News Kannada
Friday, September 30 2022

ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಕೊರೋನಾ ಸೋಂಕಿಗೆ 5 ಸಾವು - 1 min read

Photo Credit :

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಕೊರೋನಾ ಸೋಂಕಿಗೆ 5 ಸಾವು

ಕಾರವಾರ: ಜಿಲ್ಲೆಯಲ್ಲಿ ಬುಧವಾರ 200 ಹೊಸ ಕೊರೋನಾ ಸೋಂಕಿತರು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಈವರೆಗೆ 7560 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದೆ.

ಬುಧವಾರ ಪತ್ತೆಯಾದ ಪ್ರಕರಣಗಳ ಪೈಕಿ ಕಾರವಾರ 38,  ಅಂಕೋಲಾ 14, ಕುಮಟಾ 29, ಹೊನ್ನಾವರ 27, ಭಟ್ಕಳ 7,  ಶಿರಸಿ 33, ಸಿದ್ದಾಪುರ 6, ಯಲ್ಲಾಪುರ 27, ಮುಂಡಗೋಡ 8, ಹಳಿಯಾಳದಲ್ಲಿ 11, ಪ್ರಕರಣ ಪತ್ತೆಯಾಗಿದೆ.  ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಜನರಲ್ಲಿ ಇನ್ನಷ್ಟು ಆತಂಕ ಎದುರಾಗಿದೆ.

170 ಜನ ಗುಣಮುಖ

ಜಿಲ್ಲೆಯ ವಿವಿಧ ತಾಲೂಕಿನ ಕೊರೊನಾ ವಾರ್ಡ್ ಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸೋಂಕಿತರ ಪೈಕಿ ಬುಧವಾರ 136 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ  5305  ಜನರು ಗುಣಮುಖರಾಗಿದ್ದಾರೆ. ಬಿಡುಗಡೆಯಾದವರ ಪೈಕಿ ಕಾರವಾರ 4, ಅಂಕೋಲಾ 7, ಕುಮಟಾ 12, ಹೊನ್ನಾವರ 13, ಭಟ್ಕಳ 10, ಶಿರಸಿ 5, ಸಿದ್ದಾಪುರ 12, ಯಲ್ಲಾಪುರ 42, ಮುಂಡಗೋಡ 8, ಹಳಿಯಾಳ 3 ಹಾಗೂ ಜೊಯಿಡಾದಲ್ಲಿ 20 ಜನ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಐದು ಸಾವು

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ ಐದು ಜನ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 90 ಏರಿಕೆಯಾಗಿದೆ. ಮೃತಪಟ್ಟವರ ಪೈಕಿ ಹೊನ್ನಾವರ 2, ಭಟ್ಕಳ, ಯಲ್ಲಾಪುರ, ಮುಂಡಗೋಡದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಜಿಲ್ಲೆಯ ಕಾರವಾರದಲ್ಲಿ 9, ಅಂಕೋಲಾ 7, ಕುಮಟಾ 4, ಹೊನ್ನಾವರ 12, ಭಟ್ಕಳ 15, ಶಿರಸಿ 10, ಸಿದ್ದಾಪುರ 1, ಯಲ್ಲಾಪುರ 3, ಮುಂಡಗೋಡ 6, ಹಳಿಯಾಳ 22, ಜೊಯಿಡಾ 1  ಜನರು ಈವರೆಗೆ ಮೃತಪಟ್ಟಿದ್ದಾರೆ.  ಕೊರೊನಾದಿಂದ  ಮೃತಪಟ್ಟವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

See also  ರೈಲಿನಿಂದ ಹಾರಿ ಕಳವು ಆರೋಪಿ ಪರಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು