News Kannada
Friday, December 02 2022

ಕರ್ನಾಟಕ

ಹಾವೇರಿ ಜಿಲ್ಲಾ ಕೋವಿಡ್ ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಗೃಹ ಸಚಿವರು ಅಸಮಾಧಾನ

Photo Credit :

ಹಾವೇರಿ ಜಿಲ್ಲಾ ಕೋವಿಡ್ ಆಸ್ಪತ್ರೆ ಕಾರ್ಯವೈಖರಿ ಬಗ್ಗೆ ಗೃಹ ಸಚಿವರು ಅಸಮಾಧಾನ

ಹಾವೇರಿ: ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ತಾಲೂಕುಗಳ ಕೋವಿಡ್ ಆಸ್ಪತ್ರೆಗಳಲ್ಲಿ ಪಾಸಿಟಿವ್ ವ್ಯಕ್ತಿಗಳ ದಾಖಲಾತಿ, ಚಿಕಿತ್ಸೆ, ವೈದ್ಯರ ಹಾಜರಾತಿ ಸೇರಿದಂತೆ ಸಮಗ್ರ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆಗೆ ಉಪವಿಭಾಗಾಧಿಕಾರಿಗಳನ್ನು ನೇಮಕಮಾಡಲು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು.

ಕೋವಿಡ್ ನಿರ್ವಹಣೆ ಹಾಗೂ ಮಳೆಹಾನಿ, ನೆರೆ ಪರಿಸ್ಥಿತಿ ಕುರಿತಂತೆ ಜಿಲ್ಲಾಡಳಿತದೊಂದಿಗೆ ಗುರುವಾರ ಸಂಜೆ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯವೈಖರಿ ಹಾಗೂ ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆ ಸರ್ವೇ ಕುರಿತಂತೆ ಮಾಹಿತಿ ಪಡೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಆಸ್ಪತ್ತೆಯಲ್ಲಿ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಗೆ ಬೆಡ್ ಖಾಲಿ ಇದ್ದರೂ ಬೆಡ್‍ಗಳು ಇಲ್ಲ ಎಂದು ರೋಗಿಗಳನ್ನು ದಾಖಲುಮಾಡಿಕೊಳ್ಳದೆ ವಾಪಸ್ ಕಳುಹಿಸುತ್ತಿರುವ ದೂರುಗಳು ಬಂದಿವೆ. ಇಂತಹ ಘಟನೆಗಳು ಮರುಕಳಿಸಬಾರದು. ಜಿಲ್ಲೆಯಲ್ಲಿ ಯಾರೇ ಪಾಸಿಟಿವ್ ವ್ಯಕ್ತಿಗಳನ್ನು ಬೆಡ್‍ಗಳು ಇಲ್ಲ ಎಂದು ಚಿಕಿತ್ಸೆ ನಿರಾಕರಿಸಿ ವಾಪಸ್ ಕಳುಹಿಸಿದರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರ ಮೇಲೆ ಗಂಭೀರ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯರು ಆಸಕ್ತಿ ತೋರುತ್ತಿಲ್ಲ. ಸರ್ಕಾರಿ ಸೇವೆಗಿಂತ ಖಾಸಗಿ ಸೇವೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ. ನರ್ಸ್‍ಗಳ ಮೇಲೆ ಚಿಕಿತ್ಸೆಯ ಹೊಣೆಗಾರಿಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲ ವೈದ್ಯಕೀಯ ಸೌಲಭ್ಯಗಳು ಇದ್ದಾಗ್ಯೂ ಇಂತಹ ದೂರುಗಳು ಬರುತ್ತಿರುವ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಚಿಕಿತ್ಸೆ ನಿರಾಕರಣೆ, ನಿರ್ಲಕ್ಷ್ಯ, ಪ್ರವೇಶ ನೀಡದೇ ನೆಪಹೇಳೀ ಮನೆಗೆ ಕಳುಹಿಸುವ ಘಟನೆಗಳು ಜಿಲ್ಲೆಯಲ್ಲಿ ಮರುಕಳುಹಿಸಬಾರದು. ಯಾವುದೇ ರೋಗಿಯು ಚಿಕಿತ್ಸೆ ಇಲ್ಲದೆ ಹಿಂತಿರುಗಬಾರದು. ಇದರಿಂದ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ನೀವೇ ಕಾರಣರಾಗುತ್ತಿರಿ ಎಂದು ತೀವ್ರ ಅಸಮಾಧಾನದಿಂದ ನುಡಿದ ತಕ್ಷಣವೇ ವ್ಯವಸ್ಥೆ ಸುಧಾರಿಸಬೇಕು. ಜಿಲ್ಲಾ ಆಸ್ಪತ್ರೆಗೆ ಹಾವೇರಿ ಉಪವಿಭಾಗಾಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾ ಕೋವಿಡ್ ಆಸ್ಪತ್ರೆಯ ಎಲ್ಲ ಚಲನವಲನಗಳ ಬಗ್ಗೆ ನಿಗಾವಹಿಸಿ ಪ್ರತಿ ವರದಿ ಮಾಡುವಂತೆ ಸೂಚನೆ ನೀಡಿದರು. ಇದೇ ಮಾದರಿಯಲ್ಲಿ ತಾಲೂಕಾ ಕೋವಿಡ್ ಆಸ್ಪತ್ರೆಗಳ ಉಸ್ತುವಾರಿಗೆ ಸವಣೂರ ಹಾಗೂ ಹಾವೇರಿ ಉಪವಿಭಾಗಾಧಿಕಾರಿಗಳು ಆಯಾ ತಾಲೂಕಾ ವ್ಯಾಪ್ತಿಯ ಆಸ್ಪತ್ರೆಗಳ ಮೇಲೆ ನಿಗಾವಹಿಸುವಂತೆ ಸೂಚನೆ ನೀಡಿದರು.

ವಾರದಲ್ಲಿ ವ್ಯವಸ್ಥೆ: ಬ್ಯಾಡಗಿಯಲ್ಲಿ ತ್ವರಿತವಾಗಿ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಬೇಕು. ಸವಣೂರು, ಹಾನಗಲ್, ರಾಣೇಬೆನ್ನೂರ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ವ್ಯವಸ್ಥೆಗಳ ಹೆಚ್ಚಳ ಮಾಡಬೇಕು. ಬಂಕಾಪುರದಲ್ಲಿ 30 ಹಾಸಿಗೆಗಳ ಆಕ್ಸಿಜನ್ ಪೂರೈಕೆ ವ್ಯವಸ್ಥೆಯನ್ನು ವಾರದಲ್ಲಿ ಸಿದ್ಧಪಡಿಸಬೇಕು. ಅಗತ್ಯ ಔಷಧಿ ಖರೀದಿ, ಆಕ್ಸಿಜನ್ ಟ್ಯಾಂಕ್‍ಗಳ ಖರೀದಿಗೆ ತುರ್ತು ಕ್ರಮವಹಿಸಿ ಕೋವಿಡ್ ಸೋಂಕಿನಿಂದ ಮರಣಹೊಂದುವವರ ಪ್ರಮಾಣವನ್ನು ಇಳಿಮುಖಗೊಳಿಸಲು ತೀವ್ರತರ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.
ಮನೆಹಾನಿ ಸರ್ವೇ: ಮನೆಹಾನಿ ಸರ್ವೇ ಮಾಹಿತಿ ಪಡೆದ ಸಚಿವರು ಸರ್ವೇ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಬೆಳೆ ಹಾಗೂ ಮನೆಹಾನಿ ಸರ್ವೇಯಲ್ಲಿ ಕಳೆದ ನೆರೆಯ ಸಂದರ್ಭದಲ್ಲಿ ನಡೆದ ತಪ್ಪುಗಳು ಮರುಕಳುಹಿಸಿದರೆ, ಪರಿಹಾರ ವಿತರಣೆಯಲ್ಲಿ ಭ್ರಷ್ಟಾಚಾರದ ದೂರುಗಳು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

See also  ಸ್ವೆಟರ್ ಅಕ್ರಮ : ತಪ್ಪಿತಸ್ತರ ವಿರುದ್ಧ ಕ್ರಮಕ್ಕೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಒತ್ತಾಯ

ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಮೊಬೈಲ್ ಕರೆಯಿಂದ ಮಾಹಿತಿ ಪಡೆದು ಕುಳಿತಲ್ಲೇ ಮನೆಹಾನಿ ಹಾಗೂ ಬೆಳೆಹಾನಿಯನ್ನು ದಾಖಲಿಸುವ ಧೋರಣೆ ಕೈಬಿಡಬೇಕು. ಸ್ಥಳಕ್ಕೆ ಭೇಟಿ ನೀಡಿ ಸರ್ವೇನಡೆಸಬೇಕು. ಈ ಕುರತಂತೆ ತಕ್ಷಣವೇ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿಗಳು, ತಹಶೀಲ್ದಾರ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕೃಷಿ, ತೋಟಗಾರಿಕೆ ಅಧಿಕಾರಿಗಳ ಸಭೆ ಕರೆದು ಈ ಕುರಿತಂತೆ ಮಾರ್ಗದರ್ಶನ ನೀಡಬೇಕು.

ಅಧಿಕಾರಿಗಳ ತಂಡ ಖುದ್ದಾಗಿ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ವಾಸ್ತವತೆಯ ಆಧಾರದ ಮೇಲೆ ಹಾನಿಯ ಅಂದಾಜುಮಾಡಿ ವರದಿ ಮಾಡಬೇಕು. ಹಾನಿಯಾದ ಮನೆ ಅಥವಾ ಬೆಳೆಯ ಐದಾರು ಫೋಟೋಗಳನ್ನು ತೆಗೆಯಬೇಕು. ಹಾನಿಯ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನೆಯ ಮಾಲೀಕ ಅಥವಾ ಜಮೀನ ಮಾಲೀಕನನ್ನು ಕರೆದುಕೊಂಡು ಹೋಗಿ ಹಾನಿಯನ್ನು ದಾಖಲಿಸುವ ಪತ್ರದಲ್ಲಿ ಕಡ್ಡಾಯವಾಗಿ ಸಹಿ ಪಡೆಯಬೇಕೆಂದು ಸೂಚನೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು