News Kannada
Tuesday, December 06 2022

ಕರ್ನಾಟಕ

ಕೋವಿಡ್ ವಿಶ್ವ ಎದುರಿಸುತ್ತಿರುವ ಮಹಾ ದುರಂತ: ಸಚಿವ ಇ.ಚಂದ್ರಶೇಖರನ್

Photo Credit :

ಕೋವಿಡ್ ವಿಶ್ವ ಎದುರಿಸುತ್ತಿರುವ ಮಹಾ ದುರಂತ: ಸಚಿವ ಇ.ಚಂದ್ರಶೇಖರನ್

ಕಾಸರಗೋಡು : ಎರಡನೇ ಮಹಾಯುದ್ಧದ ಬಳಿಕ  ಕೋವಿಡ್  ವಿಶ್ವ    ಎದುರಿಸುತ್ತಿರುವ     ಮಹಾ ದುರಂತ . ಈ ವಿಪತ್ತನ್ನು ಎದುರಿಸಲು ಎಲ್ಲರೂ ಒಂದೇ ಮನಸ್ಸಿನಿಂದ ಮುನ್ನುಗ್ಗಬೇಕಿದೆ ಎಂದು  ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್  ಅಭಿಪ್ರಾಯಪಟ್ಟರು .

ಅವರು ಸ್ವಾತಂತ್ರೋತ್ಸವ ಇಂದು ಬೆಳಿಗ್ಗೆ  ನಗರಸಭಾ  ಸ್ಟೇಡಿಯಂ ನಲ್ಲಿ  ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ , ಧ್ವಜವಂದನೆ ನೀಡಿದ ಬಳಿಕ ಸಂದೇಶ ನೀಡಿದರು .

ಕೇರಳ ಇಂದು ಕೊರೋನಾ ಜೊತೆಗೆ ಪ್ರವಾಹ  ಎದುರಿಸುತ್ತಿದೆ. ಮುನ್ನಾರ್ ಪೆಟ್ಟುಮುಡಿಯಲ್ಲಿ  ನಡೆದ ಭೂಕುಸಿತ, ಕರಿಪ್ಪೂರಿನಲ್ಲಿ  ನಡೆದ  ವಿಮಾನ ದುರಂತದಿಂದ ಹಲವು ಸಾವು ನೋವುಗಳು ಉಂಟಾಗಿವೆ ಎಂದು ಹೇಳಿದರು .

 ದ್ವೇಷ ವನ್ನು ಮರೆತು ನಾವೆಲ್ಲರೂ  ಒಂದಾಗಬೇಕು ಇದರಿಂದ ಮಾತ್ರ ಸ್ವಾತಂತ್ರ್ಯಕ್ಕೆ ನೈಜ ಅರ್ಥ ಬರಲಿದೆ ಎಂದು ಅಭಿಪ್ರಾಯಪಟ್ಟರು .

ಸಮಾರಂಭದಲ್ಲಿ  ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು , ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್,  ಶಾಸಕರಾದ ಎಂ . ಸಿ ಖಮರುದ್ದೀನ್ , ಎನ್. ಎ ನೆಲ್ಲಿಕುನ್ನು ,  ಎಂ . ರಾಜ ಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ . ಜಿ . ಸಿ ಬಶೀರ್,  ನಗರಸಭಾ ಅಧ್ಯಕ್ಷೆ   ಬೀ ಫಾತಿಮ್ಮ ಇಬ್ರಾಹಿಂ ,
ಹಾಗೂ ಇತರ ಜನಪ್ರತಿನಿಧಿಗಳು , ಅಧಿಕಾರಿಗಳು ಉಪಸ್ಥಿತರಿದ್ದರು .

ಕೋವಿಡ್ ಮಾನದಂಡದಂತೆ ಕಾರ್ಯಕ್ರಮ ನಡೆಯಿತು . ಆಮಂತ್ರಿತರಿಗೆ  ಮಾತ್ರ  ಕಾರ್ಯಕ್ರಮಕ್ಕೆ ಆವಕಾಶ ನೀಡಲಾಗಿತ್ತು . ಮೂವರು  ವೈದ್ಯರು, ಇಬ್ಬರು ದಾದಿಯರು, ಇಬ್ಬರು ಪಾರಾ ಮೆಡಿಕಲ್ ಸಿಬ್ಬಂದಿ, ಇಬ್ಬರು ಸ್ವಚ್ಛತಾ  ಕಾರ್ಮಿಕ ರಿಗೆ ಕಾರ್ಯಕ್ರಮಕ್ಕೆ ವಿಶೇಷ   ಆಹ್ವಾನ ನೀಡಲಾಗಿತ್ತು .

 

See also  ಪರಿಸರ ಉಳಿಸಲು ಕೈಜೋಡಿಸಿ: ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು