News Kannada
Saturday, October 01 2022

ಕರ್ನಾಟಕ

ಚಾಮರಾಜನಗರದಲ್ಲಿ ಹುತಾತ್ಮ ಅರಣ್ಯಾಧಿಕಾರಿಗಳ ಸ್ಮರಣೆ - 1 min read

Photo Credit :

ಚಾಮರಾಜನಗರದಲ್ಲಿ ಹುತಾತ್ಮ ಅರಣ್ಯಾಧಿಕಾರಿಗಳ ಸ್ಮರಣೆ

ಚಾಮರಾಜನಗರ: ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ಸಂಪತ್ತನ್ನು ಉಳಿಸುವ ಸಲುವಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟು ಹುತಾತ್ಮರಾದ ಅರಣ್ಯಾಧಿಕಾರಿಗಳಿಗೆ ಗೌರವ ಸಮರ್ಪಣೆ ಸಲ್ಲಿಸಲಾಯಿತು.

ನಗರದ ಸಸ್ಯಕ್ಷೇತ್ರದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕ ಕೇಂದ್ರದಲ್ಲಿ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಣೆ ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣೆಗಾಗಿ ಸೇವೆಯಲ್ಲಿದ್ದಾಗಲೇ ಹುತಾತ್ಮರಾದ ಅಧಿಕಾರಿಗಳ ಸ್ಮಾರಕಕ್ಕೆ ವಿವಿಧ ಗಣ್ಯರು ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ವಿನಯ್ ಅವರು ಸೆ.11 1991ರಲ್ಲಿ ಜಿಲ್ಲೆಯ ಗೋಪಿನಾಥಂ ಅರಣ್ಯದಲ್ಲಿ ಅರಣ್ಯಾಧಿಕಾರಿ ಶ್ರೀನಿವಾಸ್ ಅವರು ವೀರಪ್ಪನ್ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದವರ ಸ್ಮರಣೆಗಾಗಿ ಕೇಂದ್ರಸರ್ಕಾರವು ಈ ದಿನವನ್ನು ಹುತಾತ್ಮರ ದಿನವನ್ನಾಗಿ ಘೋಷಿಸಿದೆ ಎಂದರು.

ಅರಣ್ಯ ಇಲಾಖೆಯ ಸೇವೆಯು ದೇಶದ ಗಡಿ ಕಾಯುವ ಯೋಧರ ಕರ್ತವ್ಯಕ್ಕೆ ಸಮನಾಗಿದೆ. ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅರಣ್ಯದಲ್ಲಿರುವ ಪ್ರಾಕೃತಿಕ ಸಂಪನ್ಮೂಲಗಳು ಹಾಗೂ ವನ್ಯಜೀವಿಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದರೆ ಕಾಡಿನ ಸಂಪತ್ತನ್ನು ಉಳಿಸಿ ಬೆಳೆಸಬೇಕು. ಉತ್ತಮ ಪರಿಸರ ಕಾರ್ಯದಲ್ಲಿ ಅರಣ್ಯ ಸಂರಕ್ಷಣೆ ಪ್ರಮುಖವಾಗಿದೆ ಎಂದು ಹೇಳಿದರು.

ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಯೋಜನೆಯ ಪತ್ರಾಂಕಿತ ವ್ಯವಸ್ಥಾಪಕರಾದ ಪರಮೇಶ್ವರ್, ಮುಖ್ಯ ವಲಯ ಅರಣ್ಯಾಧಿಕಾರಿ ಕಚೇರಿ ಅಧೀಕ್ಷಕರಾದ ಶೇಷಪ್ರಸಾದ್, ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಹುತಾತ್ಮರ ಗೌರವಾರ್ಥ ರಾಷ್ಟ್ರಗೀತೆಯೊಂದಿಗೆ ಮೂರು ಸುತ್ತಿನ ಗುಂಡು ಹಾರಿಸ ಲಾಯಿತು. ಎರಡು ನಿಮಿಷಗಳ ಮೌನ ಆಚರಿಸಲಾಯಿತು.

See also  ಯಡಿಯೂರಪ್ಪ ಕಣ್ಣೀರಿಗೆ ಯಾರು ಕಾರಣ ಬಹಿರಂಗಪಡಿಸಿ : ಡಿ ಕೆ ಶಿವಕುಮಾರ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು