News Kannada
Friday, October 07 2022

ಕರ್ನಾಟಕ

ಕುಂಬಳೆಯಲ್ಲಿ ಸಮಯ ಪ್ರಜ್ಞೆ ಮೆರೆದ ಆರೋಗ್ಯ ಸಿಬ್ಬಂದಿ: ತಪ್ಪಿದ ಕೊರೋನಾ ಹರಡುವಿಕೆ - 1 min read

Photo Credit :

ಕುಂಬಳೆಯಲ್ಲಿ ಸಮಯ ಪ್ರಜ್ಞೆ ಮೆರೆದ ಆರೋಗ್ಯ ಸಿಬ್ಬಂದಿ: ತಪ್ಪಿದ ಕೊರೋನಾ ಹರಡುವಿಕೆ

ಕಾಸರಗೋಡು: ಕೊರೊನಾ  ನಿಯಂತ್ರಣ  ದ್ರಷ್ಟಿಯಿಂದ  ಹೋರಾಡುತ್ತಿರುವ    ಆರೋಗ್ಯ ಇಲಾಖಾ ಸಿಬಂದಿಗಳ  ಸಮಯ   ಪ್ರಜ್ಞೆ ಹಾಗೂ ಮುಂಜಾಗ್ರತಾ ಕ್ರಮದಿಂದ ಕುಂಬಳೆಯಲ್ಲಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿ ಹಾಗೂ ಈ ಕಾರ್ಯ ಮಾದರಿ ಎನಿಸಿದೆ.

ವೃದ್ದೆಯೊಬ್ಬರ  ಸಾವಿನ ಸಂಬಂಧ ಮನೆಯಲ್ಲಿ ಸೇರಿದ್ದ ಅನೇಕ ಮಂದಿಗೆ ಕೊರೊನಾ ತಗುಲುವ ಸಾಧ್ಯತೆಯಿತ್ತು. ಆದರೆ ಆ ಭೀತಿಯನ್ನು ಆರೋಗ್ಯ  ಸಿಬಂದಿಗಳು ಹೋಗಲಾಡಿಸಿದ್ದಾರೆ. ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಟುಂಬವೊಂದರ ಸದಸ್ಯರ ಕೊರೊನಾ ತಪಾಸಣೆಯ  ವರದಿ ಹೊರ ಬಂದ  ಸಂದರ್ಭದಲ್ಲೇ  ಆ ಮನೆಯ ವಯೋವೃದ್ಧೆಯೊಬ್ಬರು ನಿಧನರಾಗಿರುವ ಮಾಹಿತಿ ಆರೋಗ್ಯ ಕಾರ್ಯಕರ್ತರಿಗೆ ಲಭಿಸಿತ್ತು. ಈ ಕುಟುಂಬದ ಮೂವರು ಸದಸ್ಯರಲ್ಲಿ ಕೊರೊನಾ ಪಾಸಿಟಿವ್‌ ಪತ್ತೆಯಾಗಿತ್ತು.

ತಕ್ಷಣ ಆ ಮನೆಗೆ ಧಾವಿಸಿ ಬಂದ ಆರೋಗ್ಯ ಕಾರ್ಯಕರ್ತರು, ಇತರರು ಯಾರೂ ಈ ಕಡೆಗೆ ಬರದಂತೆ ತಡೆದಿದ್ದಾರೆ. ಕೂಡಲೇ ಮೃತದೇಹವನ್ನೂ ಆಂಟಿಜೆನ್‌ ತಪಾಸಣೆಗೆ ಒಳಪಡಿಸಿದಾಗ ಮೃತರಿಗೂ ಕೊರೊನಾ ಪಾಸಿಟಿವ್‌ ಪತ್ತೆಯಾಗಿತ್ತು. ಈ ವೇಳೆ ಕೊರೊನಾ ಮಾನದಂಡಂತೆ ಅಂತ್ಯಕ್ರಿಯೆ ನಡೆಸುವಂತೆ ಮನೆಯವರಿಗೆ ತಿಳಿಸಲಾಗಿತ್ತು.

ಬುಧವಾರ ಬೆಳಗ್ಗಿನ ಜಾವ 4.30ಕ್ಕೆ ಈ ಘಟನೆ ನಡೆದಿತ್ತು. ಸೋಮವಾರ ವೈದ್ಯಕೀಯ ಶಿಬಿರದಲ್ಲಿ ನಡೆಸಿದ ಕೊರೊನಾ ತಪಾಸಣೆಯಲ್ಲಿ ಮೃತರ ಇಬ್ಬರು ಸೊಸೆಯಂದಿರು ಮತ್ತು ಮೂರು ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್‌  ದ್ರಢಪಟ್ಟಿತ್ತು. ಹಾಸಿಗೆ ಹಿಡಿದಿದ್ದ ವಯೋವೃದ್ಧೆಯನ್ನು ತಪಾಸಣೆಗೆ ಒಳಪಡಿಸಿರಲಿಲ್ಲ. ಈ ವೃದ್ದೆ ಮೃತಪಟ್ಟಿದ್ದಾರೆ.

ಸದ್ಯ ಕೊರೊನಾ ಪಾಸಿಟಿವ್‌ ಆಗಿರುವವರನ್ನು ತಕ್ಷಣ ಕ್ವಾರಂಟೈನ್‌ ಮಾಡುವಂತೆ ಆದೇಶಿಸಲಾಗಿ ದ್ದು . ಈ ಹಿನ್ನೆಲೆಯಲ್ಲಿ ಅವರು ಮಂಜೇಶ್ವರದ ಗೋವಿಂದ ಪೈ ಸರಕಾರಿ ಕಾಲೇಜಿನ ಕೋವಿಡ್‌ ಫಸ್ಟ್‌ ಲೈನ್‌ ಟ್ರೀಟ್‌ಮೆಂಟ್‌ ಸೆಂಟರ್‌ಗೆ ದಾಖಲಾಗಿದ್ದಾರೆ. ಮೃತದೇಹವನ್ನು ಕೊರೊನಾ ಸಂಹಿತೆಯ ಪ್ರಕಾರ ದಫನ ಮಾಡಲಾಗಿದೆ. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್‌, ಆರೋಗ್ಯ ಇನ್ಸ್‌ಪೆಕ್ಟರ್‌ರಾದ ಕುರಿಯಾಕೋಸ್‌ ಈಪ್ಪನ್‌, ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಮತ್ತಿತರರು ನೇತೃತ್ವ ವಹಿಸಿದ್ದರು.

ವೃದ್ದೆ  ಸಾವನ್ನಪ್ಪುವ ಮುನ್ನ ಹಲವಾರು ಮಂದಿ  ಈ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಇವರನ್ನು ಕೂಡಲೇ ತಪಾಸಣೆಗೆ ಒಳಗಾಗುವಂತೆ  ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.

See also  ಬಂದ್ ಗೆ ಉತ್ತರ ಕನ್ನಡದಲ್ಲಿ ಮಿಶ್ರ ಪ್ರತಿಕ್ರಿಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು