News Kannada
Friday, December 02 2022

ಕರ್ನಾಟಕ

ಚುರುಕಾದ ಮುಂಗಾರು ;   ಕೊಡಗಿನಲ್ಲಿ  ಆರೆಂಜ್‌ ಅಲರ್ಟ್‌ ಘೋಷಣೆ 

Photo Credit :

ಚುರುಕಾದ ಮುಂಗಾರು ;   ಕೊಡಗಿನಲ್ಲಿ  ಆರೆಂಜ್‌ ಅಲರ್ಟ್‌ ಘೋಷಣೆ 

ಮಡಿಕೇರಿ:  ಜಿಲ್ಲೆಯಲ್ಲಿ  ಭಾನುವಾರದಿಂದಲೇ ಮುಂಗಾರು ಚುರುಕಾಗಿದ್ದು  ಜಿಲ್ಲಾಡಳಿತ ಈ ಕುರಿತು ಜನತೆಗೆ ಎಚ್ಚರಿಕೆಯನ್ನೂ ನೀಡಿದೆ. ಸೋಮವಾರ (ಇಂದು ) ಮತ್ತು ಮಂಗಳವಾರ  ಯೆಲ್ಲೋ ಅಲರ್ಟ್‌ ಘೋಷಿಸಲಾಗಿದ್ದು  ಹವಾಮಾನ ಇಲಾಖೆಯ  ಸೂಚನೆಯ ಪ್ರಕಾರ ಜಿಲ್ಲೆಯಲ್ಲಿ ೬೪.೫ ರಿಂದ ೧೧೫.೫ ಮಿಮಿ ಗಳ ವರೆಗೆ ಮಳೆ ಆಗಲಿದೆ.

  ದಿನಾಂಕ  ೪ ರಿಂದ  ೭ ರ ಬೆಳಿಗ್ಗೆ ವರೆಗೆ ಆರೆಂಜ್‌ ಅಲರ್ಟ್ ಘೋಷಿಸಲಾಗಿದ್ದು  ೧೦೪.೫ ರಿಂದ ೨೧೫.೫ ಮಿಮಿ ಮಳೆಯಾಗುವ ಸಂಬವವಿದೆ ಎಂದು  ಎಚ್ಚರಿಕೆ ನೀಡಿದೆ. ಜಿಲ್ಲೆಯಲ್ಲಿ  ಪ್ರಕೃತಿಕ ವಿಕೋಪದ ಸಂದರ್ಭದಲ್ಲಿ ಜನತೆಗೆ ನೆರವಾಗಲು 24×7  ಸಹಾಯವಾಣಿಯನ್ನು ಅರಂಬಿಸಲಾಗಿದ್ದು  ತೊಂದರೆ ಗೆ ಈಡಾದವರು ೦೮೨೭೨-೨೨೧೦೭೭ ಗೆ ಕರೆ ಮಾಡುವ ಮೂಲಕ  ನೆರವನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಇದಲ್ಲದೆ  ಎನ್‌ಡಿಅರ್‌ಏಫ್‌  ತಂಡವನ್ನೂ ಸನ್ನದ್ದ  ಸ್ಥಿತಿಯಲ್ಲಿ  ಇರಿಸಲಾಗಿದ್ದು  ಜನರು  ಎಚ್ಚರಿಕೆಯಿಂದ  ಇರಬೇಕೆಂದು ಕೋರಲಾಗಿದೆ. ಕಳೆದ ಎರಡು ವರ್ಷಗಳಿಂದ  ಅಗಸ್ಟ್‌ ತಿಂಗಳಿನಲ್ಲಿ ಜಿಲ್ಲೆಯ ಕೆಲವೆಡೆ ಮಳೆ ತೀವ್ರವಾದ ಸಂದರ್ಭದಲ್ಲಿ  ಭೂ ಕುಸಿತ ಮತ್ತು ಮನೆಗಳು ಕುಸಿತವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

See also  ಮದುವೆ ಮಂಟಪದಲ್ಲಿ ಮತದಾನದ ಅರಿವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು