News Kannada
Monday, December 05 2022

ಕರ್ನಾಟಕ

ಧೀರಜ್ ಪೊಯ್ಯೆಕಂಡ ಅವರ ‘ಮಿತಿ’ ಕಾದಂಬರಿ ಬಿಡುಗಡೆ

Photo Credit :

ಧೀರಜ್ ಪೊಯ್ಯೆಕಂಡ ಅವರ ‘ಮಿತಿ’ ಕಾದಂಬರಿ ಬಿಡುಗಡೆ

ಮಂಗಳೂರು: ಲೇಖಕ ನಿರಂತರ ಅಧ್ಯಯನಶೀಲನಾಗುವ ಜತೆಗೆ ತನ್ನ ಆವರಣವನ್ನು ಗಟ್ಟಿ ಮಾಡಿಕೊಂಡಾಗ ಆತನಿಂದ ಇನ್ನಷ್ಟು ಉತ್ತಮ ಬರಹಗಳು ಹೊರಹೊಮ್ಮಲು ಸಾಧ್ಯ ಎಂದು ಸಾಹಿತಿ ವಿವೇಕಾನಂದ ಕಾಮತ್ ಹೇಳಿದರು.

ಬಿಜೈ ಭಾರತಿನಗರದ ಆ್ಯಡ್ ಐಡಿಯಾದಲ್ಲಿ ಗುರುವಾರ ಯುವಲೇಖಕ, ಪತ್ರಕರ್ತ ಧೀರಜ್ ಪೊಯ್ಯೆಕಂಡ ಅವರ ‘ಮಿತಿ’ ಚೊಚ್ಚಲ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯ ಕಲ್ಲುಬಂಡೆಯಲ್ಲಿ ಮೂಡಿಬರುವ ಮೂರ್ತಿಯಂತೆ. ನಮ್ಮನ್ನು ನಾವೇ ಕೆತ್ತಿಕೊಂಡು, ಅದು ಅಲಂಕಾರಕ್ಕೆ ಆಗಬೇಕೆ, ಇಲ್ಲವೇ ಓದುಗರ ಮನಸ್ಸಲ್ಲಿ ಸ್ಥಾಪನೆಯಾಗಬೇಕೆ ಎನ್ನುವುದು ಲೇಖಕನ ಅಧ್ಯಯನಶೀಲತೆಯಿಂದ ಹೊರಬರುತ್ತದೆ ಎಂದರು.

ಮನುಷ್ಯ ತನ್ನ ಆಸೆ ಈಡೇರಿಸಲು ನೈತಿಕ ಅಥವಾ ಅನೈತಿಕ ಮಾರ್ಗಗಳನ್ನು ಅನುಸರಿಸುತ್ತಾನೆ. ಆದರೆ ಆರೋಗ್ಯಕರ ಸಮಾಜದಲ್ಲಿ ಬದುಕಬೇಕಾದರೆ ನೈತಿಕ ಮಾರ್ಗದಲ್ಲೇ ಬದುಕಬೇಕಾಗುತ್ತದೆ. ಬದುಕಿನೊಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ನಡೆಯುವುದು ಈ ಕಾದಂಬರಿಯಲ್ಲಿ ಬರುವ ಪಾತ್ರಗಳ ಮೂಲದ್ರವ್ಯವಾಗಿದೆ ಎಂದರು.

ಕಾದಂಬರಿ ನಾಲ್ಕು ಕವಲುಗಳಲ್ಲಿ ಸಾಗುತ್ತದೆ. ಒಂದು ರೀತಿಯಲ್ಲಿ ಈ ಪುಸ್ತಕವನ್ನು ಓದಿದಾಗ ಪದಬಂಧವನ್ನು ಪೂರ್ಣಗೊಳಿಸಿದ ಪರಿಪೂರ್ಣತೆ ಸಿಗುತ್ತದೆ ಎಂದರು.

ಕಾದಂಬರಿ ಪರಿಚಯ ಮಾಡಿದ ಬರಹಗಾರ್ತಿ ರಶ್ಮಿ ಶರ್ಮ, ಈ ಕಾದಂಬರಿ ನೈಜತೆಗೆ ತುಂಬಾ ಹತ್ತಿರವಾಗಿದೆ. ನಮ್ಮ ಸುತ್ತಮುತ್ತ ನಡೆಯುವ ವಿಷಯಗಳೇ ಈ ಪುಸ್ತಕದ ಪ್ರಮುಖ ವಸ್ತುವಾಗಿದೆ. ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಚಯಿಸುವ ಕೆಲಸವೂ ಈ ಕಾದಂಬರಿ ಮೂಲಕ ಆಗಿದೆ ಎಂದು ವಿವರಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಪತಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿ ಸಂಘಟನೆ (ಮಾಮ್) ಗೌರವಾಧ್ಯಕ್ಷ ವೇಣು ಶರ್ಮ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದಿನಕರ ಇಂದಾಜೆ ಉಪಸ್ಥಿತರಿದ್ದರು.

ಪತ್ರಕರ್ತರಾದ ಕೃಷ್ಣಮೋಹನ್ ಕಾರ್ಯಕ್ರಮ ನಿರೂಪಿಸಿದರು. ವೇಣುವಿನೋದ್ ಕೆ.ಎಸ್. ಸ್ವಾಗತಿಸಿದರು. ಧೀರಜ್ ಪೊಯ್ಯೆಕಂಡ ವಂದಿಸಿದರು. ಅವನಿ ಶರ್ಮ ಸಹಕರಿಸಿದರು.

ಮಿತಿ ಕಾದಂಬರಿಯು ಕನ್ನಡಲೋಕ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. 9632062405 ಸಂಖ್ಯೆಯ ಮೂಲಕವೂ ಪುಸ್ತಕವನ್ನು ಖರೀದಿಸಬಹುದು.

See also  ಅನಂತಕುಮಾರ್ ನಾಲಗೆ ಕತ್ತರಿಸಿದರೆ ಒಂದು ಕೋಟಿ ಬಹುಮಾನ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು