News Kannada
Thursday, December 01 2022

ಕರ್ನಾಟಕ

ಕೊಚ್ಚಿಹೋದ ಅಗಸರಹಳ್ಳಿ ಸೇತುವೆ: ಅಧಿಕಾರಿಗಳಿಂದ ಪರಿಶೀಲನೆ

Photo Credit :

ಕೊಚ್ಚಿಹೋದ ಅಗಸರಹಳ್ಳಿ ಸೇತುವೆ: ಅಧಿಕಾರಿಗಳಿಂದ  ಪರಿಶೀಲನೆ

 

ಬೇಲೂರು: ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾಗಿ ನಿರ್ಮಾಣಹಂತದಲ್ಲಿದ್ದ ಎರಡನೇ ಬಾರಿಗೆ ಅಗಸರಹಳ್ಳಿ ಸೇತುವೆ ಸಂಪೂರ್ಣ ಕೊಚ್ಚಿಹೋಗಿದ್ದು, ಗುಣಮಟ್ಟದ ಕಾಮಗಾರಿ ಮಾಡಲು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಹೇಳಿದರು.

 

ಅಗಸರಹಳ್ಳಿ ಸೇತುವೆ ಕೊಚ್ಚಿಹೋಗಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಅಧಿಕಾರಿಗಳ ನಿರ್ಲಕ್ಷ್ಯ ತಾಂತ್ರಿಕ ಕಾರಣದಿಂದಾಗಿ ಮಲೆನಾಡು ಭಾಗದ ಸೇತುವೆಗಳು ಬಾರಿ ಮಳೆಯಿಂದಾಗಿ ಸಂಪೂರ್ಣ ಕೊಚ್ಚಿಹೋಗುತ್ತಿದೆ. 2019-20ನೇ ಸಾಲಿನ ಬಜೆಟ್‍ನಲ್ಲಿ ಅನುಮೋದನೆ ಸಿಕ್ಕಿದಂತೆ ರಸ್ತೆ ಸೇರಿದಂತೆ ಎಲ್ಲ ಕಾಮಗಾರಿಗಳು ನಡೆಯುತ್ತಿದ್ದರೂ ಸಹ ಈ ಸೇತುವೆ ಮಾತ್ರ ಏಕೆ ಆಗಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ. ಈ ಸೇತುವೆ ಬಗ್ಗೆ ಯಾರೂ ಕೂಡ ರಾಜಕೀಯ ಮಾಡದೆ ತಕ್ಷಣವೇ ಕಾಮಗಾರಿ ಪ್ರಾರಂಭ ಮಾಡಬೇಕು, ಅಲ್ಲದೆ ಈ ಬಾರಿಯ 20-21 ರ ಬಜೆಟ್ ಯಾವುದೇ ಸಹ ಅನುಷ್ಠಾನವಾಗುವುದಿಲ್ಲ ಕಾರಣ ಸರ್ಕಾರದ ಬೊಕ್ಕಸಕ್ಕೆ ಯಾವ ಮೂಲದಿಂದ ಹಣ ಬರುತ್ತದೆ ಎಂದು ಖಾತ್ರಿ ಪಡಿಸಬೇಕು. ಈ ಬಾರಿ ಮಳೆಯಿಂದಾಗಿ ಆಗಿರುವ ನಷ್ಟವನ್ನು ರೈತರಿಗೆ ಪರಿಹಾರದ ನೀಡುತ್ತೇವೆ ಎಂಬುದು ಸುಳ್ಳು ಆಶ್ವಾಸನೆಯಾಗಿದ್ದು, ಕಳೆದ ಬಾರಿ ಆದಂತಹ ನಷ್ಟವನ್ನು ಭರಿಸಲು ಆಗದಂತ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಸರಿಯಲ್ಲ.

 

ಈಗಾಗಲೇ ಉಸ್ತುವಾರಿ ಸಚಿವರು, ಕಂದಾಯ ಸಚಿವರು ಬಂದು ಸರ್ವೆ ನಡೆಸಿ ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಕೊಡಿ ಎನ್ನುವುದು ಯಾವ ಮಟ್ಟಿಗೆ ಸರಿ, ತಾಲೂಕಿನಲ್ಲಿ ಆಗಿರುವ ಬೆಳೆ ನಷ್ಟದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಾಲೂಕಿನ ಅಧಿಕಾರಿ ವರ್ಗದವರಿಗೆ ಮಳೆಯಿಂದಾದ ನಷ್ಟದ ಬಗ್ಗೆ ಸಮಗ್ರ ವರದಿ ತಿಳಿದಿಲ್ಲವೇ ಎಂದು ಕಿಡಿಕಾರಿದರು.

 

ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನಿಶಾಂತ್, ಶ್ರೀನಿವಾಸ್, ಮಲ್ಲೇಶ್, ಗ್ರಾಮಸ್ಥರಾದ ಮನು, ಆನಂದ್, ನಾಗರಾಜ್, ರಘು, ಜಗದೀಶ್, ರಮೇಶ ಹಾಜರಿದ್ದರು.

See also  ಹತ್ತು ವರ್ಷ ಕಳೆದರೂ ಅನುಷ್ಠಾನಗೊಳ್ಳದ ಅರಣ್ಯ ಹಕ್ಕು ಮಸೂದೆ: ಇಂದು ಪ್ರತಿಭಟನೆಯ ಬಿಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು