News Kannada
Monday, September 26 2022

ಕರ್ನಾಟಕ

ಕಲಬುರ್ಗಿ ಜಿಲ್ಲಾಧಿಕಾರಿಯಾಗಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅಧಿಕಾರ ಸ್ವೀಕಾರ - 1 min read

Photo Credit :

ಕಲಬುರ್ಗಿ ಜಿಲ್ಲಾಧಿಕಾರಿಯಾಗಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅಧಿಕಾರ ಸ್ವೀಕಾರ

ಕಲಬುರ್ಗಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಐ.ಎ.ಎಸ್.ಅಧಿಕಾರಿ ಶ್ರೀಮತಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಶನಿವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.

ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಶರತ್ ಬಿ. ಅವರನ್ನು ಶುಕ್ರವಾರ ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾಅವರನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು. ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಕಲಬುರಗಿ ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿಗಳಾಗಿದ್ದಾರೆ.

2010ನೇ ಬ್ಯಾಚಿನ ಐ.ಎ.ಎಸ್.ಅಧಿಕಾರಿಯಾಗಿರುವ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು ಪ್ರಸ್ತುತ ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇವರು ಈ ಹಿಂದೆ 2013ನೇ ಸಾಲಿನಲ್ಲಿ ಫೆಬ್ರವರಿ 18ರಿಂದ ಜೂನ್ 15ರ ವರೆಗೆ, ಸೆಪ್ಟೆಂಬರ್ 5 ರಿಂದ ಡಿಸೆಂಬರ್ 12ರ ವರೆಗೆ ಹಾಗೂ ಡಿಸೆಂಬರ್ 29 ರಿಂದ ಡಿಸೆಂಬರ್ 31ರ ವರೆಗೆ ಕಲಬುರಗಿ ಜಿಲ್ಲೆಯ ಸೇಡಂ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.Ḍ

See also  ಕುಂಬಳೆಯಲ್ಲಿ ಸಮಯ ಪ್ರಜ್ಞೆ ಮೆರೆದ ಆರೋಗ್ಯ ಸಿಬ್ಬಂದಿ: ತಪ್ಪಿದ ಕೊರೋನಾ ಹರಡುವಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು