News Kannada
Sunday, September 25 2022

ಕರ್ನಾಟಕ

ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1765ಕ್ಕೆ ಏರಿಕೆ - 1 min read

Photo Credit :

ಕೊಡಗಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1765ಕ್ಕೆ ಏರಿಕೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 17 ಹಾಗೂ ಮಧ್ಯಾಹ್ನ 7 ಮಂದಿ ಸೇರಿದಂತೆ 24  ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1765ಕ್ಕೆ ಏರಿಕೆಯಾಗಿದ್ದು, ಈ ಪೈಕಿ 1409 ಮಂದಿ ಗುಣಮುಖರಾಗಿದ್ದಾರೆ.

ಸೋಮವಾರಪೇಟೆ ಯಡೂರುವಿನ ಮಾವಿನಕಟ್ಟೆ ಬಳಿಯ 26ವರ್ಷದ ಪುರುಷ, ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೊಲೀಸ್ ವಸತಿಗೃಹದ 26 ವರ್ಷದ ಪುರುಷ,ರೋಟರಿ ಹಾಲ್ ಬಳಿಯ 39 ವರ್ಷದ ಪುರುಷ,ಪುಟಾಣಿ ನಗರದ 58 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕುಶಾಲನಗರ ಬಸವೇಶ್ವರ ಬಡಾವಣೆಯ 3ನೇ ಬ್ಲಾಕಿನ 23 ಮತ್ತು 58ವರ್ಷದ ಮಹಿಳೆಯರು,ಮಡಿಕೇರಿ ಸ್ಟುವರ್ಟ್ ಹಿಲ್ ರಸ್ತೆಯ ಲಾಲಿ ಪೆಟಲ್ಸ್ ಹೋಂಸ್ಟೇಯ 41 ವರ್ಷದ ಪುರುಷ, ಸೋಮವಾರಪೇಟೆ ಬೆಳ್ಳೂರು ರಸ್ತೆಯ ವಿನಾಯಕ ರೈಸ್ ಮಿಲ್ ಬಳಿಯ 58 ವರ್ಷದ ಮಹಿಳೆ,ಐಗೂರು ಗ್ರಾಮದ 35 ವರ್ಷದ ಮಹಿಳೆ, 38ವರ್ಷದ ಪುರುಷ, 55 ವರ್ಷದ ಮಹಿಳೆ ಮತ್ತು 17 ವರ್ಷದ ಬಾಲಕನಲ್ಲಿ ಸೋಂಕು ಗೋಚರಿಸಿದೆ.

ವೀರಾಜಪೇಟೆ ಕೋತೂರು ಗ್ರಾಮದ ಮಾರಮ್ಮ ದೇವಾಲಯ ಬಳಿಯ 68 ವರ್ಷದ ಮಹಿಳೆ, 48 ಮತ್ತು 84ವರ್ಷದ ಪುರುಷರು, ಸೋಮವಾರಪೇಟೆ ಶಾಂತಳ್ಳಿ ಗ್ರಾಮದ 56ಮತ್ತು 27 ವರ್ಷದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.

ಮಂಗಳವಾರ ಮಧ್ಯಾಹ್ನ ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಪರೀಕ್ಷೆಗೊಳಪಟ್ಟ ಮಡಿಕೇರಿ ಮಕ್ಕಂದೂರು ಗ್ರಾದಮ 61 ವರ್ಷದ ಪುರುಷ, ಮಡಿಕೇರಿ ವಿದ್ಯಾನಗರ ಕೇಂದ್ರೀಯ ವಿದ್ಯಾಲಯ ಬಳಿಯ 29 ವರ್ಷದ ಪುರುಷ, ವೀರಾಜಪೇಟೆ ಪಂಜರಪೇಟೆಯ 42 ವರ್ಷದ ಪುರುಷ, ಮಡಿಕೇರಿ ಪೆನ್ಷನ್ ಲೇನ್‍ನ ಅಖಿಲ ರವಿ ಆರ್ಯುವೇದ ಆಸ್ಪತ್ರೆ ಬಳಿಯ 24 ವರ್ಷದ ಪುರುಷ, ಕುಶಾಲನಗರ ರೋಟರಿ ಕ್ಲಬ್ ಮುಂಭಾಗದ 43 ವರ್ಷದ ಮಹಿಳೆ, ಮಡಿಕೇರಿ ಮೈತ್ರಿಹಾಲ್ ಸಮೀಪದ ಪೊಲೀಸ್ ವಸತಿಗೃಹದ 59 ವರ್ಷದ ಪುರುಷ ಹಾಗೂ ಕುಶಾಲನಗರ ಬಸವೇಶ್ವರ ಬಡಾವಣೆಯ 55 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1765ರಷ್ಟಾಗಿದ್ದು, ಈ ಪೈಕಿ 1409ಮಂದಿ ಗುಣಮುಖರಾಗಿದ್ದಾರೆ. 333 ಸಕ್ರಿಯ ಪ್ರಕರಣಗಳಿದ್ದು, 23ಮಂದಿ ಸಾವಿಗೀಡಾದ್ದಾರೆ.ಜಿಲ್ಲೆಯಲ್ಲಿನ ಒಟ್ಟು ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 294 ರಷ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

See also  ಬಿಪಿಎಲ್ ಕಾರ್ಡ್ ದಾರರಿಗೆ ರಾಜ್ಯ ಸರ್ಕಾರದಿಂದ ಕಂಬಳಿ ಭಾಗ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು