News Kannada
Sunday, November 27 2022

ಕರ್ನಾಟಕ

ಕೋಟೆ ಅರಮನೆ ಕಾಮಗಾರಿ : ಸೇವಾ ಶುಲ್ಕ ವಿಧಿಸದಂತೆ ಹೈಕೋರ್ಟ್ ಆದೇಶ - 1 min read

Photo Credit :

ಕೋಟೆ ಅರಮನೆ ಕಾಮಗಾರಿ : ಸೇವಾ ಶುಲ್ಕ ವಿಧಿಸದಂತೆ ಹೈಕೋರ್ಟ್ ಆದೇಶ

ಮಡಿಕೇರಿ: ನಗರದ ಕೋಟೆ ಅರಮನೆ ಅಭಿವೃದ್ಧಿ ಕಾಮಗಾರಿ ಸಂಬಂಧ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಇಂದು ನಡೆಯಿತು. ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಅಭಯ್ ಓಕ್ ಅವರ ನೇತೃತ್ವದ ವಿಭಾಗೀಯ ಪೀಠ ಪ್ರಾಚೀನ ಸಂರಕ್ಷಿತ ಸ್ಮಾರಕ ರಕ್ಷಿಸಬೇಕಾದ ಹೊಣೆ ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ್ದು, ಆದ್ದರಿಂದ ಶೇ.23ರ ಸೇವಾ ಶುಲ್ಕ ವಿಧಿಸಬಾರದೆಂದು ನಿರ್ದೇಶನ ನೀಡಿದೆ.

ಕರ್ನಾಟಕ ಉಚ್ಛ ನ್ಯಾಯಾಲಯ ಇದೇ ಪ್ರಕರಣದಲ್ಲಿ ನೀಡಿದ್ದ ನಿರ್ದೇಶನದಂತೆ ರಾಜ್ಯ ಸರ್ಕಾರ 10.70 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಈ ಕಾಮಗಾರಿಗೆ ಶೇ.23 ರ ಸೇವಾ ಶುಲ್ಕ ವಿಧಿಸುವುದರಿಂದ ಅಂದಾಜು 2.7 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ನಷ್ಟವಾಗುವುದರಿಂದ ಮತ್ತು ಈ ಅರಮನೆ ಸಂರಕ್ಷಿತ ಸ್ಮಾರಕವಾದ್ದರಿಂದ, ಇದರ ನಿರ್ವಹಣೆ ಪ್ರಾಚ್ಯ ವಸ್ತು ಇಲಾಖೆಯ ಜವಾಬ್ದಾರಿ ಎಂದು ಈ ಸೇವಾ ಶುಲ್ಕ ವಿಧಿಸುವುದನ್ನು ನಿರ್ಬಂಧಿಸಬೇಕು ಎಂದು ವಕೀಲ ರವೀಂದ್ರನಾಥ ಕಾಮತ್ ಅವರು ವಾದ ಮಂಡಿಸಿದರು.

ಅರಮನೆ ದುರಸ್ತಿ ಕಾಮಗಾರಿ ಸಮರ್ಪಕತೆ ಬಗ್ಗೆ ಜಿಲ್ಲಾಧಿಕಾರಿ ಅವರು ಉಪ ವಿಭಾಗಾಧಿಕಾರಿ ಸರಿಸಮನಾದ ಅಧಿಕಾರಿಯನ್ನು ನೇಮಿಸಿ ಕಾಮಗಾರಿ ಸಮರ್ಪಕ ನಿರ್ವಹಣೆ ಬಗ್ಗೆ ಕಾಲ ಕಾಲಕ್ಕೆ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಇದೇ ಸಂದರ್ಭದಲ್ಲಿ ನ್ಯಾಯಪೀಠ ನಿರ್ದೇಶಿಸಿದೆ ಎಂದು ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತÀ ವಿರೂಪಾಕ್ಷಯ್ಯ ಅವರು ತಿಳಿಸಿದ್ದಾರೆ.

See also  ಡಿಕೆಶಿ ಬಂಧನ ವಿರೋಧಿಸಿ ರಾಮನಗರದಾದ್ಯಂತ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು