News Kannada
Monday, December 05 2022

ಕರ್ನಾಟಕ

ಉ.ಕನ್ನಡ; ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ  

Photo Credit :

ಉ.ಕನ್ನಡ; ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ   

ಕಾರವಾರ:ಕೇಂದ್ರ ಕಾರ್ಮಿಕ ಸಂಘಟನೆ ಎಐಯುಟಿಯುಸಿ ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ರಾಜ್ಯದಾದ್ಯಂತ 20ನೇ ದಿನದ ಮುಷ್ಕರದ ಅಂಗವಾಗಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಗೌರವ ಸಲಹೆಗಾರರಾದ ಗಂಗಾಧರ ಬಡಿಗೇರ್ ಕಳೆದ 20 ದಿನಗಳಿಂದ 12000 ನಿಗದಿತ ಮಾಸಿಕ ವೇತನ ಹಾಗೂ ಸೋಂಕಿತ ಆಶಾ ಕಾರ್ಯಕರ್ತರಿಗೆ ಉಚಿತ ಚಿಕಿತ್ಸೆ ಬಿಪಿ ರಕ್ಷಣಾ ಉಪಕರಣಗಳನ್ನು ಸಾಧನೆಗಳನ್ನು ಖಾತ್ರಿಪಡಿಸಲು ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ.

ಆದರೆ ಇವರನ್ನು ಕರೋನ ಫ್ರಂಟ್ಲೈನ್ ವಾರಿಯರ್ ಗಳೆಂದು ಹೂ ಮಳೆಗರೆದು ಕೇವಲ ಹೊಗಳಿಕೆಗಳಿಂದಲೆ ಅವರ ಹೊಟ್ಟೆ ತುಂಬಿಸಲು ಯತ್ನಿಸುತ್ತಿದ್ದಾರೆ. ಇವರುಗಳ ಸಮಸ್ಯೆಗಳಿಗೆ ಬೇಡಿಕೆಗಳಿಗೆ ಸರ್ಕಾರ ಕುರುಡನಂತೆ ವರ್ತಿಸುತ್ತಿದೆ. ಆದರೆ ಇದೀಗ ಆಶಾ ಚಳುವಳಿ, ಜನ ಚಳುವಳಿಯಾಗಿ ಪರಿವರ್ತನೆಗೊಂಡಿದೆ ಈ ಹೋರಾಟಕ್ಕೆ ನಾಡಿನ ವಿವಿಧ ಕ್ಷೇತ್ರದ ಗಣ್ಯರು, ವೈದ್ಯರು ಸಾಹಿತಿಗಳು, ಲೇಖಕರು, ಕವಿಗಳು, ನ್ಯಾಯವಾದಿಗಳು, ಸಿನಿಮಾ ನಿರ್ದೇಶಕರು ,ನಟರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಈ ಕೂಡಲೇ ಸರ್ಕಾರ ಸ್ಪಂದಿಸಬೇಕು ಮತ್ತು ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

20ನೇ ದಿನದ ಹೋರಾಟದ ಒತ್ತಡದಿಂದಾಗಿ ಸರ್ಕಾರ ಸ್ಪಂದಿಸಿದ್ದು ಇಂದು ಸಂಜೆ ಮಾತುಕತೆಗೆ ಸಂಘದ ನಾಯಕರನ್ನು ಕರೆದಿದ್ದಾರೆ. ಈ ಮಾತುಕತೆಯ ಆಧಾರದ ಮೇಲೆ ಈ ಚಳುವಳಿಯ ಭವಿಷ್ಯ ನಿಂತಿದೆ. ಒಂದು ವೇಳೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಹೋದರೆ ಈ ಇನ್ನಷ್ಟು ಗಟ್ಟಿಯಾಗಿ ಮುಂದಿನ ಹಂತದ ಹೋರಾಟವನ್ನು ಸಂಘಟಿಸಲಾಗುವುದು ಎಂದು ಹೇಳಿದರು.

See also  ಕಾಸರಗೋಡು ಜಿಲ್ಲೆಯಲ್ಲಿ ಇಂದು 18 ಮಂದಿಗೆ ಕೊರೊನಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು