News Kannada
Saturday, December 03 2022

ಕರ್ನಾಟಕ

ಕೊರೋನಾ ಹೊಡೆತದಿಂದ ಗಾರೆ ಕೆಲಸಕ್ಕಿಳಿದ ಚಿತ್ರಕಲಾ ಶಿಕ್ಷಕ

Photo Credit :

ಕೊರೋನಾ ಹೊಡೆತದಿಂದ ಗಾರೆ ಕೆಲಸಕ್ಕಿಳಿದ ಚಿತ್ರಕಲಾ ಶಿಕ್ಷಕ

ಚಾಮರಾಜನಗರ: ಕೊರೋನಾ ಮಹಾಮಾರಿ ಹಲವರ ಬದುಕಿಗೆ ಕೊಳ್ಳಿಯಿಟ್ಟಿದೆ. ಅಷ್ಟೇ ಅಲ್ಲ ತಾವು ಮಾಡುತ್ತಿದ್ದ ಕೆಲಸವನ್ನು ಕಸಿದುಕೊಂಡ ಕಾರಣದಿಂದಾಗಿ ಹೊಟ್ಟೆಪಾಡಿಗಾಗಿ ಬೇರೆ ಬೇರೆ ಉದ್ಯೋಗವನ್ನು ಮಾಡಬೇಕಾದ ಪರಿಸ್ಥಿತಿಗೆ ಹಲವರು ಬಂದಿದ್ದಾರೆ. ಹೀಗಿರುವಾಗ ಚಿತ್ರಕಲಾ ಶಿಕ್ಷಕರೊಬ್ಬರು ಜೀವನ  ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದ ದುಂಡಯ್ಯ ಎಂಬುವರೇ  ಜೀವನ ನಿರ್ವಹಣೆಗಾಗಿ ಗಾರೆ ಕೆಲಸಕ್ಕೆ ಮಾಡುತ್ತಿರುವ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಇವರು ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದು  ಕಳೆದ 17 ವರ್ಷಗಳ ಕಾಲ ಸಾಕಷ್ಟು ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಧಾರೆ ಎರೆದಿದ್ದಾರೆ. ದುರಂತ ಅಂದರೆ ಕೊರೋನಾ ಹಿನ್ನಲೆಯಲ್ಲಿ ಚಿತ್ರಕಲಾ ಶಿಕ್ಷಕ ಬದುಕು ಕೈಹಿಡಿಯದ ಕಾರಣದಿಂದಾಗಿ ಅನಿವಾರ್ಯವಾಗಿ ಗಾರೆ ಕೆಲಸ ಮಾಡುವಂತಾಗಿದೆ.

ಕಳೆದ ನಾಲ್ಕು ತಿಂಗಳಿಂದ ಕೆಲಸವಿಲ್ಲದೆ ಪರದಾಡಿದ ಶಿಕ್ಷಕ ದುಂಡಯ್ಯ ಅವರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳ ಸಂಸಾರವಿದ್ದು, ಬದುಕಲು ಹಣದ ಅನಿವಾರ್ಯವಿದ್ದುದರಿಂದ ಬೇರೆ ಯಾವ ಕೆಲಸವೂ ಇಲ್ಲದ್ದರಿಂದ ಕೊನೆಗೆ ಜೀವನೋಪಾಯಕ್ಕಾಗಿ ಗಾರೆ ಕೆಲಸವನ್ನು ಆರಿಸಿಕೊಂಡಿದ್ದಾರೆ. ಕೆಲಸ ಯಾವುದಾದರೇನು ಸ್ವಾಭಿಮಾನದ  ಜೀವನ ಮುಖ್ಯವಾಗಿದೆ. ಇವತ್ತು ಗಾರೆ ಕೆಲಸ ಮಾಡುತ್ತಿರುವುದರಿಂದ ಮೂರು ಹೊತ್ತು ಊಟ ಮಾಡುವಂತಾಗಿದೆ ಎಂಬ ಧನ್ಯತಾ ಭಾವ ಹೊರಹಾಕುವ ಶಿಕ್ಷಕ ದುಂಡಯ್ಯ ಅವರು   ಶಿಕ್ಷಕರಿಗೆ ಉದ್ಯೋಗ ಕಲ್ಪಿಸದ ಚಿತ್ರಕಲಾ ಶಾಲೆಗಳು ಯಾಕೆ ಬೇಕು? ಎಂಬ ಪ್ರಶ್ನೆಯನ್ನು ಹೊರಗೆಡವುತ್ತಾರೆ.

ಶಿಕ್ಷಣ ಸಚಿವರಿಗೆ ನಮ್ಮಂತಹ ಬಡ ಶಿಕ್ಷಕರ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ಕೊರೋನಾ ಮಹಾಮಾರಿ ತಂದ ಎಡವಟ್ಟು ಒಂದಲ್ಲ ಎರಡಲ್ಲ ಸಾಕಷ್ಟಿದೆ. ಖಾಸಗಿ ಶಾಲೆ ಶಿಕ್ಷಕರು ನೊಂದು ಬೆಂದು ಹೋಗಿದ್ದಾರೆ. ಸರ್ಕಾರ ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಯನ್ನು ಅರ್ಥಮಾಡಿಕೊಂಡಿಲ್ಲ. ಶಾಲೆಯಿಂದ ಸಂಬಳ ಬರ್ತಿಲ್ಲ. ಈ ಸಂಬಂಧ ಸರ್ಕಾರವೂ ಯಾವುದೇ ರೀತಿಯಲ್ಲಿ ಗಮನಹರಿಸುತ್ತಿಲ್ಲ. ಇದರಿಂದ ಸಾವಿರಾರು ಮಂದಿ ಖಾಸಗಿ ಶಾಲೆ ಶಿಕ್ಷಕರು ಬೀದಿ ಪಾಲಾಗಿದ್ದಾರೆ ಎಂಬ ನೋವನ್ನು ಹೊರಹಾಕುತ್ತಾರೆ.

ಚಿತ್ರಕಲಾ ಶಿಕ್ಷಕ ದುಂಡಯ್ಯ ಅವರ  ಮನವಿ ಮೇರೆಗೆ  ಇವರ ಕೈ ಚಳಕದಲ್ಲಿ ಮೂಡಿಬಂದಿರುವ   ಚಿತ್ರಕಲೆಗಳು ಸಚಿವ ಶ್ರೀರಾಮುಲು ಖರೀದಿ ಮಾಡಿ, ಸಹಾಯ ಹಸ್ತ ಚಾಚಿದ್ದಾರೆ. ಇನ್ನು ಆರೋಗ್ಯ ಸಚಿವರು  ತಮ್ಮ ಪೇಸ್ ಬುಕ್ ಪೇಜ್‍ನಲ್ಲೂ ಚಿತ್ರಕಲೆ ಬಗ್ಗೆ  ಪೋಸ್ಟ್ ಮಾಡಿದ್ದಾರೆ. ಆದರೆ ದುಂಡಯ್ಯ ಅವರಂತಹ ಹಲವಾರು ಶಿಕ್ಷಕರು ಇವತ್ತು ಅತಂತ್ರ ಸ್ಥಿತಿಯಲ್ಲಿದ್ದಾರೆ. ಮುಂದಿನ ಬದುಕು ಹೇಗೆಂಬ ಚಿಂತೆಯಲ್ಲಿದ್ದಾರೆ. ಇವರೆಲ್ಲರ ನಡುವೆ ಶಿಕ್ಷಕ ದುಂಡಯ್ಯ ಬದುಕು ನಿರ್ವಹಣೆಗಾಗಿ ಗಾರೆ ಬಾಂಡಲಿ ಹಿಡಿದು ನಿಂತಿದ್ದಾರೆ. ಕೊರೋನಾ ಮಹಾಮಾರಿ ಎಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೆ.

See also  ಸಾಹಸ ಕಲಾವಿದರ ಕಟ್ಟಡ ನಿರ್ಮಾಣಕ್ಕೆ ಕಿಚ್ಚ ಸುದೀಪ್ 10ಲಕ್ಷ ಧನಸಹಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು