News Kannada
Friday, September 30 2022

ಕರ್ನಾಟಕ

ಮುಕ್ತ ವಿಶ್ವವಿದ್ಯಾಲಯದ ಹಿಂದಿನ ನ್ಯೂನ್ಯತೆ ಬಗೆಹರಿದಿದೆ:ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ - 1 min read

Photo Credit :

ಮುಕ್ತ ವಿಶ್ವವಿದ್ಯಾಲಯದ ಹಿಂದಿನ ನ್ಯೂನ್ಯತೆ ಬಗೆಹರಿದಿದೆ:ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್

ಕಾರವಾರ:ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಹಿಂದೆ ಇದ್ದ ಎಲ್ಲ ನ್ಯೂನ್ಯತೆ ಬಗೆ ಹರಿದಿದ್ದು ವಿಶ್ವ ವಿದ್ಯಾಲಯಕ್ಕೆ ಯು.ಜಿ.ಸಿ ಮಾನ್ಯತೆ ಲಭಿಸಿದೆ. ಹೀಗಾಗಿ ಸೆ. 1ರಿಂದ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭಿಸಲಾಗಿದೆ ಎಂದು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಹೇಳಿದ್ದಾರೆ.

ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವ ವಿದ್ಯಾಲಯದಲ್ಲಿ ಈ ಹಿಂದೆ ಪ್ರವೇಶ ಪಡೆದವರಿಗೆ ತೊಂದರೆ ಉಂಟಾಗಿತ್ತು. ತೊಂದರೆ ಬಗೆ ಹರಿಸುವ ನಿಟ್ಟಿನಲ್ಲಿ 2001ರಿಂದ ಪ್ರವೇಶ ಪಡೆದು ಅರ್ದಕ್ಕೆ ನಿಲ್ಲಿಸಿದ್ದ ಎಲ್ಲರಿಗೂ ಪದವಿ ಪೂರೈಸಲು ಅವಕಾಶ ಕೊಡಲಾಗಿದೆ. ಪ್ರಸ್ತುತ ಇನ್ನಷ್ಟು ಹೊಸ ಕೋರ್ಸಗಳಿಗೆ ಅವಕಾಶ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೇ ಪ್ರವೇಶ ಪಡೆಯಬಹುದಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಹೊರತು ಪಡಿಸಿ ಉಳಿದ ಯಾವ ವಿಶ್ವ ವಿದ್ಯಾಲಯವೂ ದೂರ ಶಿಕ್ಷಣ ಪ್ರವೇಶಾತಿ ನೀಡುತ್ತಿಲ್ಲ. ಈ ವಿಶ್ವ ವಿದ್ಯಾಲಯದಿಂದ ಮಾತ್ರ ದೂರ ಶಿಕ್ಷಣ ಪ್ರವೇಶ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಪ್ರಸ್ತುತ ಸಂಪೂರ್ಣ ಡಿಜಿಟಲಿಕರಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ. ಆಫ್, ರೇಡಿಯೋ ಹಾಗೂ ವೆಬ್ ಸೈಟ್ ಮೂಲಕ ಶಿಕ್ಷಣ ಪಡೆಯಲು ಇಲ್ಲಿ ಅವಕಾಶವಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಪಡೆಯಬಹುದು ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ 24 ಜನ ಕೆಎಎಸ್ ಪರೀಕ್ಷೆ ಉತ್ತಿರ್ಣರಾಗಿದ್ದಾರೆ. ಅವರ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದರು. ಕಾಲೇಜು ಹೋಗಿ ಶಿಕ್ಷಣ ಪಡೆಯುವುದು ಹಾಗೂ ದೂರ ಶಿಕ್ಷಣಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ. ಇಲ್ಲಿ ಮೇಲ್ ವಿಳಾಸದ ಮೂಲಕ ಅಂಕಪಟ್ಟಿಗಳನ್ನು ನೀಡುವ ವಿಧಾನವಿದೆ ಎಂದರು. ಪ್ರಮುಖರಾದ ಸುದಾಕರ ಹೊಸಳ್ಳಿ ಇದ್ದರು.

See also  ಮುಂದಿನ 3 ದಿನ ಭಾರಿ ಮಳೆ ಸಾಧ್ಯತೆ : ಕೊಡಗು, ಉಡುಪಿ, ಚಿಕ್ಕಮಗಳೂರಿನಲ್ಲಿ ಯೆಲ್ಲೊ ಅಲರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು