News Kannada
Thursday, September 29 2022

ಕರ್ನಾಟಕ

ಗಮನಸೆಳೆದ ನಾಗಮಂಗಲ ಸಾರಿಗೆ ಅಧೀಕ್ಷರ ಪರಿಸರ ಕಾಳಜಿ - 1 min read

Photo Credit :

ಗಮನಸೆಳೆದ ನಾಗಮಂಗಲ ಸಾರಿಗೆ ಅಧೀಕ್ಷರ ಪರಿಸರ ಕಾಳಜಿ

ನಾಗಮಂಗಲ: ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಆಯಾಯ ಇಲಾಖೆಯ ಕೆಲಸ ಕಾರ್ಯಗಳಿಗಷ್ಟೆ ಸೀಮಿತವಾಗಿರುತ್ತವೆ. ಆದರೆ ನಾಗಮಂಗಲ ಪಟ್ಟಣದ ಹೊರ ವಲಯದಲ್ಲಿರುವ ಸಹಾಯಕ ಸಾರಿಗೆ ಕಚೇರಿ ಮಾತ್ರ ವಿಭಿನ್ನವಾಗಿದೆ. ಇದಕ್ಕೆ ಕಾರಣ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ಅಧೀಕ್ಷಕರಾಗಿರುವ ಎಂ.ಜಿ.ಎನ್.ಪ್ರಸಾದ್ ಅವರ ಪರಿಸರ ಕಾಳಜಿಯಾಗಿದೆ.

ಇಲ್ಲಿ ಸಾರಿಗೆ ಇಲಾಖೆ ಕಚೇರಿ ಕಟ್ಟಡದ ಆವರಣದಲ್ಲಿ ಸುಮಾರು ಐದು ಎಕರೆ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಮರಗಿಡಗಳಿರುವುದನ್ನು ಕಾಣಬಹುದಾಗಿದೆ. ಅದರಲ್ಲೂ 200ಕ್ಕೂ ಹೆಚ್ಚು ವಿವಿಧ  ಬಗೆಯ ಪ್ರಭೇದಗಳ ಆಯುರ್ವೇದ ಗಿಡಗಳಿರುವುದೇ ಇಲ್ಲಿನ ವಿಶೇಷವಾಗಿದೆ.

ಸಾಮಾನ್ಯವಾಗಿ ಆರ್.ಟಿ.ಓ. ಕಚೇರಿಗಳೆಂದರೆ ಸಾರ್ವಜನಿಕರು ಲಂಚಾವತಾರ ಬಗ್ಗೆ ಮಾತನಾಡುತ್ತಾರೆ ಆದರೆ ನಾಗಮಂಗಲ ಆರ್.ಟಿ.ಓ. ಕಚೇರಿಯ ಅಧೀಕ್ಷಕರಾದ ಎಂ.ಜಿ.ಎನ್.ಪ್ರಸಾದ್ ವೃತ್ತಿ ಬದುಕಿನ ಜೊತೆಯಲ್ಲಿ ಪರಿಸರ ಪ್ರೇಮ ಮೈಗೂಡಿಸಿಕೊಂಡು ಕಚೇರಿಯಲ್ಲಿ ನಡೆಸುವ ರಾಷ್ಟ್ರೀಯ ಹಬ್ಬಗಳು ಹಾಗೂ ಭಾರತದ ಮಹನೀಯರ ದಿನವನ್ನು ನೆನಪಿಸುವ ಕಾರ್ಯಕ್ರಮಗಳ ಅಡಿಯಲ್ಲಿ ಒಬ್ಬೊಬ್ಬ ಗಣ್ಯರನ್ನು ಬರಮಾಡಿಕೊಂಡು ಒಂದೊಂದು ಗಿಡಗಳನ್ನು ಕಚೇರಿ ಆವರಣದಲ್ಲಿ ನೆಡುವಂತೆ ಮಾಡಿದ್ದು ಅವುಗಳು ಬೆಳೆದು ನಿಂತಿವೆ. ಗಿಡಮರಗಳನ್ನು ನೆಡುವುದಕ್ಕಿಂತ ಆ ಮರಗಳನ್ನು ಪೋಷಣೆ ಮಾಡಿ ಬೆಳೆಸಬೇಕು ಎಂಬ ವೇದವಾಕ್ಯದಿಂದ ಪೋಷಿಸುತ್ತಿದ್ದಾರೆ.

ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲೆ ಅಪಾರವಾದ  ಗೌರವವನ್ನು ಇಟ್ಟುಕೊಂಡಿರುವ ಇವರು ಕಚೇರಿ ಆವರಣದ ಸುತ್ತಮುತ್ತ ಇರುವಂತಹ ಮುನ್ನೂರಕ್ಕೂ ಹೆಚ್ಚು ಗಿಡ-ಮರಗಳಿಗೆ ಹೆಣ್ಣು ಮಕ್ಕಳ ಮತ್ತು ಸಾಧನೆ ಮಾಡಿದ ಮಹಿಳೆಯರ ಹೆಸರನ್ನು ಪ್ರತಿ ಗಿಡದ ಮರಗಳಿಗೆ ನಾಮಫಲಕ ಹಾಕಿಸಿ ಗಮನಸೆಳೆದಿದ್ದಾರೆ.

ಇನ್ನು ಕಚೇರಿಗೆ ಬರುವ ಸಾರ್ವಜನಿಕರಿಗೆ ಸ್ವಚ್ಛ ಪರಿಸರ ಹಸಿರುಮಯ ವಾತಾವರಣದಲ್ಲಿ  ಗಿಡ-ಮರಗಳ ಜೊತೆಗೆ ಆಯುರ್ವೇದ ಗಿಡಗಳ ಅರಿವು ಮೂಡಿಸುವ ಉದ್ದೇಶದಿಂದ ಕಚೇರಿಯ ಸುತ್ತಮುತ್ತ ಸುಂದರ ವಾತಾವರಣ ನಿರ್ಮಿಸಿದ್ದಾರೆ. ವಿಶ್ವದಲ್ಲಿ ಭಾರತ ದೇಶವು ಆಯುರ್ವೇದ ಗಿಡಮೂಲಿಕೆಗಳಿಂದ ಗುರುತಿಸಿಕೊಂಡಿದ್ದು, ಒಂದು ನಿಗದಿತ ಪ್ರದೇಶದಲ್ಲಷ್ಟೆ ಅಲ್ಲದೆ ಎಲ್ಲ ಕಡೆಯಲ್ಲೂ ಗಿಡಮೂಲಿಕೆಗಳು ಇರುವಂತಾಗಬೇಕು. ಆರೋಗ್ಯವಂತ ಜೀವನಕ್ಕಾಗಿ ಪ್ರತಿ ಪ್ರಜೆಯೂ ಕೂಡ ತಮ್ಮ ಮನೆಅಂಗಳ ಹಾಗೂ ತೋಟದಲ್ಲಿ ಆಯುರ್ವೇದ ಗಿಡಗಳನ್ನು ಬೆಳೆಸಿ ಆರೋಗ್ಯವಂತರಾಗಬೇಕು ಪ್ರಪಂಚದ ಉಳಿವಿಗಾಗಿ ಸ್ವಚ್ಛ ಪರಿಸರಕ್ಕಾಗಿ ಮರಗಳನ್ನು ಬೆಳೆಸಬೇಕೆಂಬ ಅರಿವನ್ನು ಮೂಡಿಸುತ್ತಿದ್ದಾರೆ.

ಐದು ಎಕರೆ ಪ್ರದೇಶದಲ್ಲಿ ಕಚೇರಿ ಕಟ್ಟಡವನ್ನು ಹೊರತುಪಡಿಸಿ ಸುತ್ತಮುತ್ತ ಪ್ರದೇಶವು ಹಸಿರು ಮಾಯವಾಗಿದೆ  ನೆರಳು ನೀಡುವ ಮರ ಗಿಡಗಳಾದ ಹೊಂಗೆಮರ. ಹೆಬ್ಬೇವುಮರ. ಬೆಳೆದು ನಿಂತಿವೆ. ಹಣ್ಣಿನ ಮರಗಳಾದ ಹಲಸು. ಸಿಬಿ. ಸಪೋಟ. ಹಲವಾರು ತೆಂಗಿನ ಗಿಡಮರಗಳನ್ನು ಬೆಳೆಸಿದ್ದಾರೆ. ವಿಶೇಷ ಎಂಬಂತೆ ಪರಿಸರದ ಉಳಿವಿಗಾಗಿ ಸರ್ಕಾರ ತನ್ನ ಅಧೀನದ ಹಲವಾರು ಇಲಾಖೆಗಳ ಮೂಲಕ ಹಲವಾರು ಯೋಜನೆಗಳನ್ನು ಹಮ್ಮಿಕೊಂಡ್ದಿದ್ದರೂ ಅರಣ್ಯ ನಾಶ ಎಗ್ಗಿಲ್ಲದಂತೆ ನಡೆಯುತ್ತಿದೆ.

ಆದ್ದರಿಂದ ಭೂಮಿಯ ಮೇಲೆ ಅತಿವೃಷ್ಟಿ ಮತ್ತು ಅನಾವೃಷಿ ರುದ್ರ ತಾಂಡವಾಡುತ್ತಿದೆ. ಇಂಥ ಸಮಯದಲ್ಲಿ ತನ್ನ ಸರ್ಕಾರಿ ನೌಕರಿಯ ನಡುವೆಯೂ ಪರಿಸರ ಉಳಿವಿಗಾಗಿ ಸಮಯವನ್ನು ಮೀಸಲಿಟ್ಟು ಶ್ರಮಿಸುತ್ತಿರುವ ಪರಿಸರ ಪ್ರೇಮಿ ಎಂ.ಜಿ.ಎನ್. ಪ್ರಸಾದ್ ತನ್ನ ಕಚೇರಿಯ ಮೇಲಧಿಕಾರಿಗಳು ನೌಕರವರ್ಗ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

See also  ವಯನಾಡು ಭಾಗದಲ್ಲಿ ನಕ್ಸಲ್ ಪ್ರತ್ಯಕ್ಷ: ತೀವ್ರ ಕಟ್ಟೆಚ್ಚರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು