News Kannada
Wednesday, October 05 2022

ಕರ್ನಾಟಕ

ಕೃಪೇಶ್–ಶರತ್ ಕೊಲೆ ಪ್ರಕರಣ: ಕೇರಳ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತ - 1 min read

Photo Credit :

ಕೃಪೇಶ್–ಶರತ್ ಕೊಲೆ ಪ್ರಕರಣ: ಕೇರಳ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ತಿರಸ್ಕೃತ

ಕಾಸರಗೋಡು : ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣದ ಸಿಬಿಐ ತನಿಖೆ ವಿರುದ್ಧ ಕೇರಳ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟಿನ ವಿಭಾಗೀಯ ಪೀಠ ತಿರಸ್ಕರಿಸಿದೆ .

ಕ್ರೈಂ ಬ್ರಾಂಚ್ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸಿ ತನಿಖೆಯನ್ನು ಸಿಬಿಐ ಗೆ ಒಪ್ಪಿಸಿ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಿತ್ತು . ಪ್ರಮುಖ ಆರೋಪಿ ಪೀತಾಂಬರನ್ ಸೇರಿದಂತೆ ಏಳು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

2019 ರ ಸೆಪ್ಟ0 ಬರ್ 30 ರಂದು ತೀರ್ಪು ನೀಡಲಾಗಿತ್ತು . ಈ ನಡುವೆ ಆರೋಪ ಪಟ್ಟಿ ರದ್ದುಗೊಳಿಸಿ ಏಕ ಸದಸ್ಯ ಪೀಠದ ಆದೇಶ ಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿತು. 2019 ರ ಫೆಬ್ರವರಿ 17 ರಂದು ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ರನ್ನು ಕೊಲೆಗೈಯ್ಯಲಾಗಿತ್ತು .
ರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಇಬ್ಬರನ್ನು ಪೆರಿಯ ರಸ್ತೆಯಲ್ಲಿ ತಂಡವು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿತ್ತು .

ಆರಂಭದಲ್ಲಿ ಬೇಕಲ ಪೊಲೀಸರು ತನಿಖೆ ನಡೆಸಿದ್ದರು . ಬಳಿಕ ಕ್ರೈಂ ಬ್ರಾಂಚ್ ಗೆ ತನಿಖೆಯನ್ನು ಹಸ್ತಾ0 ತರಿಸಲಾಗಿತ್ತು. ಪ್ರಕರಣದಲ್ಲಿ ಸಿಪಿಎಂ ಸ್ಥಳೀಯ ಸಮಿತಿ ಮಾಜಿ ಕಾರ್ಯದರ್ಶಿ ಪೀತಾಂಬರನ್ ( 35) ಪ್ರಮುಖ ಆರೋಪಿಯಾಗಿದ್ದು , 14 ಮಂದಿಯನ್ನು ಬಂಧಿಸಲಾಗಿತ್ತು.

ಸಿ . ಸಜಿ ( (40), ತಳಿಪರಂಬದ ಕೆ .ಎಂ ಸುರೇಶ್ ( 27) , ಆಟೋ ಚಾಲಕ ಕೆ . ಅನಿಲ್ ಕುಮಾರ್ ( 35), ಕಲ್ಯೊಟ್ ನ ಜಿ . ಗಿಜಿನ್ ( 26), ಆರ್ . ಶ್ರೀ ರಾಗ್ ( 22) , ಕುಂಡಂಗುಯಿ ಮೇಲಂಗೋಟ್ ನ ಎ . ಅಶ್ವಿನ್ ( 18), ಪಾಕಂ ನ ಎ . ಸುಭೀಶ್ ( 29) , ಎಂ . ಮುರಳಿ (36), ಟಿ . ರಂಜಿತ್ (46), ಪ್ರದೀಪ್ ( 42) , ಆಲಕ್ಕೋಡ್ ನ ಮಣಿಕಂಠನ್ ಹಾಗೂ ಸಿಪಿಎಂ ಪೆರಿಯ ಸ್ಥಳೀಯ ಸಮಿತಿ ಕಾರ್ಯದರ್ಶಿ ಎನ್ . ಬಾಲಕೃಷ್ಣನ್ , ಸಿಪಿಎಂ ಉದುಮ ವಲಯ ಕಾರ್ಯದರ್ಶಿ ಕೆ. ಮಣಿಕಂಠನ್ ಮೊದಲಾದವರನ್ನು ಕ್ರೈಂ ಬ್ರಾಂಚ್ ಬಂಧಿಸಿತ್ತು .

ಈ ಪೈಕಿ ಕೆ. ಮಣಿಕಂಠನ್ , ಬಾಲಕೃಷ್ಣನ್ ಸೇರಿದಂತೆ ಮೂವರಿಗೆ ಜಾಮೀನು ಲಭಿಸಿತ್ತು .

ಈ ನಡುವೆ ಕ್ರೈಂ ಬ್ರಾಂಚ್ ತನಿಖೆ ವಿಳಂಬ ಹಾಗೂ ಆರೋಪ ಪಟ್ಟಿ ಸಲ್ಲಿಸಲು ವಿಳಂಬ ಮಾಡಿದ್ದು , ಇದರಿಂದ ಕ್ರೈಂ ಬ್ರಾಂಚ್ ತನಿಖೆ ತೃಪ್ತಿಕರವಾಗಿಲ್ಲ ಎಂದು ಕೃತ್ಯದಲ್ಲಿ ಶಾಮೀಲಾದ ಸಿಪಿಎಂ ನ ,ಮುಖಂಡರನ್ನು ರಕ್ಷಿಸಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಕೃಪೇಶ್ ಮತ್ತು ಶರತ್ ಲಾಲ್ ರ ಕುಟುಂಬಸ್ಥರು ಸಿಬಿಐ ತನಿಖೆಗೆ ಹೈಕೋರ್ಟ್ ಮೊರೆ ಹೋಗಿದ್ದರು . ಹೈಕೋರ್ಟ್ ಕಳೆದ ಸೆಪ್ಟ 0 ಬರ್ ನಲ್ಲಿ ಸಿಬಿ ಐ ತನಿಖೆಗೆ ಆದೇಶಿಸಿತ್ತು . ಇದನ್ನು ಪ್ರಶ್ನಿಸಿ ಸರಕಾರ ಮೇಲ್ಮನವಿ ಸಲ್ಲಿಸಿತ್ತು . ಮಾತ್ರವಲ್ಲ ಸಿಬಿ ಐ ತನಿಖೆಗೆ ಮುಂದೆ ಬಂದಿದ್ದರೂ ತನಿಖೆಯ ಕಡತಗಳನ್ನು ಸಿ ಬಿ ಐ ಗೆ ಹಸ್ತಾ ತರಿಸಲು ಕ್ರೈಂ ಬ್ರಾಂಚ್ ನಿರಾಕರಿಸಿತ್ತು . ಮತ್ತೊಮ್ಮೆ ಕಾನೂನು ಮತ್ತು ರಾಜಕೀಯ ಹೋರಾಟಕ್ಕೆ ಕಾರಣವಾಗಿತ್ತು . ಇದೀಗ ಸಿಬಿಐ ತನಿಖೆಗೆ ಹೈಕೋರ್ಟ್ ಮತ್ತೆ ಆದೇಶ ನೀಡಿರುವುದು ಕೇರಳದ ಆಡಳಿತಾರೂಢ ಸರಕಾರಕ್ಕೆ ಹಿನ್ನಡೆಯಾಗಿದ್ದು , ಅಕ್ಟೋಬರ್ ನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಹಾಗೂ ಏಪ್ರಿಲ್ – ಮೇ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣಾ ಮಹತ್ವ ಪಡೆದುಕೊಂಡಿದೆ

See also  ಅತ್ಯಾಚಾರ ಆರೋಪಿಗೆ 25 ವರ್ಷ ಜೈಲು ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು