News Kannada
Sunday, November 27 2022

ಕರ್ನಾಟಕ

ಕಾಸರಗೋಡು: ನಿಷೇಧಾಜ್ಞೆ ಪ್ರದೇಶಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಂಗಡಿಗಳು ಕಾರ್ಯಾಚರಣೆ - 1 min read

Photo Credit :

ಕಾಸರಗೋಡು: ನಿಷೇಧಾಜ್ಞೆ ಪ್ರದೇಶಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಂಗಡಿಗಳು ಕಾರ್ಯಾಚರಣೆ

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿ ದ್ದಾರೆ

ಆದರೆ ಕಂಟೈ ನ್ಮೆಂಟ್ ಝೋನ್ ಗಳಲ್ಲಿ ದಿನ ಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಗತ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ತೆರೆಯಬಹುದು. ಕಾಸರಗೋಡು ಜಿಲ್ಲೆಯ ಉಳಿದ ಪ್ರದೇಶಗಳಲ್ಲಿ ಎಲ್ಲ ಅಂಗಡಿಗಳೂ ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ತೆರೆದು ಕಾರ್ಯಾಚರಿಸಬಹುದು. ಆದರೆ ಅಂಗಡಿಗಳಲ್ಲಿ ಜನ ಗುಂಪು ಸೇರುವುದು ಸಲ್ಲದು, ಮಾಸ್ಕ್ ಧಾರಣೆ, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಿಕೆ ಇತ್ಯಾದಿ ಕಡ್ಡಾಯವಾಗಿ ಪಾಲಿಸಬೇಕು.

ಅಂಗಡಿಗಳ ಸಿಬ್ಬಂದಿ ಮಾಸ್ಕ್ , ಗ್ಲೌಸ್ ಧರಿಸಲೇ ಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಅಂಗಡಿ ಮುಚ್ಚುಗಡೆ ಸಹಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶ ನೀಡಿದ್ದಾರೆ.

ಕಂಟೈ ನ್ಮೆಂಟ್ ಝೋನ್ ಗಳ ಸಹಿತ ಪ್ರದೇಶಗಳ ಅಕ್ಷಯ ಕೇಂದ್ರಗಳು ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ತೆರೆದು ಕಾರ್ಯಾರಿಸಬಹುದು. ಮೆಡಿಕಲ್ ಶಾಪ್ ಗಳಿಗೆ ಸಮಯದ ಅವಧಿ ಕಡ್ಡಾಯವಿಲ್ಲ. ಕಂಟೈ ನ್ಮೆಂಟ್ ಝೋನ್ ಗಳಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು, ಮೋಟಾರು ವಾಹನ ಶಾಪ್ ಗಳು ಇತ್ಯಾದಿ ತೆರೆಯಕೂಡದು ಎಂದವರು ಹೇಳಿದರು.

 

 

See also  ಅಂಗನವಾಡಿಯಲ್ಲಿ ಮಗುವಿಗೆ ವಿಷಕಾರಿ ಜಂತು ಹುಳು ಕಚ್ಚಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು