News Kannada
Monday, December 05 2022

ಕರ್ನಾಟಕ

ಮಲೆನಾಡ ಹೆದ್ದಾರಿಯ ಪ್ರಥಮ ಹಂತದ ರಸ್ತೆ  ಆಗಸ್ಟ್  ಅಂತ್ಯದಲ್ಲಿ ಉದ್ಘಾಟನೆ

Photo Credit :

ಮಲೆನಾಡ ಹೆದ್ದಾರಿಯ ಪ್ರಥಮ ಹಂತದ ರಸ್ತೆ  ಆಗಸ್ಟ್  ಅಂತ್ಯದಲ್ಲಿ ಉದ್ಘಾಟನೆ

ಕಾಸರಗೋಡು:  ಮಲೆನಾಡ ಹೆದ್ದಾರಿಯ ಪ್ರಥಮ ರೀಚ್ ಆಗಸ್ಟ್ ತಿಂಗಳ ಕೊನೆಯಲ್ಲಿ ಉದ್ಘಾಟನೆಗೆ ಸಜ್ಜುಗೊಳ್ಳಲಿದೆ.

ಮಲೆನಾಡ ಪ್ರದೇಶಗಳ ಸಮಗ್ರ ಅಭಿವೃದ್ಧಿಯ ಕನಸಿಗೆ ಬಣ್ಣ ನೀಡುವ ಮಲೆನಾಡ ಹೆದ್ದಾರಿಯ ನಿರ್ಮಾಣ ಕಾಸರಗೋಡು ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿದೆ. ಜಿಲ್ಲೆಯ ನಂದರಪದವಿನಿಂದ ಆರಂಭಗೊಳ್ಳುವ ಮಲೆನಾಡ ಹೆದ್ದಾರಿಯ ಪ್ರಥಮ ರೀಚ್ ಆಗಸ್ಟ್ ತಿಂಗಳ ಕೊನೆಯಲ್ಲಿ ಪೂರ್ತಿಗೊಳ್ಳುವ ನಿರೀಕ್ಷೆಯಿದ್ದು, ಉದ್ಘಾಟನೆಗೆ ಸಜ್ಜುಗೊಳ್ಳಲಿದೆ.

23 ಕಿ.ಮೀ. ಉದ್ದದ ಈ ಹೆದ್ದಾರಿ 5467 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಕೋವಿಡ್ ಬಾಧೆಯ ಹಿನ್ನೆಲೆಯಲ್ಲಿ 2 ತಿಂಗಳ ಕಾಲ ಹೆದ್ದಾರಿ ನಿರ್ಮಾಣ ಮೊಟಕುಗೊಂಡಿದ್ದರೂ, ಇದೀಗ ಪುನರಾರಂಭಗೊಂಡಿದೆ. ಕಾಸರಗೋಡು ಜಿಲ್ಲೆಯ ಮೂಲಕ ಹಾದುಹೋಗುವ 127.805 ಕಿ.ಮೀ. ಮಲೆನಾಡ ಹೆದ್ದಾರಿಯ 4 ರೀಚ್ ಗಳು ಪೂರ್ಣಗೊಳ್ಳಲಿವೆ. 12 ಮೀಟರ್ ಅಗಲದಲ್ಲಿ ನಿರ್ಮಾಣಗೊಳ್ಳುವ ಹೆದ್ದಾರಿಯ 7 ಮೀಟರ್ ಡಾಮರೀಕರಣ, ಉಭಯ ಬದಿಗಳಲ್ಲಿ ತಲಾ ಒಂದು ಮೀಟರ್ ಕಾಲ್ನಡಿಗೆ ಹಾದಿ, ಉಳಿದೆಡೆ ಚರಂಡಿ ನಿರ್ಮಾಣಗೊಳ್ಳಲಿದೆ. ಇದರ ಜೊತೆಗೆ ಅಗತ್ಯವಿರುವ ಪ್ರದೇಶಗಳಲ್ಲಿ ಸೇತುವೆ, ಡಿವೈಡರ್ ಇತ್ಯಾದಿಗಳನ್ನು ನಿರ್ಮಿಸಲಾಗುವುದು.

ನಂದರಪದವಿನಿಂದ ಸುಂಕದಕಟ್ಟೆ, ಪೈವಳಿಕೆ, ಚೇವಾರು, ಅಂಗಡಿಮೊಗರು, ಇಡಿಯಡ್ಕ, ಬದಿಯಡ್ಕ, ಮುಳ್ಳೇರಿಯ, ಪಡಿಯತ್ತಡ್ಕ, ಅತ್ತನಾಡಿ, ಎಡಪರಂಬ, ಪಾಂಡಿ, ಪಳ್ಳಂಜಿ, ಶಂಕರಪ್ಪಾಡಿ, ಪಡ್ಪು, ಬಂದಡ್ಕ, ಮಾನಡ್, ಕೋಳಿಚ್ಚಾಲ್, ಪದಿನೆಟ್ಟಾಂ ಮೈಲ್, ಚುಳ್ಳಿ, ವೆಳ್ಳಿಕಡವು, ಚಿತ್ತಾರಿಕಲ್ಲ್ ಮೂಲಕ ಚೆರುಪುಳಕ್ಕೆ ಜಿಲ್ಲೆಯ ಮಲೆನಾಡ ಹೆದ್ದಾರಿ ತಲಪಲಿದೆ.

ಕಿಫ್ ಬಿ ಮೂಲಕ ಯೋಜನೆಗೆ ನಿಧಿ ಲಭ್ಯವಾಗುತ್ತಿದೆ. ಜಿಲ್ಲೆಯ ಅತಿ ಉದ್ದದ ರೀಚ್ ಆಗಿರುವ ಚೇವಾರು-ಎಡಪ್ಪರಂಬಕ್ಕೆ ಆರ್ಥಿಕ ಮಂಜೂರಾತಿ ಲಭಿಸಿದೆ. 49. 635 ಕಿ.ಮೀ. ಉದ್ದ ರೀಚ್ ಇದಾಗಿದೆ. 8385 ಲಕ್ಷ ರೂ. ವೆಚ್ಚದ ಈ ಯೋಜನೆಗೆ ತಾಂತ್ರಿಕ ಮಂಜೂರಾತಿ ಗಿರುವ ಕ್ರಮ ಪ್ರಗತಿಯಲ್ಲಿದೆ. ಎಡಪರಂಬ-ಕೋಳಿಚ್ಚಾಲ್ ರೀಚ್ ನ ನಿರ್ಮಾಣ ಅರ್ಧಾಂಶ ಪೂರ್ಣಗೊಡಿದೆ. 24.4 ಕಿ.ಮೀ. ಉದ್ದದ ಈ ರೀಚ್ ಎರಡು ಕಡೆಗಳಲ್ಲಿ ಮೂರೂವರೆ ಕಿ.ಮೀ. ವನಾಂತರ ಹಾದಿಯಿದೆ. ಆದಕಾರಣ ಇಲ್ಲಿ 12 ಮೀಟರ್ ಅಗಲ ರಸ್ತೆ ಸುಧಾರಿತಗೊಳಿಸಲು 4.332 ಹೆಕ್ಟೇರ್ ಜಾಗದಲ್ಲಿ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಕ್ರಮಗಳು ಪೂರ್ಣಗೊಳ್ಳುತ್ತಿವೆ. 85515 ಲಕ್ಷ ರೂ. ಎಡಪ್ಪರಂಬ ಕೋಳಿಚ್ಚಾಲ್ ರೀಚ್ ಗೆ ಕಿಫ್ ಬಿ ಮೂಲಕ ಮಂಜೂರಾತಿ ಲಭಿಸಿದೆ.

ಕೋಳಿಚ್ಚಾಲ್ ನಿಂದ ಜಿಲ್ಲೆಯ ಗಡಿ ಪ್ರದೇಶ ಚೆರುಪುಳ ವರೆಗಿನ 30.77 ಕಿ.ಮೀ. ಉದ್ದದ ರೀಚ್ ಗೆ 8200 ಲಕ್ಷ ರೂ. ಮೀಸಲಿರಿಸಲಾಗಿದೆ. ಶೇ 31 ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಮರುತೋಂ ಕಾಟ್ಟಾಂಕವಲ ವನಾಂತರ ವಲಯದ ಮೂಲಕ ಈ ರೀಚ್ ನ 3.100 ಕಿ.ಮೀ. ಭಾಗ ಸಾಗುತ್ತದೆ. ಇಲ್ಲೂ ವನಾಂತರ ಜಾಗದ ಲಭ್ಯತೆ ಸಂಬಂಧ ಕ್ರಮಗಳು ಪ್ರಗತಿಯಲ್ಲಿವೆ.

See also  ಬಿಜೆಪಿ ನಾಯಕರ ವಿರುದ್ಧ ಅಪಪ್ರಚಾರ: ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು