News Kannada
Tuesday, October 04 2022

ಕರ್ನಾಟಕ

ಕಳವಾದ ಶ್ರೀಗಂಧದ ಕೊರಡುಗಳು ಮಸೀದಿ ಆವರಣದಲ್ಲೇ ಪತ್ತೆ - 1 min read

Photo Credit :

ಕಳವಾದ ಶ್ರೀಗಂಧದ ಕೊರಡುಗಳು ಮಸೀದಿ ಆವರಣದಲ್ಲೇ ಪತ್ತೆ

ಕಾಸರಗೋಡು: ಕಳವುಗೈದ ಶ್ರೀಗಂಧ ಮರದ ಕೊರಡುಗಳು ಎರಡು ದಿನಗಳ ಬಳಿಕ ಮಸೀದಿ ಆವರಣದಲ್ಲೇ ಪತ್ತೆಯಾದ  ಘಟನೆ  ಮುಳಿಯಾರಿನ ಬಾವಿಕ್ಕರೆ ಎಂಬಲ್ಲಿ ನಡೆದಿದೆ.

ಶ್ರೀಗಂಧ ಕಳವುಗೈದ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ  ನಡೆಸುತ್ತಿದ್ದಂತೆ ಕಳ್ಳರು  ಕೊರಡುಗಳನ್ನು  ಆವರಣದಲ್ಲಿ ತಂದಿಟ್ಟು ಪರಾರಿಯಾಗಿದ್ದಾರೆ.

ಬಾವಿಕ್ಕರೆ ಜುಮಾ ಮಸೀದಿ ಆವರಣದಲ್ಲಿದ್ದ ಸುಮಾರು 16 ವರ್ಷ ಹಳೆಯ ಮರವನ್ನು ಎರಡು ದಿನಗಳ ಹಿಂದೆ ಕಳವು ಮಾಡಲಾಗಿತ್ತು.

ಆದಿತ್ಯವಾರ ಮಸೀದಿ ಪರಿಸರ ಸ್ವಚ್ಛಗೊಳಿಸಲಾಗಿತ್ತು. ಸೋಮವಾರ ಬೆಳಗ್ಗೆ ಗಮನಿಸಿದಾಗ ಶ್ರೀಗಂಧದ ಮರ ಕಳವು ಮಾಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲಾಗುತ್ತಿತ್ತು.

ಈ ನಡುವೆ ಮಸೀದಿ ಆವರಣದಲ್ಲಿ  ಗೋಣಿ ಚೀಲದಲ್ಲಿ  ಶ್ರೀಗಂಧದ ಕೊರಡು ಪತ್ತೆಯಾಗಿದ್ದು, ಸುಮಾರು 18 ಕಿಲೋ ಶ್ರೀಗಂಧ ಪತ್ತೆಯಾಗಿದೆ.

ಕೃತ್ಯದಿಂದ ಪಾರಾಗಲು  ಆರೋಪಿಗಳು ಈ ತಂತ್ರ ಹೆಣೆದಿರಬಹುದು ಎಂದು ಶಂಕಿಸಲಾಗಿದೆ.

See also  ಲಾರಿ ಡಿಕ್ಕಿ:ಕಲ್ಲಿನ ಕೋರೆಯಲ್ಲಿ ಕಾರ್ಮಿಕ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು