News Kannada
Tuesday, October 04 2022

ಕರ್ನಾಟಕ

ಕಾಸರಗೋಡಿನಲ್ಲಿ ಮಳೆ ಅಬ್ಬರಕ್ಕೆ ಇಬ್ಬರು ಬಲಿ - 1 min read

Photo Credit :

ಕಾಸರಗೋಡಿನಲ್ಲಿ ಮಳೆ ಅಬ್ಬರಕ್ಕೆ ಇಬ್ಬರು ಬಲಿ

ಕಾಸರಗೋಡು: ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಇಬ್ಬರು ಬಲಿಯಾಗಿದ್ದಾರೆ. 25 ಕ್ಕೂ ಅಧಿಕ ಮನೆಗಳು  ಹಾನಿಗೊಂಡಿವೆ. 20ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಮಧೂರು ಚೇನಕ್ಕೋಡುನಲ್ಲಿ ಬಯಲಿನಲ್ಲಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು  ಚೆಂದ್ರಶೇಖರ(37) ಹಾಗೂ ಚೆರ್ವತ್ತೂರು ಮಯ್ಯಚ್ಚಿಯಲ್ಲಿ ಸುಧಾಕರ(50) ಎಂಬವರು ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಅಡ್ಕತ್ತಬೈಲ್ ಬೀಚ್ ಪರಿಸರದಲ್ಲಿ ಇಂದು ಬೆಳಗ್ಗೆ ಬೀಸಿದ ಸುಂಟರ ಗಾಳಿಗೆ 12ರಷ್ಟು ಮನೆಗಳು ಭಾಗಶ: ಹಾನಿಗೊಂಡಿದೆ.

ಮಧೂರು ಪಟ್ಲದಿಂದ ಮೂರು ಹಾಗೂ ಮೊಗರು ಪರಿಸರದಿಂದ ಏಳು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಮಂಜೇಶ್ವರ ತಾಲೂಕಿನ ಲ್ಲಿ ಫೆಲಿಕ್ಸ್ ಡಿ ಸೋಜ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಗೊಂಡಿದೆ. ಕೊಡ್ಲಮೊಗರು  ಎಂಬಲ್ಲಿ  ಅಬ್ದುಲ್ ಅಝೀಜ್   ಹಾಗೂ ಕುಂಬ್ಡಾಜೆ  ಉಬ್ರಂಗಳದ ಲಕ್ಷ್ಮಿ ನಾರಾಯಣ ಭಟ್ ರವರ ಮನೆ ಮೇಲೆ ಮರ ಉರುಳಿ ನಾಶ ನಷ್ಟ ಉಂಟಾಗಿದೆ. ವೆಳ್ಳರಿ ಕುಂಡು ಬಳಾಲ್ ನಲ್ಲಿ 12 ಕುಟುಂಬ,  ಕಳ್ಳಾರ್ ನಲ್ಲಿ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಮಧುವಾಹಿನಿ , ತೇಜಸ್ವಿನಿ ಹೊಳೆಗಳು ಉಕ್ಕಿ ಹರಿಯುತ್ತಿದೆ. 

ಪಿಲಿಕ್ಕೋಡು ನಲ್ಲಿ 60 ರಷ್ಟು ಮನೆಗಳಿಗೆ ನೀರು ನುಗ್ಗಿದೆ. ಸೋಮವಾರ ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಆರೆಂಜ್ ಅಲರ್ಟ್ ಆಗಿದ್ದು, ಬುಧವಾರ ತನಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

See also  ತಾಲ್ಲೂಕು ಮಟ್ಟದ ಹಾಕಿ: ಮಡಿಕೇರಿ ಸಂತ ಮೈಕಲರ ಕಾಲೇಜ್‍ಗೆ ಗೆಲುವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು