News Kannada
Tuesday, September 27 2022

ಕರ್ನಾಟಕ

ಖಲೀಲ್ ಹತ್ಯೆ ಆರೋಪಿಗಳ ಬಂಧನಕ್ಕೆ ಹೋದ ಪೊಲೀಸರ ಮೇಲೆ ತಲವಾರು ದಾಳಿ - 1 min read

Photo Credit :

ಖಲೀಲ್ ಹತ್ಯೆ ಆರೋಪಿಗಳ ಬಂಧನಕ್ಕೆ ಹೋದ ಪೊಲೀಸರ ಮೇಲೆ ತಲವಾರು ದಾಳಿ

ಬಂಟ್ವಾಳ: ಮೆಲ್ಕಾರ್ ನಲ್ಲಿ ಶುಕ್ರವಾರ ಸಂಜೆ ನಡೆದ ಕೊಲೆ ಪ್ರಕರಣದ ಆರೋಪಿ ಎನ್ನಲಾದ ಖಲೀಲ್ ಮತ್ತು ಆತನ ಜೊತೆ ಇಬ್ಬರು ಆರೋಪಿಗಳು ಬೆಂಗಳೂರು ಕಡೆಗೆ ಹೋಗುತ್ತಿದ್ದ ಮಾಹಿತಿ ಆಧಾರಿಸಿ ಅವರನ್ನು ಬಂಟ್ವಾಳದಿಂದ ಬೆನ್ನಟ್ಟಿ ಬಂಧಿಸಲು ಹೋದ ಪೊಲೀಸರಿಗೆ ಆರೋಪಿಗಳು ತಲವಾರು ದಾಳಿ ನಡೆಸಿದ ಘಟನೆ ಗುಂಡ್ಯದಲ್ಲಿ ಶನಿವಾರ ಮುಂಜಾನೆ ನಡೆದಿದೆ.

ಆರೋಪಿಗಳನ್ನು ಹಿಂಬಾಲಿಸಿದ ಪೊಲೀಸರು ಗುಂಡ್ಯ ತಲುಪಿದಂತೆ ಖಲೀಲ್ ಮತ್ತು ತಂಡ ಪೋಲೀಸರ ಮೇಲೆ ತಲವಾರು ದಾಳಿ ನಡೆಸಿದ್ದಾನೆ. ಆ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್ ಗುಂಡಿನ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ಎಸ್ಐ ಪ್ರಸನ್ನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಕೊಲೆ ಆರೋಪಿ ಖಲೀಲ್ ಗೂ ಗುಂಡಿನ ಗಾಯವಾಗಿದ್ದು ಆಸ್ಪತ್ರೆ ಗೆ ದಾಖಲಿಸಲಾಗಿದೆ.

ಕೊಲೆ ಆರೋಪಿಗಳ ಪತ್ತೆಗೆ ಎಸ್.ಪಿ. ಲಕ್ಷ್ಮೀಪ್ರಸಾದ್ ವಿಶೇಷ ತಂಡ ರಚನೆ ಮಾಡಿದ್ದರು. ಆ ಹಿನ್ನಲೆಯಲ್ಲಿ ನಟೋರಿಯಸ್ ಆರೋಪಿಗಳ ಬಂಧನಕ್ಕೆ ಎಸ್.ಐ.ಅವಿನಾಶ್ ಹಾಗೂ ಪ್ರಸನ್ನ ಆರೋಪಿಗಳ ಪತ್ತೆಗೆ ಮುಂದಾದ ವೇಳೆ ಪೋಲೀಸರ ಮೇಲೆ ದಾಳಿ ಗೆ ಮುಂದಾಗಿದ್ದ ಆರೋಪಿಗಳಿಗೆ ಗುಂಡಿನ ದಾಳಿ ನಡೆಸಿ ಬಂಧನ ನಡೆಸಿದ್ದಾರೆ.

ಆ ವೇಳೆ ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಗುಡ್ಡ ಏರಿ ಓಡಿ ಹೋಗಿ ತಪ್ಪಿಸಿ ಕೊಂಡಿದ್ದಾರೆ. ಉಪ್ಪಿನಂಗಡಿ ಎಸ್.ಐ.ಈರಯ್ಯ ಈತನ ಬಂಧನಕ್ಕೆ ಮುಂದಾಗಿದ್ದಾರೆ.

ಖಲೀಲ್ ವಿರುದ್ಧ ಕೋಮು ಗಲಭೆ ಸಹಿತ ಆನೇಕ ಪ್ರಕರಣಗಳು ದಾಖಲಾಗಿ, ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು ,ಇತ್ತೀಚಿಗೆ ನಡೆದ ರತ್ನಾಕರ ಶೆಟ್ಟಿಯವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಈತನ ಗಡಿಪಾರು ನಡೆದಿತ್ತು.

See also  ಬಿಜೆಪಿ ಕಾರ್ಯಕರ್ತರಿಂದ ಯತ್ನಾಳ್‌ ಕಾರಿಗೆ ಮುತ್ತಿಗೆ ; ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು