News Kannada
Tuesday, November 29 2022

ಕರ್ನಾಟಕ

ಕೆ.ಆರ್.ಪೇಟೆಯಲ್ಲಿ ನಿಲ್ಲದ ಸರಣಿ ಕಳ್ಳತನ - 1 min read

Photo Credit :

ಕೆ.ಆರ್.ಪೇಟೆಯಲ್ಲಿ ನಿಲ್ಲದ ಸರಣಿ ಕಳ್ಳತನ

 

ಕೆ.ಆರ್.ಪೇಟೆ: ಕೆ.ಆರ್.ಪೇಟೆ ಪಟ್ಟಣದಲ್ಲಿ ಅಂಗಡಿ ಕಳ್ಳತನ ಪ್ರಕರಣಗಳು ಮುಂದುವರೆದಿದ್ದು, ಮತ್ತೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದೆ.

ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿರುವ ಶಂಕರ್ ಅವರ ವಿನಾಯಕ ಬೇಕರಿ, ಪ್ರದೀಪ್ ಅವರ ಫುಟ್ ವೇರ್ ಅಂಗಡಿ, ರಿಜ್ವಾನ್ ಸ್ಟಾರ್ ಸೂಪರ್ ಬಜಾರ್ ಅಂಗಡಿಗಳ ಹಿಂಬದಿಯ ಶೀಟ್ ಮುರಿದು ಒಳ ನುಗ್ಗಿರುವ ಕಳ್ಳರು, ವಿನಾಯಕ ಬೇಕರಿಯಲ್ಲಿ ಕ್ಯಾಶ್ ಟೇಬಲ್ ಮುರಿದು ಸಾವಿರಾರು ಬೆಲೆ ಬಾಳುವ ವಿವಿಧ ಬಿಸ್ಕೆಟ್, ಜ್ಯೂಸ್ ಬಾಟಲಿ ಮತ್ತಿತರರ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ನಂತರ ಪಕ್ಕದ ಪ್ರದೀಪ್ ಅವರ ಫುಟ್ ವೇರ್ ಅಂಗಡಿಗೆ ನುಗ್ಗಿ ಅಂಗಡಿಯಲ್ಲಿ ಬೆಲೆ ಬಾಳುವ ಶೂಗಳನ್ನು ಮತ್ತು ಚಪ್ಪಲಿಗಳನ್ನು ಹೊತ್ತೊಯ್ದಿರುವ ಕಳ್ಳರು ಪಕ್ಕದಲ್ಲೇ ಇರುವ ರಿಜ್ವಾನ್ ಎಂಬುವವರಿಗೆ ಸೇರಿದ ಸ್ಟಾರ್ ಸೂಪರ್ ಬಿಗ್ ಬಜಾರ್ ಅಂಗಡಿಗೆ ನುಗ್ಗಿ ಕ್ಯಾಶ್ ಟೇಬಲ್ ಒಡೆದು ಹಾಕಿದ್ದಾರೆ. ಹಣ ಸಿಗದೇ ಇದ್ದಾಗ ಚಲ್ಲಾಪಿಲ್ಲಿ ಮಾಡಿ ಸಾವಿರಾರು ರೂ ಬೆಲೆ ಬಾಳುವ ಬಟ್ಟೆಗಳನ್ನು ಕದ್ದುಕೊಂಡು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆ ಕುರಿತು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

 

ಕಳೆದ ಒಂದು ವಾರದಲ್ಲಿ ಮೂರು ಭಾರಿ ಅಂಗಡಿ ಕಳ್ಳತನ ನಡೆದಿರುವುದು ಪಟ್ಟಣದ ವರ್ತಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಇದೀಗ ಸರಣಿ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಆತಂಕವನ್ನು ತಂದಿಟ್ಟಿದೆ. ಹಾಗಾಗಿ ಪೊಲೀಸರು ರಾತ್ರಿ ಇನ್ನೂ ಹೆಚ್ಚಿನ ಗಸ್ತು ಹೆಚ್ಚಿಸಬೇಕು. ರಾತ್ರಿ ವೇಳೆ ಅನುಮಾಸ್ಪದವಾಗಿ ಪಟ್ಟಣದಲ್ಲಿ ಓಡಾಡುವವರನ್ನು ಬಂಧಿಸುವ ಮೂಲಕ ಕಳ್ಳತವನ್ನು ತಡೆಯಬೇಕು ಎಂದು ಸಾರ್ವಜನಿಕರು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

See also  ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದ ರೈತಪರ ಹೋರಾಟಗಾರರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು