News Kannada
Wednesday, October 05 2022

ಕರ್ನಾಟಕ

ಒಳಜಗಳದಿಂದ ಕಾಂಗ್ರೆಸ್ಸಿಗರು ಬೇಸತ್ತಿದ್ದಾರೆ : ನಳಿನ್ ಕುಮಾರ್ ಕಟೀಲ್ - 1 min read

Photo Credit :

ಒಳಜಗಳದಿಂದ ಕಾಂಗ್ರೆಸ್ಸಿಗರು ಬೇಸತ್ತಿದ್ದಾರೆ : ನಳಿನ್ ಕುಮಾರ್ ಕಟೀಲ್

ಮಡಿಕೇರಿ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ, ಕಾಡುಹುಲಿ ಮತ್ತು ಬಂಡೆ ನಡುವಿನ ಒಳಜಗಳದಿಂದ ಬೇಸತ್ತಿರುವ ಅನೇಕ ಕಾಂಗ್ರೆಸ್ಸಿಗರು ಬಿಜೆಪಿಗೆ ಸೇರ್ಪಡೆಗೊಳ್ಳಲು ಒಲವು ತೋರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ತನ್ನನ್ನು ಕಾಡು ಮನುಷ್ಯ ಎಂದು ಟೀಕಿಸಿರುವ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿ ಕಾಡು ಪ್ರಾಣಿಗಿಂತ ಕಾಡು ಮನುಷ್ಯನೇ ವಾಸಿ ಎಂದರು.

ಕಾಡು ಮನುಷ್ಯ ಯಾರಿಗೂ ಹಾನಿಯುಂಟು ಮಾಡುವುದಿಲ್ಲ, ಕಾಡು ಮನುಷ್ಯ ಪರೋಪಕಾರಿ ಆಗಿದ್ದರಿಂದಲೇ ದಕ್ಷಿಣ ಕನ್ನಡದಲ್ಲಿ ಕಳೆದ ಚುನಾವಣೆಯಲ್ಲಿ 2.50 ಲಕ್ಷ ಮತಗಳ ಅಂತರದ ಗೆಲುವು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‍ನಲ್ಲಿ ಒಳಜಗಳ ಹೆಚ್ಚಾಗುತ್ತಲೇ ಇರುವುದರಿಂದ ಅನೇಕ ಶಾಸಕರು ಬಿಜೆಪಿ ಸೇರ್ಪಡೆಗೆ ಒಲವು ತೋರಿದ್ದಾರೆ ಎಂದು ಕಟೀಲ್ ಹೇಳಿದರು. ಡಿ.ಜೆ.ಹಳ್ಳಿ ಗಲಭೆಗೆ ಸಿದ್ದರಾಮಯ್ಯ ಬಣದಲ್ಲಿನ ಅಖಂಡ ಶ್ರೀನಿವಾಸ್ ಮತ್ತು ಡಿ.ಕೆ.ಶಿವಕುಮಾರ್ ಬಣದಲ್ಲಿರುವ ಸಂಪತ್ ರಾಜ್ ಜಗಳವೇ ಕಾರಣ ಎಂಬುದು ಪೆÇಲೀಸ್ ವರದಿಯಿಂದಲೇ ಸ್ಪಷ್ಟವಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿ ಸಂಪೂರ್ಣ ಹಾನಿ ಮಾಡಿದರೂ ಕಾಂಗ್ರೆಸ್ ಮುಖಂಡರು ಘಟನೆಗೆ ಕಾರಣನಾಗಿರುವ ಸಂಪತ್ ರಾಜ್ ಬಗ್ಗೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದ ಕಟೀಲ್, ಇದರಿಂದಾಗಿಯೇ ಕಾಂಗ್ರೆಸ್ ಒಡೆದ ಮನೆಯಂತ್ತಾಗಿದೆ ಎಂದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೂಡ ಡ್ರಗ್ ಮಾಫಿಯಾವಿತ್ತು, ಇದರಿಂದಾಗಿ ಕಾಂಗ್ರೆಸ್ ಸರ್ಕಾರ ಮಾದಕ ಜಾಲವನ್ನು ಮಟ್ಟ ಹಾಕಲು ಮುಂದಾಗಲೇ ಇಲ್ಲ ಎಂದು ಆರೋಪಿಸಿದ ನಳೀನ್ ಕುಮಾರ್ ಕಟೀಲ್, ಬಿಜೆಪಿ ಸರ್ಕಾರ ಡ್ರಗ್ಸ್ ಜಾಲವನ್ನು ನಿಯಂತ್ರಿಸಲು ಪೆÇಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂದು ಹೇಳಿದರು.

ಹಿಂದೂ ಮತ್ತು ಮುಸಲ್ಮಾನರನ್ನು ದೂರ ಮಾಡಲೆಂದೇ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಜಾರಿಗೆ ತಂದರು. ಹಾಗೇ ಲಿಂಗಾಯಿತ, ವೀರಶೈವ ಎಂಬ ಗೊಂದಲ ಸೃಷ್ಟಿಸಿ ಲಿಂಗಾಯತರ ಸಮುದಾಯವನ್ನೂ ಒಡೆದ ಕುಖ್ಯಾತಿ ಸಿದ್ದರಾಮಯ್ಯ ಅವರಿಗೇ ಸಲ್ಲಬೇಕೆಂದು ಕಟೀಲ್ ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಬೆಂಬಲ ನೀಡಿದ 17 ಶಾಸಕರಿಗೂ ಕೊಟ್ಟ ಮಾತಿನಂತೆ ಸೂಕ್ತ ಹುದ್ದೆ ನೀಡಲಾಗಿದೆ. ಇದು ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಎಂಬುದಕ್ಕೆ ನಿದರ್ಶನವಾಗಿದೆ. ಬಿಜೆಪಿಯ ಮುಂದಿನ ಗುರಿ ಜಿಲ್ಲಾ ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ಅಭೂತಪೂರ್ವ ಗೆಲುವಿನ ಮೂಲಕ ಅಧಿಕಾರ ಹಿಡಿಯುವುದಾಗಿದೆ. ಕೊಡಗು ಜಿಲ್ಲೆಯಲ್ಲಿ ಶೇ.80 ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯವ ವಿಶ್ವಾಸ ವ್ಯಕ್ತಪಡಿಸಿದರು. ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್ ಸಂದರ್ಭ ಜಿಲ್ಲೆಯ ಜನಪ್ರತಿನಿಧಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಅಭಿನಂದನೆ ಸಲ್ಲಿಸುವುದಾಗಿ ನಳಿನ್ ಕುಮಾರ್ ಕಟೀಲು ತಿಳಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಕೊಡಗು ಜಿಲ್ಲೆಯ ಎಲ್ಲಾ ಸಮಸ್ಯೆಗಳಿಗೆ ಬಿಜೆಪಿ ಸರಕಾರ ಸೂಕ್ತ ರೀತಿಯ ಸ್ಪಂದನೆ ತೋರಿದೆ. ಹೀಗಾಗಿ ಜನರು ಕೂಡ ಬಿಜೆಪಿಯ ಬಗ್ಗೆ ವಿಶ್ವಾಸ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಯ ಜಮ್ಮಾಬಾಣೆ ಸಮಸ್ಯೆಯನ್ನು ಮೊದಲು ಪರಿಹರಿಸಿದ್ದರು. ಕಂದಾಯ ಸಚಿವರು ಅ.17ರ ಪವಿತ್ರ ದಿನದಂದು ಪೌತಿ ಖಾತೆ ಸಮಸ್ಯೆಗಳನ್ನು ಕೂಡ ಪರಿಹರಿಸುವ ಕುರಿತು ಹೊಸ ಆದೇಶ ನೀಡಿದ್ದಾರೆ.

See also  23ರಿಂದ ಪ್ರೌಢಶಾಲೆಗಳು ಪುನರಾರಂಭ: 15 ದಿನ ಪುನಶ್ಚೇತನ ಚಟುವಟಿಕೆ

ಈ ಬಗ್ಗೆ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಪೌತಿ ಖಾತೆಗಳನ್ನು ಆಯಾ ವಾರಸುದಾರರ ಹೆಸರಿಗೆ ಮಾಡಿಕೊಡಬೇಕಿದೆ.

ಈ ಬಗ್ಗೆ ಕರಪತ್ರವನ್ನು ಹೊರಡಿಸುವ ಮೂಲಕ ಜನರನ್ನು ಜಾಗೃತಿಗೊಳಿಸಲಾಗುತ್ತದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು