News Kannada
Tuesday, December 06 2022

ಕರ್ನಾಟಕ

ಕಾಸರಗೋಡು: ಒಂದೇ ಮನೆಯ ನಾಲ್ವರ ಬರ್ಬರ ಹತ್ಯೆ

Photo Credit :

ಕಾಸರಗೋಡು: ಒಂದೇ ಮನೆಯ ನಾಲ್ವರ ಬರ್ಬರ ಹತ್ಯೆ

ಕಾಸರಗೋಡು: ಒಂದೇ ಮನೆಯ ನಾಲ್ವರನ್ನು ಯುವಕನೋರ್ವ ಕಡಿದು ಕೊಲೆಗೈದ ಹೃದಯ ವಿದ್ರಾವಕ  ಘಟನೆ ಸೋಮವಾರ ರಾತ್ರಿ ಬಾಯಾರು  ಕನಿಯಾಲ ಗುರುಕುಮೇರಿ ಎಂಬಲ್ಲಿ ನಡೆದಿದೆ. ಮೂವರು ಮಾವಂದಿರು ಮತ್ತು ಚಿಕ್ಕಮ್ಮನನ್ನು ಕೊಲೆ ಮಾಡಿದ್ದಾನೆ.

ಕೊಲೆಗೀಡಾದವರನ್ನು ಸದಾಶಿವ (54) ವಿಠಲ(52), ಬಾಬು(50), ಸಹೋದರಿ ದೇವಕಿ(58) ಎಂದು ಗುರುತಿಸಲಾಗಿದೆ.  ಸಂಬಂಧಿಕನಾದ ಉದಯ ಎಂಬಾತ ಈ ಕೃತ್ಯ ನಡೆಸಿದ್ದಾನೆ.

ಸಂಜೆ ಏಳು ಗಂಟೆ ಸುಮಾರಿಗೆ ಏಕಾಏಕಿ ಮನೆಗೆ ನುಗ್ಗಿದ ಈತ ಮಾರಕಾಸ್ತ್ರಗಳಿಂದ  ಕಡಿದು ಈ ಕೃತ್ಯ ನಡೆಸಿದ್ದಾನೆ.  ಬೊಬ್ಬೆ ಕೇಳಿ ಬಂದ ಸ್ಥಳೀಯರು ಆರೋಪಿಯನ್ನು ಹಿಡಿದು ಕಟ್ಟಿ ಹಾಕಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ.

ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು  ಡಿವೈಎಸ್ ಪಿ ಬಾಲಕೃಷ್ಣನ್ ನೇತೃತ್ವದ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ನಡೆಸುತ್ತಿದ್ದಾರೆ.

ಮೃತದೇಹಗಳನ್ನು ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ  ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಿದೆ.

ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ಈ ಬರ್ಬರ ಕೊಲೆಯ ಸುದ್ದಿ ತಿಳಿದು ನೂರಾರು ಮಂದಿ ಸ್ಥಳಕ್ಕೆ ತಲಪಿದ್ದರು.

See also  ಸಿದ್ದಗಂಗಾ ಶ್ರೀಗಳ ಉಸಿರಾಟದಲ್ಲಿ ಚೇತರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು