News Kannada
Sunday, September 25 2022

ಕರ್ನಾಟಕ

ಅರಣ್ಯದೊಳಗೆ ಉಳಿದುಕೊಂಡು ಶ್ರೀಗಂಧ ಕದಿಯುತಿದ್ದ ಕಳ್ಳರ ಬಂಧನ - 1 min read

Photo Credit :

ಅರಣ್ಯದೊಳಗೆ ಉಳಿದುಕೊಂಡು ಶ್ರೀಗಂಧ ಕದಿಯುತಿದ್ದ ಕಳ್ಳರ ಬಂಧನ

ಚಾಮರಾಜನಗರ: ಇಲ್ಲಿಗೆ ಸಮೀಪದ ಹನೂರು ತಾಲೂಕಿನ ವಿವಿಧೆಡೆ ಅಕ್ರಮವಾಗಿ ಶ್ರೀಗಂಧದ ಕಡಿತಲೆ, ತುಂಡುಗಳಾಗಿ ಪರಿವರ್ತಿಸಿ, ಮಾರಾಟ ಮಾಡಲು ಪಿ.ಜಿ.ಪಾಳ್ಯ ವಲಯದ ಅರಣ್ಯ ಪ್ರದೇಶದ ಮಾರ್ಗವಾಗಿ ಅಕ್ರಮವಾಗಿ ಶ್ರೀಗಂಧವನ್ನು ಸಾಗಿಸುತ್ತಿದ್ದ  ಆರೋಪದ ಮೇಲೆ ಹನೂರು ತಾ. ಕೆ.ಕೆ. ಡ್ಯಾಂ ಗ್ರಾಮದ ಮಾದೇವ ಅಲಿಯಾಸ್ ಕೋಣೂರ ಬಿನ್ ಕುಂಬೇಗೌಡ , ಎಂಬಾತನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ.

ನಾಪತ್ತೆ ಆಗಿರುವ ಆರೋಪಿಗಳನ್ನು ,ಕುಂಬೇಗೌಡ ಅಲಿಯಾಸ್ ಕುಂಬ ಬಿನ್ ಮಾದೇಗೌಡ,ರಂಗ ಬಿನ್ ಲೇ. ಕುಂಬೇಗೌಡ,ಅಬ್ದುಲ್ ಜಾಬೀರ್ ಅಲಿಯಾಸ್ ಜಾಬು ಬಿನ್ ಲೇ. ಅಬ್ದುಲ್ ಸುಬಾನ್ ಎಂದು ಗುರುತಿಸಲಾಗಿದ್ದು, ಈ ಪ್ರಕರಣದಲ್ಲಿ ಒಟ್ಟು 16 ಕೆ.ಜಿ. ಶ್ರೀಗಂಧದ ತುಂಡುಗಳು ಮತು ಚಕ್ಕೆಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದ್ದು ಪಿ.ಜಿ. ಪಾಳ್ಯ ವಲಯದಲ್ಲಿ ಆರೋಪಿತರ ಮೇಲೆ ಅರಣ್ಯ ಮೊಕದ್ದಮೆ ದಾಖಲಿಸಲಾಗಿದೆ.

ಸದರಿ ಆರೋಪಿಗಳ ತಂಡವು ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕಿನ ವಿವಿದೆಡೆ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ನುಸುಳಿ ಕೆಲವು ದಿನಗಳು ಅರಣ್ಯದೊಳಗೆ ಉಳಿದುಕೊಂಡು ಶ್ರೀಗಂಧದ ಮರಗಳನ್ನು ಹುಡುಕಿ ಅಲ್ಲಿಯೇ ಪರಿವರ್ತಿಸಿ, ನಂತರ ಕಾಲು ನಡಿಗೆಯಲ್ಲಿಯೇ ವಿವಿದೆಡೆ ಮಾರಾಟ ಮಾಡುತ್ತಿದ್ದು ಕಳೆದ ಐದಾರು ವರ್ಷಗಳಿಂದ ಈ ತಂಡ  ಸಕ್ರಿಯವಾಗಿ ವಿವಿದೆಡೆ ಅಪರಾಧ ಕೃತ್ಯಗಳನ್ನು ಎಸಗಿದ್ದು. ಈ ಬಗ್ಗೆ ಇತ್ತೀಚಿಗೆ ಶ್ರೀಗಂಧದ ಕಳ್ಳತನ ಹೆಚ್ಚುತ್ತಿರುವ ಬಗ್ಗೆ  ವಿಶೇಷ ನಿಗಾ ಇರಿಸಲು ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸೂಚನೆ ಮೇರೆಗೆ ಎಲ್ಲಾ ವಲಯಗಳಲ್ಲೂ ವಿಶೇಷ  ನಿಗಾ ಇರಿಸಲಾಗಿದ್ದು, ಈ ದಿನ ಸದರಿ ತಂಡದ ಓರ್ವನನ್ನು ಶ್ರೀಗಂಧದ ಮರದ ತುಂಡುಗಳ ಸಮೇತ ಬಂಧಿಸಲಾಗಿದೆ.

ತಲೆಮರೆಸಿಕೊಂಡಿರುವ ಆರೊಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

See also  ಒಂದೇ ಹುಡುಗಿಗಾಗಿ ಇಬ್ಬರು ಯುವಕರ ಮಾರಾಮಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು