News Kannada
Wednesday, December 07 2022

ಕರ್ನಾಟಕ

ಬೆಟ್ಟ ಕುಸಿದು ಮೃತಪಟ್ಟವರಿಗೆ ಹಿಂದೂ ಸಂಘಟನೆಗಳಿಂದ ಶ್ರದ್ಧಾಂಜಲಿ

Photo Credit :

ಬೆಟ್ಟ ಕುಸಿದು ಮೃತಪಟ್ಟವರಿಗೆ ಹಿಂದೂ ಸಂಘಟನೆಗಳಿಂದ ಶ್ರದ್ಧಾಂಜಲಿ

ಮಡಿಕೇರಿ: ತಲಕಾವೇರಿಯಲ್ಲಿ ಬೆಟ್ಟ ಕುಸಿದು ಮೃತರಾದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್, ಪತ್ನಿ ಶಾಂತ ಹಾಗೂ ಸೋದರ ಆನಂದತೀರ್ಥರ ಆತ್ಮಕ್ಕೆ ಶಾಂತಿ ಕೋರಿ ಭಾಗಮಂಡಲದ ಶಾಂತಿ ಮಟ್ಟದಲ್ಲಿ ಹಿಂದೂ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.

ಸ್ಥಳೀಯ ಕಾಶಿ ಮಠದಲ್ಲಿ ನಡೆದ ಸಭೆಯಲ್ಲಿ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್, ಶಾಸಕ ಕೆ.ಜಿ.ಬೋಪಯ್ಯ, ನಾರಾಯಣ ಆಚಾರ್ ಅವರ ಪುತ್ರಿಯರು, ಹಿಂದೂ ಸಂಘಟನೆಗಳ ಪ್ರಮುಖರು ಹಾಜರಿದ್ದು ಮೃತರಿಗೆ ಪುಷ್ಪ ನಮನ ಸಲ್ಲಿಸಿದರು.

ನಂತರ ಮಾತನಾಡಿದ ಜಗದೀಶ್ ಕಾರಂತ್ ಅವರು ತಲಕಾವೇರಿಯಲ್ಲಿ ನಾರಾಯಣ ಆಚಾರ್ ಅವರು ನೀಡಿದ ನಿರಂತರ ಸೇವೆಯನ್ನು ಶ್ಲಾಘಿಸಿದರು. ಸಮಾಜಮುಖಿ ಕಾರ್ಯ ಮತ್ತು ಸಂಘ ಪರಿವಾರದ ಸಂಘಟನೆಯನ್ನು ಕೊಡಗಿನಲ್ಲಿ ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದರು.

ವೇದಿಕೆಯ ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಜೀವನ್, ಕೊಡಗು ಸಂಘಟನಾ ಕಾರ್ಯದರ್ಶಿ ಬಿ.ಬಿ.ಮಹೇಶ್, ದಿನೇಶ್ ಕುಮಾರ್, ಜಾಲಿ ಪೂವಪ್ಪ, ಜಿಲ್ಲಾ ಸಂಘ ಚಾಲಕ್ ಚಕ್ಕೆರೆ ಮನುಕಾವೇರಪ್ಪ, ಬಿಜೆಪಿ ಪ್ರಮುಖ ಕೋಡಿ ಪೊನ್ನಪ್ಪ, ಡಾ.ಕೋಳಿಬೈಲು ಕುಶ್ವಂತ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ನಾರಾಯಣ ಆಚಾರ್ ಅವರ ಪುತ್ರಿಯರಾದ ಶಾರದ ಹಾಗೂ ನಮಿತ ಅವರುಗಳು ಘಟನೆಯ ಕುರಿತು ಜಗದೀಶ್ ಕಾರಂತ್ ಅವರೊಂದಿಗೆ ಚರ್ಚಿಸಿದರು. ತಾಯಿ ಶಾಂತ ಅವರ ಮೃತದೇಹ ಇನ್ನೂ ಕೂಡ ಪತ್ತೆಯಾಗದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಂತರ ಬೆಟ್ಟ ಕುಸಿದ ಪ್ರದೇಶಕ್ಕೆ ಜಗದೀಶ್ ಕಾರಂತ್ ಅವರು ಭೇಟಿ ನೀಡಿ ಪರಿಶೀಲಿಸಿದರು.

See also  ಕಾಸರಗೋಡು: ಹಾಡಹಗಲೇ ವಸತಿಗ್ರಹದಲ್ಲಿ ಕಳ್ಳತನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು