ಮುಖ ಮಾಡಿದ್ದಾರೆ.

ಕೇರಳದಲ್ಲಿ ಏಲಕ್ಕಿ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿಂದೆ ಇನ್ನೊಂದೆಡೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಗ್ವಾಟೆಮಾಲದಿಂದ ಹೆಚ್ಚಿನ ಪ್ರಮಾಣದಲ್ಲಿ ಏಲಕ್ಕಿ ಹರಿದು ಬರುತ್ತಿರುವುದರಿಂದಾಗಿ ಭಾರತದ ಏಲಕ್ಕಿಗೆ ಬೇಡಿಕೆ ಕಡಿಮೆಯಾಗಿತ್ತು. ಆದರೆ ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಏಲಕ್ಕಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಕಳೆದ ಕೆಲವು ವರ್ಷಗಳಿಂದ ಏಲಕ್ಕಿಯ ದರ ಹೆಚ್ಚಳವಾಗುತ್ತಿದೆ. ಹೀಗಾಗಿ ಸಾಂಪ್ರದಾಯಿಕವಾಗಿ ಏಲಕ್ಕಿ ಬೆಳೆಯುತ್ತಿದ್ದವರು ಅದನ್ನು ಬಿಟ್ಟು ವೈಜ್ಞಾನಿಕವಾಗಿ ಬೆಳೆಯುವತ್ತ ಆಲೋಚನೆ ಮಾಡುತ್ತಿದ್ದಾರೆ. ಅದು ಯಶಸ್ವಿಯಾದರೆ ಮತ್ತೆ ಕೊಡಗಿನಲ್ಲಿ ಸಾಂಬಾರ ರಾಣಿ ಏಲಕ್ಕಿ ಯುಗ ಆರಂಭವಾಗಬಹುದೇನೋ?

See also  ಜಿಲ್ಲಾಧಿಕಾರಿ ನಿವಾಸ ಬಳಿಯಲ್ಲೇ ಅಕ್ರಮ ಶ್ರೀಗಂಧ ಸಾಗಾಟ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು