News Kannada
Thursday, December 08 2022

ಕರ್ನಾಟಕ

ಸ್ಕೂಟರ್ ಗೆ ಕಾರ್ ಡಿಕ್ಕಿ: ಸವಾರ ಸಾವು

Photo Credit :

ಸ್ಕೂಟರ್ ಗೆ ಕಾರ್ ಡಿಕ್ಕಿ: ಸವಾರ ಸಾವು

ಕಾಸರಗೋಡು: ಅತೀ ವೇಗದಿಂದ  ಬಂದ  ಕಾರು ಸ್ಕೂಟರ್ ಗೆ ಡಿಕ್ಕಿ  ಹೊಡೆದು   ಸವಾರ ಮೃತಪಟ್ಟ  ದಾರುಣ  ಘಟನೆ  ಮಂಗಳವಾರ ಸಂಜೆ  ಉಪ್ಪಳ  ಬಳಿಯ   ಬೇಕೂರಿನಲ್ಲಿ  ನಡೆದಿದೆ.

ಮೃತಪಟ್ಟವರನ್ನು ಬೇಕೂರು ಬೊಳ್ಳಾರಿನ  ಕೆ. ರಾಮ ಭಟ್ (62) ಎಂದು ಗುರುತಿಸಲಾಗಿದೆ.  ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಅತೀ ವೇಗದಿಂದ ಬಂದ  ಕಾರು  ಡಿಕ್ಕಿ ಹೊಡೆದಿದ್ದು, ಕಾರು ಚಾಲಕ  ಗಾಂಜಾ ಸೇವಿಸಿದ್ದ  ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ಅಪಘಾತ ನಡೆದ ಸಂದರ್ಭದಲ್ಲೇ ಈ  ದಾರಿಯಾಗಿ ಪೊಲೀಸ್  ಜೀಪು ಬರುವುದನ್ನು ಗಮನಿಸಿದ ಈತ ಕಾರು ಬಿಟ್ಟು ಸಮೀಪದ  ನಿರ್ಜನ ಸ್ಥಳದ ಮೂಲಕ ಪರಾರಿಯಾಗಿದ್ದಾನೆ.

ಈತ ಏಳಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿದ್ದಾನೆ. ಅಪಘಾತಕ್ಕಿಂತ ಮೊದಲು ಈತ ನಿರ್ಲಕ್ಷದಿಂದ ಕಾರು ಚಲಾಯಿಸಿ ಸ್ಥಳೀಯರಲ್ಲಿ  ಭಯ ಹುಟ್ಟಿಸಿದ್ದನು. ನಾಗರಿಕರು ಈತನನ್ನು ಹಿಡಿಯಲು  ಪ್ರಯತ್ನಿಸಿದಾಗ ಕಾರು ಸಹಿತ ಅತೀ  ವೇಗದಲ್ಲಿ ಪರಾರಿಯಾಗಲೆತ್ನಿಸಿದ್ದು, ಈ ಸಂದರ್ಭದಲ್ಲಿ ಅಪಘಾತ ನಡೆದಿದೆ.

ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು , ತನಿಖೆ  ನಡೆಸುತ್ತಿದ್ದಾರೆ

See also  ತೆಂಗಿನ ಮರಕ್ಕಿಂತಲೂ ಎತ್ತರ ಈ ಸೇತುವೆ, ಎಲ್ಲಿದೇ ಗೊತ್ತಾ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು