News Kannada
Friday, December 09 2022

ಕರ್ನಾಟಕ

ಕರ್ನಾಟಕಕ್ಕೆ ತೆರಳಲು ಅವಕಾಶಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

Photo Credit :

ಕರ್ನಾಟಕಕ್ಕೆ ತೆರಳಲು ಅವಕಾಶಕ್ಕೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ಕಾಸರಗೋಡು :  ಕರ್ನಾಟಕಕ್ಕೆ ತೆರಳಲು ಕೇರಳ ಸರಕಾರ ವಿಧಿಸಿರುವ ನಿರ್ಬಂಧವನ್ನು ಹಿಂತೆಗೆದು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ  ಬಿಜೆಪಿ  ಜಿಲ್ಲಾ ನೇತೃತ್ವದಲ್ಲಿ  ಶುಕ್ರವಾರ ಧರಣಿ ನಡೆಸಲಾಯಿತು.

ಬಿಜೆಪಿ  ಜಿಲ್ಲಾ ಕಚೇರಿಯಲ್ಲಿ  ಜಿಲ್ಲಾಧ್ಯಕ್ಷ   ಕೆ . ಶ್ರೀಕಾಂತ್   ನೇತೃತ್ವದಲ್ಲಿ  ಧರಣಿ ನಡೆಸಲಾಯಿತು .  ವಿಡಿಯೋ ಕಾನ್ಫರೆನ್ಸ್  ಮೂಲಕ  ರಾಜ್ಯಾಧ್ಯಕ್ಷ  ಕೆ . ಶ್ರೀಧರನ್ ಉದ್ಘಾಟಿಸಿದರು .  ಅಂತಾರಾಜ್ಯ ಸಂಚಾರಕ್ಕೆ ಕೇಂದ್ರ ಅನುಮತಿ ನೀಡಿದರೂ ಕೇರಳ ಸರಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು , ಕಾಸರಗೋಡಿನಿಂದ ಆಸ್ಪತ್ರೆ , ಶಿಕ್ಷಣ ,ವ್ಯಾಪಾರ ಹಾಗೂ ಇನ್ನಿತರ ಅಗತ್ಯಗಳಿಗಾಗಿ  ಮಂಗಳೂರನ್ನು ಆಶ್ರಯಿಸಿಕೊಂಡಿದ್ದು , ಕೇರಳ ಸರಕಾರದ ಧೋರಣೆಯಿಂದ ಗಡಿ ಪ್ರದೇಶದ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಜಿಲ್ಲಾ ಉಪಾಧ್ಯಕ್ಷ ಸದಾನಂದ ರೈ, ಅಧ್ಯಕ್ಷತೆ ವಹಿಸಿದ್ದರು.

ವಲಯ  ಉಪಾಧ್ಯ ಕ್ಷರಾದ ಸತೀಶ್ಚಂದ್ರ ಭಂಡಾರಿ , ನ್ಯಾಯವಾದಿ ವಿ . ಬಾಲಕೃಷ್ಣ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

See also  ಮಂಡ್ಯ: ಮಾರಣಾಂತಿಕ ಹಲ್ಲೆಗೊಳಗಾಗಿದ್ದ ವೃದ್ಧೆ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು