News Kannada
Wednesday, October 05 2022

ಕರ್ನಾಟಕ

ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ, ಮಹಿಳೆಯ ಬಂಧನ - 1 min read

Photo Credit :

ಕಾಸರಗೋಡು: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ, ಮಹಿಳೆಯ ಬಂಧನ

ಕಾಸರಗೋಡು : ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆಯೊಂದು ಕುಂಬಳೆಯಿಂದ ತಡವಾಗಿ ಬೆಳಕಿಗೆ ಬಂದಿದ್ದು , ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಧ್ಯವರ್ತಿಯಾಗಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತೆನನ್ನು ಕಟ್ಟದಂಗಡಿ ಪೆರಿಯಡ್ಕದ ಕಾಲನಿಯ ಸುನಿತಾ ( 30) ಬಂಧಿತಳು .‌

2018 ರ ಡಿಸಂಬರ್ 18 ರಂದು ರಾತ್ರಿ ಘಟನೆ ನಡೆದಿತ್ತು . ಉತ್ಸವ ನೋಡಲೆಂದು ಬಾಲಕಿಯನ್ನು ಕರೆದೊಯ್ದು ನಿರ್ಜನ ಸ್ಥಳದಲ್ಲಿ ಕೃತ್ಯ ನಡೆಸಿದ್ದು, ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ರಾತ್ರಿ ಓರ್ವ ಆರೋಪಿಯ ಬೈಕ್ ನಲ್ಲಿ ಸುನಿತಾ ಳು ಬಾಲಕಿಯನ್ನು ಕರೆದುಕೊಂಡು ಹೋಗಿದ್ದು , ಕುಂಬಳೆ ಸರಕಾರಿ ಆಸ್ಪತ್ರೆ ತಲಪಿದಾಗ ಇನ್ನೋರ್ವ ಆರೋಪಿ ಕಾರಿನಲ್ಲಿ ಬಂದಿದ್ದು , ಬಳಿಕ ಯುವತಿ ಸೇರಿದಂತೆ ಮೂವರು ಬಾಲಕಿಯನ್ನು ಬಲವಂತವಾಗಿ ಕಾರಿಗೆ ಹತ್ತಿಸಿ ಕಾಡಿಗೆ ಕರೆದೊಯ್ದು ಇಬ್ಬರು ಕೃತ್ಯ ನಡೆಸಿರುವುದಾಗಿ ಪೊಲೀಸರಿಗೆ ಲಭಿಸಿದ ದೂರನಲ್ಲಿ ತಿಳಿಸಲಾಗಿದೆ.

ಕಳೆದ ತಿಂಗಳು ಈ ಬಾಲಕಿಗೆ ಬದಿಯಡ್ಕ ನಿವಾಸಿಯೋರ್ವ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ತನಿಖೆ ನಡೆಸಿದ್ದು , ಈ ಸಂದರ್ಭದಲ್ಲಿ ಕುಂಬಳೆ ಯಲ್ಲೂ ದೌರ್ಜನ್ಯಕ್ಕೆ ಒಳಗಾಗಿರುವ ಬೆಚ್ಚಿ ಬೀಳುವ ಅಂಶವು ಬೆಳಕಿಗೆ ಬಂದಿದೆ. ಇದೀಗ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

See also  ರಾಮಮಂದಿರ ನಿರ್ಮಾಣಕ್ಕೆ ದಾನ ಕೊಟ್ಟವರ ಮನೆ ಗುರುತು ಮಾಡಿಕೊಳ್ಳುತ್ತಿರುವ ಕಾರಣವೇನು: ಕುಮಾರ ಸ್ವಾಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು