News Kannada
Friday, December 02 2022

ಕರ್ನಾಟಕ

ತಿ.ನರಸೀಪುರಕ್ಕೆ ಆತಂಕ ತಂದ ಹಬ್ಬದ ಖರೀದಿ

Photo Credit :

ತಿ.ನರಸೀಪುರಕ್ಕೆ ಆತಂಕ ತಂದ ಹಬ್ಬದ ಖರೀದಿ

ತಿ.ನರಸೀಪುರ: ತಾಲೂಕು ದಂಡಾಧಿಕಾರಿಗಳ ಆದೇಶವನ್ನು ಪುರಸಭಾ ಮುಖ್ಯಾಧಿಕಾರಿಗಳು ಕಾರ್ಯರೂಪಕ್ಕೆ ತರಲು ವಿಫಲವಾದ ಹಿನ್ನಲೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಾಮಗ್ರಿಗಳನ್ನು ಖರೀದಿಸಲು ಜನರು ಮುಗಿ ಬೀಳುವ ಮೂಲಕ ತಿ.ನರಸೀಪುರಕ್ಕೆ ಆತಂಕ ತಂದೊಡ್ಡಿದ್ದಾರೆ.

ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು 100ರ ಗಡಿ ದಾಟಿರುವ ಹಿನ್ನಲೆಯಲ್ಲಿ ತಾಲೂಕು ದಂಡಾಧಿಕಾರಿ ಡಿ.ನಾಗೇಶ್ ತಮ್ಮ ಕಚೇರಿಯಲ್ಲಿ  ಪುರಸಭಾ ಮುಖ್ಯಾಧಿಕಾರಿ ಆರ್.ಅಶೋಕ್ ಜೊತೆ ಚರ್ಚಿಸಿ ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಜನ ದಟ್ಟಣೆ ಹೆಚ್ಚಾಗುವುದರಿಂದ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಕಾರ್ಯರೂಪಕ್ಕೆ ತರಲು ಸೂಚನೆ ನೀಡಿದರು.

ಆದರೆ ಪುರಸಭಾ ಮುಖ್ಯಾಧಿಕಾರಿಗಳು ನಿಯಮಗಳ ಬಗ್ಗೆ ಆದೇಶ ಹೊರಡಿಸಿ ಕಾರ್ಯರೂಪಕ್ಕೆ ತರದೆ ಮೌನ ವಹಿಸಿದ್ದು ಈ ಅವಾಂತರಕ್ಕೆ ಕಾರಣವಾಗಿದೆ. ಹಬ್ಬದ ಸಂಭ್ರಮದಲ್ಲಿ ಜನರು ಹೊಸ ಉಡುಗೆ ತೊಡುಗೆಯ ಖರೀದಿ, ಹೂವು, ತರಕಾರಿ, ಹಣ್ಣು ಹಂ¥ಲು, ದಿನಸಿ ಖರೀದಿ ಬಲು ಜೋರಾಗಿ ಮಾಡುವ ಆತುರದಲ್ಲಿದ್ದರಲ್ಲದೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾ ಏರುಗತಿಯಲ್ಲಿರುವುದನ್ನು ಲೆಕ್ಕಿಸಲೇ ಇಲ್ಲ. ವರಮಹಾಲಕ್ಷ್ಮಿ ಹಬ್ಬದ ಖರೀದಿಗೆ ಜನರು ಮುಂದಾಗಿರುವುದನ್ನು ಗಮನಿಸಿದರೆ ಸಾವಿನ ಸಂತೆಯಲಿ ಆಯಸ್ಸು ಖರೀದಿಸುವ ಕಾರ್ಯಕ್ಕೆ ಮುಂದಾದಂತೆ  ಭಾಸವಾಗುತಿತ್ತು.

ಪಟ್ಟಣದ ಮಾರುಕಟ್ಟೆ ರಸ್ತೆ, ಕಾಲೇಜು ರಸ್ತೆ, ಭಗವಾನ್ ಚಿತ್ರ ಮಂದಿರದ ರಸ್ತೆಗಳಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿದೆ ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನದ ಖರೀದಿಯಲ್ಲಿ ತೊಡಗಿದ್ದ ಸನ್ನಿವೇಶ ಕಣ್ಣೆದುರಿಗೆ ನಡೆÀಯುತ್ತಿದ್ದರೂ ತಾಲೂಕು ಆಡಳಿತ, ಪುರಸಭಾ ಇಲಾಖೆ ಕ್ರಮ ವಹಿಸದೆ ಇದ್ದದ್ದು ಇಲಾಖೆಗಳಲ್ಲಿ ಸಮನ್ವಯತೆ ಕೊರತೆ ಇದೇ ಎಂಬುದನ್ನು ಸಾಬೀತು ಪಡಿಸಿತು.

ಸರ್ಕಾರ, ಕೊರೋನಾ ತಡೆಗಟ್ಟಲು ಹರಸಾಹಸ ಪಡುತ್ತಿದ್ದರೆ, ಜನರು ತಮ್ಮ ಮೋಜು-ಮಸ್ತಿಗಾಗಿ ಹಾತೊರೆಯುತ್ತಿದ್ದದ್ದು ದಿಗಿಲು ಹುಟ್ಟಿಸುತಿತ್ತು. ತಾಲೂಕಿನಲ್ಲಿ ಸೋಂಕು ತನ್ನ ಆರ್ಭಟ ಮುಂದುವರೆಸಿದ್ದು, ಕೊರೋನಾ ಸೋಂಕಿತರ ಸಂಖ್ಯೆ ಶತಕದ ಗಡಿದಾಟಿದೆ. ಆರೋಗ್ಯ ಇಲಾಖೆ, ಪೌರಾಡಳಿತ ಇಲಾಖೆ, ಕಂದಾಯ ಇಲಾಖೆ, ಪೆÇಲೀಸ್ ಇಲಾಖೆಗಳು ಕೊರೊನಾ ವೈರಸ್ ಹತೋಟಿಗೆ ತರಲು ಭಗೀರಥ ಪ್ರಯತ್ನ ನಡೆಸಿದ್ದರೂ ಹಬ್ಬದ ಖರೀದಿಯಲ್ಲಿ ಜನ ಮುಗಿಬಿದ್ದಿರುವುದು ಆತಂಕಕಾರಿಯಾಗಿದೆ.

ಕೋವಿಡ್ 19 ಆದೇಶಗಳನ್ನು ಲೆಕ್ಕಿಸದೆÀ ಜನರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗದಿದ್ದಲ್ಲಿ ತಾಲೂಕಿನಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ದ್ವಿಗುಣಗೊಳ್ಳುವ ಸಾಧ್ಯತೆಯಿದೆ. ಇದರಿಂದ ಅಮಾಯಕ ಜೀವಗಳು ಬಲಿಯಾಗುವುದನ್ನು ತಪ್ಪಿಸುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ.

See also  ಜನರನ್ನು ಕರೆದೊಯ್ಯುತ್ತಿದ್ದ ರಿಕ್ಷಾದ ಮೇಲೆ ಕಾಡಾನೆಗಳ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು