News Kannada
Saturday, December 03 2022

ಕರ್ನಾಟಕ

ಕಾಕನ ಕೋಟೆಯ ಮೊದಲ ದಿನದ ಸಫಾರಿಯಲ್ಲೆ ಹುಲಿಯ ದರ್ಶನ

Photo Credit :

ಕಾಕನ ಕೋಟೆಯ ಮೊದಲ ದಿನದ ಸಫಾರಿಯಲ್ಲೆ ಹುಲಿಯ ದರ್ಶನ

ಮೈಸೂರು: ಮೂರು ತಿಂಗಳ ಲಾಕ್‌ಡೌನ್ ಬಳಿಕ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯಲ್ಲಿರುವ ಕಾಕನಕೋಟೆ ಸಫಾರಿ ಎಂದಿನಂತೆ ಪುನರಾರಂಭವಾಗಿದ್ದು, ಸಫಾರಿ ಕೇಂದ್ರದ ಆವರಣದಲ್ಲಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಯಿತು. ವಲಯ ಅರಣ್ಯಧಿಕಾರಿ ಸಿದ್ದರಾಜು ಅವರ ನೇತೃತ್ವದಲ್ಲಿ ಪ್ರಾರಂಭವಾದ ಸಫಾರಿಯಲ್ಲಿ ಸರ್ಕಾರದ ನಿಯಮದಂತೆ ಪ್ರತಿ ಬಸ್‌ನಲ್ಲಿ 13 ಜನರಂತೆ 35 ಜನರಿಗೆ ಸಫಾರಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಸಫಾರಿ ಪ್ರಾರಂಭಕ್ಕೂ ಮೊದಲೇ ಹೆಚ್.ಡಿ.ಕೋಟೆ ತಾಲೂಕಿನ ಆಡಳಿತ ಮಂಡಳಿ ಸಫಾರಿ ಕೇಂದ್ರಕ್ಕೆ ಭೇಟಿ ನೀಡಿ ಮುಂಜಾಗೃತಾ ಕ್ರಮಗಳ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅಲ್ಲದೇ ಪ್ರತಿ ಬಸ್‌ಗೂ ಸಫಾರಿ ಹೊರಡುವ ಮುನ್ನ ಸ್ಯಾನಿಟೈಸರ್ ಸಿಂಪಡಿಸಬೇಕು. ಸಫಾರಿ ಮುಗಿದ ನಂತರವು ಸಹ ಸ್ಯಾನಿಟೈಸರ್ ಸಿಂಪಡಿಸಬೇಕು ಹಾಗೂ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಸಿಬ್ಬಂದಿಗಳ ಯಾರೂ ಸಹ ಪ್ರವಾಸಿಗರೊಡನೆ ಸಂಪರ್ಕಕ್ಕೆ ಹೋಗಬಾರದು. ಸಿಬ್ಬಂದಿಗಳು ಮಾಸ್ಕ್‌ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಿದರು.

ನಂತರ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ವಲಯ ಅರಣ್ಯಧಿಕಾರಿ ಸಿದ್ದರಾಜು ಸಿಬ್ಬಂದಿಗಳು ಆದಷ್ಟು ಪ್ರವಾಸಿಗರ ಸಂಪರ್ಕಕ್ಕೆ ಹೋಗದಂತೆ ಗಮನ ಹರಿಸಬೇಕು ಹಾಗೂ ಬಸ್ ನಲ್ಲಿರುವ ಪ್ರವಾಸಿಗರು ಎದ್ದು ಓಡಾಡದಂತೆ ನೋಡಿಕೊಳ್ಳಬೇಕು, ಟಿಕೇಟ್ ವಿತರಿಸುವ ಸಂದರ್ಭದಲ್ಲಿ ಪ್ರವಾಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ನೋಡಿಕೊಳ್ಳಬೇಕು ಎಂದರು.

ಮೂರು ತಿಂಗಳು ಬಳಿಕ ಪ್ರಾರಂಭವಾದ ಮೊದಲ ಸಫಾರಿಯಲ್ಲೇ ಪ್ರವಾಸಿಗರಿಗೆ ಹುಲಿಯ ದರ್ಶನ ಭಾಗ್ಯ ಸಿಕ್ಕಿದೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಕಾಲ ಕಳೆದಿದ್ದ ಕಣ್ಣುಗಳಿಗೆ ಇಂದಿನ ಸಫಾರಿ ಹಚ್ಚ ಹಸಿರಿನ ಅರಣ್ಯ ಸೌಂದರ್ಯವನ್ನು ಕಣ್ತುಂಬುವಂತೆ ಮಾಡಿದೆ. ಅಲ್ಲದೇ ಸಫಾರಿಯಲ್ಲಿ ಪ್ರವಾಸಿಗರು ಹುಲಿ, ಜಿಂಕೆ, ಕಾಡೆಮ್ಮೆ, ಆನೆ ಹಾಗೂ ವಿವಿಧ ಜಾತಿಯ ಹದ್ದುಗಳು ಮತ್ತು ಪಕ್ಷಿಗಳನ್ನು ನೋಡಿ ಸಂತಸ ಪಟ್ಟು, ತಮ್ಮ ಕ್ಯಾಮೆರಗಳಲ್ಲಿ ಸೆರೆಹಿಡಿದುಕೊಂಡರು. .

ಸಫಾರಿಯ ಪ್ರಾರಂಭಕ್ಕೂ ಮೊದಲು ಹಾಗೂ ಸಫಾರಿ ಮುಗಿದ ನಂತರವು ಪ್ರತಿ ವಾಹನಕ್ಕೆ ಸ್ಯಾನಿಟೈಸರ್ ಮಾಡಲಾಗುವುದು ಹಾಗೂ ನಮ್ಮ ಸಿಬ್ಬಂದಿಗಳಿಗೆ ಮುಂಜಾಗೃತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಕಡಿಮೆ ಜನರಿಗೆ ಮಾತ್ರ ಸಫಾರಿಯಲ್ಲಿ ಅವಕಾಶವಿದ್ದು ಪ್ರವಾಸಿಗರು ಇಲಾಖೆಯೊಂದಿಗೆ ಸಹಕರಿಸಬೇಕಿದೆ ಎಂದು ವಲಯ ಅರಣ್ಯಾಧಿಕಾರಿ ತಿಳಿಸಿದರು.

ಲಾಕ್‌ಡೌನ್ ಬಳಿಕ ಮೊದಲ ಸಫಾರಿ ನಿಜಕ್ಕೂ ಬಹಳ ಸಂತೋಷ ತಂದಿದೆ. ಮೊದಲ ಸಫಾರಿಯಲ್ಲೇ ಹುಲಿ ಸಿಗುತ್ತದೆ ಎಂದು ಊಹಿಸಿರಲಿಲ್ಲ. ಅಲ್ಲದೇ ಅಲವು ದಿನಗಳ ಬಳಿಕ ಕಾಡನ ಸೌಂದರ್ಯ ಸವಿದದ್ದು ಎಲ್ಲವುದಕ್ಕಿಂತ ಸಂತಸದ ವಿಚಾರವಾಗಿದೆ ಎಂದು ಪ್ರವಾಸಿಗ ರಾಮಕೃಷ್ಣ ತಿಳಿಸಿದರು.

See also  ಅಪಾಯ ಆಹ್ವಾನಿಸುವ ಸೇತುವೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು