News Kannada
Saturday, December 03 2022

ಕರ್ನಾಟಕ

ಪಿ.ಎಫ್.ಐ-ಎಸ್‍ಡಿಪಿಐ ನಿಷೇಧದ ಅಗತ್ಯವಿದೆ: ಸುರೇಶ್ ಕುಮಾರ್

Photo Credit :

ಪಿ.ಎಫ್.ಐ-ಎಸ್‍ಡಿಪಿಐ ನಿಷೇಧದ ಅಗತ್ಯವಿದೆ: ಸುರೇಶ್ ಕುಮಾರ್

ಚಾಮರಾಜನಗರ: ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಬಾರದು ಎನ್ನುವ ಧ್ಯೇಯವನ್ನಿಟ್ಟು ಕೊಂಡಿರುವ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಚಾಮರಾಜನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿರುವ ಗಲಾಟೆ ಒಂದು ದುರಂತವಾಗಿದ್ದು ಅದು ಮತ್ತೆ ಮರುಕಳಿಸಬಾರದು. ಈ ದುರಂತದ ಮೂಲ ಪುರುಷರು ಯಾರು ಎನ್ನುವುದನ್ನು ಪತ್ತೆ ಹಚ್ಚಬೇಕಿದೆ. ಈಗಗಾಲೇ  ಕೊಡಗು, ಮೈಸೂರಿನಲ್ಲಿ ನಡೆದಿರುವ ಗಲಾಟೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬೆಂಗಳೂರಿನಲ್ಲಿ ಆಗಿರುವ ಗಲಾಟೆಯಲ್ಲಿ ಎಸ್.ಡಿ.ಪಿ.ಐ ಸಂಘಟನೆಯ ಪಾತ್ರ ಬಹಳಷ್ಟಿದೆ ಎನ್ನುವ ಸುದ್ದಿ ಇಂದು ಹೊರಬಂದಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಬಾರದು ಎನ್ನುವ ಧ್ಯೇಯವನ್ನಿಟ್ಟುಕೊಂಡು ಶಾಂತಿ ಕದಡುತ್ತಿರುವ  ಸಂಘಟನೆಗಳು ದೇಶದ್ರೋಹಿ ಸಂಘಟನೆಗಳಾಗಿವೆ. ರಾಜ್ಯದಲ್ಲಿ ಈ ಸಂಘಟನೆಗಳನ್ನು ನಿಷೇಧಗೊಳಿಸಿ ಎಂದು ಎದ್ದಿರುವ ಜನರ ಕೂಗು ಸರ್ವ ಸಮ್ಮತವಾಗಿದೆ. ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲಸುವಂತೆ ಮಾಡಲು ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸಬೇಕು ಎನ್ನುವುದು ಕೂಡ ನನ್ನ ಬಲವಾದ ಅಭಿಪ್ರಾಯವಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಶಾಂತಿ ಸಭೆ ಮಾಡುವುದು ಸೂಕ್ತ. ಆದರೆ ಗಲಾಟೆ ವಿಚಾರದಲ್ಲಿ ಶಾಂತಿ ಸಭೆಯ ಅವಶ್ಯಕತೆ ಇರುವುದಿಲ್ಲ ಎನ್ನುವ ಒಳ್ಳೆಯ ಅಭಿಪ್ರಾಯವನ್ನು ಸಚಿವ ಅಶೋಕ್ ಅವರು ಹೇಳಿದ್ದಾರೆ ಎಂದು ತಿಳಿಸಿದರು.

ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ: ಆಗಸ್ಟ್ 31ರ ವರೆಗೆ ಶಾಲಾ ಕಾಲೇಜುಗಳನ್ನು ತೆರೆಯದಂತೆ ಕೇಂದ್ರ ಸರ್ಕಾರ ಹೇಳಿದೆ ಹಾಗಾಗಿ ರಾಜ್ಯದಲ್ಲಿ ಸದ್ಯಕ್ಕೆ ಶಾಲೆ ಆರಂಭಿಸುವ ಬಗ್ಗೆ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮೀಣ್ಯಂ ಬಳಿಯ ಪೆÇಲೀಸ್ ಅಧಿಕಾರಿ ಸಿಬ್ಬಂದಿ ಹುತಾತ್ಮರ ಸ್ಮಾರಕ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಳಿಕ ಸುದ್ದಿಗಾರರೂಂದಿಗೆ ಮಾತನಾಡಿ ವಿವರಿಸಿದರು.

ಈ ತಿಂಗಳ ಕೊನೆಗೆ  ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡು ಯಾವ ಆದೇಶ ನೀಡಲಿದೆ ಎನ್ನುವುದನ್ನು ಕಾಯುತ್ತಿದ್ದೇವೆ. ಕೇಂದ್ರ ಸರ್ಕಾರದ ಆದೇಶ ಬಂದ ಮೇಲೆ ನಮ್ಮ ಮುಂದಿನ ಹೆಜ್ಜೆ ಇಡಲು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಆಗಸ್ಟ್ ಕೊನೆ ಭಾಗದಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಯಾವ ರೀತಿಯಾಗಿ ಸಡಲಿಕೆ ನೀಡಿ ಆದೇಶ ಘೋಷಣೆ ಮಾಡಲಿದೆಯೋ ಅದನ್ನು ನೋಡಿಕೊಂಡು ರಾಜ್ಯ ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ ಎಂದು ಹೇಳಿದರು.

See also  ನಿಧಿ ಆಸೆಗೆ ತಾಯಿ-ಮಗುವನ್ನು ಬಲಿ ನೀಡಿದ ದುಷ್ಕರ್ಮಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು